ಕಾರ್​ಗೆ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ; ಮೂವರ ದುರ್ಮರಣ, ಆರಕ್ಕೂ ಹೆಚ್ಚು ಮಂದಿ ಗಂಭೀರ

ದಾವಣಗೆರೆ: ಕಾರು ಹಾಗೂ ಕೆಎಸ್​​ಆರ್​ಟಿಸಿ ಬಸ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಕಟ್ಟೆ-ಶಿವಪುರ ಬಳಿ ನಡೆದಿದೆ. ಮೃತ ದುರ್ದೈವಿಗಳನ್ನು ಸೂರಗೊಂಡನಕೊಪ್ಪ ನಿವಾಸಿಗಳಾದ ದೇವರಾಜ್(27), ರಾಕೇಶ್(30) ಹಾಗೂ ಹರಮಘಟ್ಟ ಗ್ರಾಮದ ನಂಜುಂಡಪ್ಪ(83) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಆರಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ನ್ಯಾಮತಿ ಪೊಲೀಸರು ಓಮಿನಿ ಕಾರಿನಲ್ಲಿ ಸೂರಗೊಂಡನಕೊಪ್ಪದಿಂದ ಶಿಕಾರಿಪುರದತ್ತ … Continue reading ಕಾರ್​ಗೆ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ; ಮೂವರ ದುರ್ಮರಣ, ಆರಕ್ಕೂ ಹೆಚ್ಚು ಮಂದಿ ಗಂಭೀರ