3 ಹೊಸ ಕ್ರಿಮಿನಲ್ ಕಾನೂನು; ಬೆಂಗಳೂರು ಪೊಲೀಸರಿಗೆ ತರಬೇತಿ

1 Min Read

ವಿಜಯವಾಣಿ ಸುದ್ದಿಜಾಲ, ಬೆಂಗಳೂರು:
ಜಸ್ಟೀಸ್ ಇಎಸ್ ವೆಂಕಟರಾಮಯ್ಯ ಗ್ಲೋಬಲ್ ಲೀಗಲ್ ಸ್ಕಿಲ್ಸ್ ಅಕಾಡೆಮಿ ವತಿಯಿಂದ ಮೂರು ಹೊಸ ಕ್ರಿಮಿನಲ್ ಕಾನೂನಿನ ಬಗ್ಗೆ ರಾಮಯ್ಯ ಕಾನೂನು ಕಾಲೇಜಿನಿಂದ ಎರಡು ದಿನಗಳ ತರಬೇತಿ ಸೆಷನ್ ಆಯೋಜಿಸಲಾಗಿತ್ತು.
ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಎಂ.ಎನ್. ವೆಂಕಟಾಚಲಯ್ಯ ತರಬೇತಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಇದ್ದರು.
ಮೂರು ಹೊಸ ಕ್ರಿಮಿನಲ್ ಹೊಸ ಕಾನೂನು ಜುಲೈ 1ರಿಂದ ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ ಈ ತರಬೇತಿ ಮಹತ್ವದ್ದಾಗಿತ್ತು. ಡೆಪ್ಯೂಟಿ ಕಮಿಷನರ್ ಆ್ ಪೊಲೀಸ್‌ನಿಂದ ಕಾನ್ಸ್‌ಸ್ಟೇಬಲ್ ತನಕ ವಿವಿಧ ಶ್ರೇಣಿಯ ಹಾಗೂ ಕೇಡರ್‌ಗೆ ಸೇರಿದ 550ರಷ್ಟು ಅಧಿಕಾರಿಗಳು ತರಬೇತಿಯಲ್ಲಿದ್ದರು.
ಗೋಕುಲ ಎಜುಕೇಷನ್ ಫೌಂಡೇಷನ್ ಸಂಸ್ಥೆಯ ಮುಖ್ಯಾಧಿಕಾರಿ ಬಿ.ಎಸ್.ರಾಮಪ್ರಸಾದ್ ಮಾತನಾಡಿ, ರಾಮಯ್ಯ ಕಾನೂನು ಕಾಲೇಜಿನಿಂದ ತೆಗೆದುಕೊಂಡಿರುವ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಮಯ್ಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಉಮಾಮಹೇಶ ಸತ್ಯನಾರಾಯಣ ಅವರು ಮಾತನಾಡಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಲಿಕೆಯ ಬಗ್ಗೆ ಆಸಕ್ತಿಯನ್ನು ತೋರಿಸಿದ ಹಾಗೂ ಭಾಗವಹಿಸಿ, ಸಹಕರಿಸಿದ ಪೊಲೀಸರಿಗೆ ಧನ್ಯವಾದ ಹೇಳಿದರು.
ಶೈಕ್ಷಣಿಕ ವಿಭಾಗದ ಬೋಧಕ ಸಿಬ್ಬಂದಿ ಸಂಯೋಜಕರಾದ ಸಿ. ಪ್ರಣಾಮ್ ಮಾತನಾಡಿ, ಇಂಥ ಇನ್ನಷ್ಟು ಸಹಯೋಗದೊಂದಿಗೆ ಇಂಥ ಕಾರ್ಯಕ್ರಮಗಳ ಬಗ್ಗೆ ಸಂಸ್ಥೆಯ ಬದ್ಧತೆಯನ್ನು ಒತ್ತಿಹೇಳುವ ಪ್ರಯತ್ನವನ್ನು ಮಾಡುವುದಾಗಿ ಭರವಸೆ ನೀಡಿದರು.
ಈಶ್ವರ್ ಎಸ್. ಅಂಟಿನ್. ಡಾ ಎಸ್ ಬಿಎನ್ ಪ್ರಕಾಶ್, ಡಿಆರ್ ವೆಂಕಟಸುದರ್ಶನ್ ಹಾಗೂ ಜತೆಗೆ ಎಲ್ಲ ದಕ್ಷ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಇವರೆಲ್ಲ ಅಕಾಡೆಮಿಗೆ ತಮ್ಮ ಸೇವೆ ದೊರಕಿಸಿಕೊಟ್ಟಿದ್ದು, ಅಧಿಕಾರಿಗಳಿಗೆ ತರಬೇತಿಯನ್ನು ನೀಡಿದರು.
ಕಾನೂನು ವೃತ್ತಿ ಮತ್ತು ಕಾನೂನು ಜಾರಿಯಲ್ಲಿ ತೊಡಗಿಕೊಂಡಂಥವರಿಗೆ ಕೌಶಲವನ್ನು ವೃದ್ಧಿ ಮಾಡುವ ಸಲುವಾಗಿ ಹಾಗೂ ಮೆಗಾವಕಾಶದ ಸಾಧ್ಯತೆ ಮತ್ತು ಗುಣಮಟ್ಟವನ್ನು ನಿರ್ವಹಿಸುವ ಸಲುವಾಗಿ ಜಸ್ಟೀಸ್ ಇಎಸ್ ವೆಂಕಟರಾಮಯ್ಯ ಗ್ಲೋಬಲ್ ಲೀಗಲ್ ಸ್ಕಿಲ್ಸ್ ಅಕಾಡೆಮಿಯನ್ನು 2023ರಲ್ಲಿ ಆರಂಭಿಸಲಾಗಿದೆ.

See also  ಜಿನಿಗಿ ಹಳ್ಳದಲ್ಲಿ ಕರಡಿ ಪ್ರತ್ಯಕ್ಷ
TAGGED:
Share This Article