ಮೂವರ ಬಂಧನ, 9 ಬೈಕ್‌ಗಳ ವಶ

ತಿ.ನರಸೀಪುರ: ವಿವಿಧೆಡೆ ಬೈಕ್‌ಗಳನ್ನು ಕಳ್ಳತನ ಮಾಡಿದ್ದ ಮೂವರು ಕಳ್ಳರನ್ನು ಬಂಧಿಸುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಯ ನಿಂಗ ಅಲಿಯಾಸ್ ನಿಂಗರಾಜು, ಶಿವು ಅಲಿಯಾಸ್ ಶಿವಕುಮಾರ್, ಬನ್ನೂರು ಹೋಬಳಿಯ ಅರವಟ್ಟಿಗೆಕೊಪ್ಪಲು ಗ್ರಾಮದ ಎಸ್.ರಾಮು ಬಂಧಿತರು.
ಆರೋಪಿಗಳು ಬೆಂಗಳೂರು ನಗರ, ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿ, ಕೊಳ್ಳೇಗಾಲ ತಾಲೂಕಿನ ಪಾಳ್ಯ, ಮಳವಳ್ಳಿ ತಾಲೂಕಿನ ಮುತ್ತತ್ತಿ ಗ್ರಾಮಗಳಲ್ಲಿ ಸುಮಾರು 3.5 ಲಕ್ಷ ರೂ. ಮೌಲ್ಯದ 9 ಬೈಕ್‌ಗಳನ್ನು ಕಳ್ಳತನ ಮಾಡಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಎಸ್‌ಪಿ ರಿಷ್ಯಂತ್, ಎಎಸ್‌ಪಿ ಪಿ.ವಿ.ಸ್ನೇಹಾ, ಡಿವೈಎಸ್‌ಪಿ ಮಲ್ಲಿಕ್, ಸಿಪಿಐ ಎಂ.ಆರ್.ಲವ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಅಜರುದ್ದೀನ್, ಎಎಸ್‌ಐ ಶಂಕರಪ್ಪ, ಎಂ.ನಾರಾಯಣ್, ಪಚ್ಚೇಗೌಡ, ವೆಂಕಟೇಶ್, ಲಿಂಗರಾಜು, ದಯಾನಂದ್, ಸಂತೋಷ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *