ಕಾಲೇಜಿಗೆ ಹೋದ ಇಬ್ಬರು ಅಪ್ರಾಪ್ತೆ, ಕೆಲಸಕ್ಕೆ ತೆರಳಿದ ಸಾಫ್ಟ್​ವೇರ್​ ಕಂಪನಿ ಉದ್ಯೋಗಿ ಮನೆಗೆ ವಾಪಸ್​ ಆಗಲೇ ಇಲ್ಲ

ಸಂಗಾರೆಡ್ಡಿ: ಇಬ್ಬರು ಅಪ್ರಾಪ್ತೆಯರು ಸೇರಿದಂತೆ ಮೂವರು ಹುಡುಗಿಯರು ನಾಪತ್ತೆಯಾಗಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಟಂಚೇರು ಪ್ರದೇಶದಲ್ಲಿ ನಡೆದಿರುವುದಾಗಿ ಬುಧವಾರ ವರದಿಯಾಗಿದೆ.

ಪೊಲೀಸ್​ ಮೂಲಗಳ ಪ್ರಕಾರ ಕಾಣೆಯಾಗಿರುವವರನ್ನು ಅಕುಲ ಸ್ರಾವಂತಿ, ಗಾಯತ್ರಿ ಹಾಗೂ ಶಿವಾನಿ ಎಂದು ಗುರುತಿಸಲಾಗಿದೆ. ಅಪ್ರಾಪ್ತೆಯರಾದ ಅಕುಲ ಮತ್ತು ಗಾಯತ್ರಿ 17 ವರ್ಷದವರಾಗಿದ್ದು, ಶಿವಾನಿ 24 ವರ್ಷದ ಯುವತಿಯಾಗಿದ್ದಾಳೆ.

ಸ್ನೇಹಿತೆಯರಾಗಿರುವ ಅಕುಲ ಮತ್ತು ಶ್ರಾವಂತಿ ತಮ್ಮ ಕಾಲೇಜಿನಿಂದಲೇ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಅಕುಲ ಮತ್ತು ಶ್ರಾವಂತಿ ಇಬ್ಬರು ಸ್ನೇಹಿತೆಯರಾಗಿದ್ದು, ಪಟಂಚೇರಿನ ಮಧ್ಯಂತರ ಸರ್ಕಾರಿ ಜ್ಯೂನಿಯರ್​ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದರು. ಎಂದಿನಂತೆ ಬುಧವಾರ 10 ಗಂಟೆಗೆ ಮನೆಯನ್ನು ಬಿಟ್ಟು ಕಾಲೇಜಿಗೆ ತೆರಳಿದ ಇಬ್ಬರು ಮತ್ತೆ ಮನೆಗೆ ಮರಳಲಿಲ್ಲ. ಬಳಿಕ ಹುಡುಗಿಯ ಕುಟುಂಬದವರು ನಮಗೆ ವಿಷಯ ಮುಟ್ಟಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಸಾಫ್ಟ್​ವೇರ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಶಿವಾನಿ ಬುಧವಾರ ಬೆಳಗ್ಗೆ ರಂಗಾರೆಡ್ಡಿ ಪ್ರದೇಶದಿಂದ ಮನೆ ಬಿಟ್ಟು ಕಚೇರಿಗೆ ತೆರಳಿದಳು. ಆದರೆ, ಆಕೆ ಮತ್ತೆ ವಾಪಸ್​ ಬರಲೇ ಇಲ್ಲ. ಬಳಿಕ ಯುವತಿಯ ಪಾಲಕರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಹೇಳಿದ್ದಾರೆ.

ಯುವತಿಯ ಸ್ನೇಹಿತೆಯನ್ನು ವಿಚಾರಿಸಿದಾಗ ಆಕೆಯನ್ನು ಪಟಂಚೇರು ಪ್ರದೇಶದಲ್ಲಿ ಸಂಜೆ ಡ್ರಾಪ್​ ಮಾಡಿದ್ದಾಗಿ ಹೇಳಿದ್ದು, ಪೊಲೀಸ್​ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)