ಅಕ್ರಮ ಮದ್ಯ ವಿರುದ್ಧ ಧ್ವನಿಯೆತ್ತಿದ್ದಕ್ಕೆ ಶಾಸಕ ಪರಣ್ಣ ಮುನವಳ್ಳಿಗೆ ಬೆದರಿಕೆ ಕರೆ

ಗಂಗಾವತಿ: ಅಕ್ರಮ ಮದ್ಯ ಮಾರಾಟದ ವಿರುದ್ಧ ಧ್ವನಿ ಎತ್ತಿದ್ದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಜೀವ ಬೆದರಿಕೆ ಕರೆ ಬರುತ್ತಿರುವುದಾಗಿ ತಿಳಿದುಬಂದಿದೆ.

ಕೋಬ್ರಾ ಟೀಂ ಎಂದು ಹೇಳಿಕೊಳ್ಳುವ ಮೂಲಕ ಶಾಸಕರಿಗೆ ಕರೆ ಮಾಡಿ ಅಕ್ರಮ ಮದ್ಯ ಮಾರಾಟದ ಕುರಿತು ಧ್ವನಿ ಎತ್ತದಿರುವಂತೆ ಎಚ್ಚರಿಕೆ ನೀಡಿದ್ದಾರೆ. 08497024826 ನಂಬರ್​​ನಿಂದ ಶಾಸಕ ಮುನವಳ್ಳಿಗೆ ಕರೆ ಬರುತ್ತಿದ್ದು, ಅವರ ಮನೆಗೆ 500 ರೂ. ಮುಖಬೆಲೆಯ 4 ಖೋಟಾನೋಟು ಹಾಗೂ ಒಂದು ಪತ್ರವನ್ನು ಅನಾಮಿಕ ವ್ಯಕ್ತಿ ಕೊಟ್ಟು ಹೋಗಿದ್ದಾನೆ ಎನ್ನಲಾಗಿದೆ.

ಗಂಗಾವತಿಯಲ್ಲಿ ಎಂಆರ್​ಪಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟವಾಗುತ್ತಿದ್ದು, ಇದನ್ನು ತಡೆಯಲು ಅಬಕಾರಿ ಇಲಾಖೆಗೆ ಶಾಸಕರು ಪತ್ರ ಬರೆದಿದ್ದರು. ಇದೇ ಕಾರಣಕ್ಕಾಗಿ ಶಾಸಕರಿಗೆ ಬೆದರಿಕೆ ಕರೆ ಬಂದಿರುವ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಮುನವಳ್ಳಿಯವರು ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಈಗಾಗಲೇ ಪೊಲೀಸರು ನಾಲ್ವರನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *