ರೋಟರಿ ಮೇಳಕ್ಕೆ ಸಂಭ್ರಮದ ತೆರೆ


ಬೀದರ್: ರೋಟರಿ ಕಲ್ಯಾಣ ವಲಯದಿಂದ ನಗರದ ನೆಹರು ಕ್ರೀಡಾಂಗಣ ಹತ್ತಿರದ ಸಾಯಿ ಸ್ಕೂಲ್ ಆವರಣದಲ್ಲಿ ಮೂರು ದಿವಸ ನಡೆದ ಪ್ರಥಮ ರೋಟರಿ ಮೇಳಕ್ಕೆ ಸಂಭ್ರಮದ ತೆರೆ ಬಿದ್ದಿದೆ.

ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬಗಳಿಗೆ ನೆರವು ಮತ್ತು ಮತದಾನ ಜಾಗೃತಿ ಮೂಡಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿತ್ತು. ಮೂರು ದಿನ ಮೇಳದಲ್ಲಿ ಹಾಸ್ಯ ಕಾರ್ಯಕ್ರಮ, ವಿವಿಧ ಆಟೋಟ ಸ್ಪರ್ಧೆ, ಸಂಗೀತ, ಡ್ಯಾನ್ಸ್, ಫಾಸ್ಟ್ ಫುಡ್, ಆಟೋಮೊಬೈಲ್ ಪ್ರದರ್ಶನ, ಉಚಿತ ವೈದ್ಯಕೀಯ ಶಿಬಿರ, ಆಯುರ್ವೇದ ಚಿಕಿತ್ಸೆ ತಪಾಸಣೆ, ಬಿಪಿ, ಶುಗರ್ ಉಚಿತ ಪರೀಕ್ಷೆ ಸೇರಿ ವಿವಿಧ ಕಾರ್ಯಕ್ರಮ ನಡೆದವು.

ಸಮಾರೋಪದಂದು ಹೈದರಾಬಾದ್ನ ಕಲಾವಿದ ಮಾ ಕಾ ಲಾಡಲಾ ಚಿತ್ರದ ನಟ ಫಾರೂಖ್ ಖಾನ್, ನಟಿ ಪ್ರಿಯಾಂಕಾ ದುಬೆ ಹಾಗೂ ಹಾಸ್ಯ ಕಲಾವಿದ ಜಾನಿ ಸಿಂಗರ್ ಮೂಯಿನ್ ಖಾನ್ ಅವರಿಂದ ಮನರಂಜನೆ ಕಾರ್ಯಕ್ರಮ ನಡೆದವು.

ಮೇಳದ ಅಧ್ಯಕ್ಷ ಡೋನಾಲ್ಡ್ ಜಾನ್ಸನ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಅಮೀತ ಅಷ್ಟೂರ್, ಪ್ರಮುಖರಾದ ಬಸವರಾಜ ಧನ್ನೂರ್, ಶಿವಶಂಕರ ಕಾಮಶೆಟ್ಟಿ, ನಾಗೇಂದ್ರ ನಿಟ್ಟೂರೆ, ಜಹೀರ್ ಅನ್ವರ್, ಡಾ. ಶಿವಕುಮಾರ ಎಲಾಲ್, ಡಾ. ಸುಭಾಷ ಬಶೆಟ್ಟಿ ,ಕಾಶಿನಾಥ ಪಾಟೀಲ್, ಪಿ. ಸಿದ್ದಪ್ಪ ಇತರರಿದ್ದರು