ತಮಿಳುನಾಡು: ಭಾರತೀಯ ಚಲನಚಿತ್ರೋದ್ಯಮದಿಂದ ಪ್ರತಿವಾರ ಸಾಲು ಸಾಲು ಸಿನಿಮಾಗಳು ಚಿತ್ರಮಂದಿಗರಳಿಗೆ ಲಗ್ಗೆಯಿಡುತ್ತಿದ್ದು, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವೇ ಉಣಬಡಿಸಲಾಗುತ್ತಿದೆ. ಪ್ಯಾನ್ ಇಂಡಿಯಾ ಸೇರಿದಂತೆ ಯಾವುದೇ ಜಾನರ್ನ ಚಿತ್ರಗಳು ಥಿಯೇಟರ್ಗೆ ಎಂಟ್ರಿ ಕೊಟ್ಟ ಮೊದಲ ದಿನದ ಮೊದಲನೇ ಶೋ ಮುಗಿದು ಮುಂದಿನ ಆಟ ಆರಂಭ ಆಗುವುದರೊಳಗೆ ಅದು ಹೇಗಿದೆ? ಚೆನ್ನಾಗಿದೆಯೋ ಅಥವಾ ಫ್ಲಾಪ್ ಚಿತ್ರವೋ ಎಂಬುದು ಒಂದೇ ಒಂದು ರಿವ್ಯೂವ್ ಮೂಲಕ ಸ್ಪಷ್ಟವಾಗುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ರಿವ್ಯೂವ್ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಸಿನಿರಸಿಕರ ಬೆರಳಂಚಿಗೆ ಚಿತ್ರ ಹೇಗೆ ಮೂಡಿಬಂದಿದೆ ಎಂಬುದರ ಪೂರ್ಣ ಚಿತ್ರಣವನ್ನೇ ತಮ್ಮ ಚಾನೆಲ್ನಲ್ಲಿ ಕಳಚಿಡುತ್ತಾರೆ.
ಇದನ್ನೂ ಓದಿ: ಸಿನಿಪ್ರೇಮಿಗಳಿಗೆ ಬಂಪರ್ ಆಫರ್: ರಾಷ್ಟ್ರೀಯ ಸಿನಿಮಾ ದಿನ 99ಕ್ಕೆ ಸಿನಿಮಾ ನೋಡುವ ಅವಕಾಶ
ಈ ಸಾಲಿನಲ್ಲಿ ತಮಿಳಿನ ಯೂಟ್ಯೂಬರ್ ಉನ್ನಿಕೃಷ್ಣನ್ ತಮಗೆ ಬೆದರಿಕೆ ಕರೆಯೊಂದು ಬಂದಿದ್ದು, ಅದನ್ನು ರೆಕಾರ್ಡ್ ಮಾಡಿಕೊಳ್ಳುವುದರ ಜತೆಗೆ ತಮ್ಮ ವೀಕ್ಷಕರ ಮುಂದೆ ಬಹಿರಂಗ ಪಡಿಸಿದ್ದಾರೆ. ‘ಉನ್ನಿಸ್ ವ್ಲಾಗ್ ಸಿನೆಫೈಲ್’ ಎಂಬ ಹೆಸರಿನ ಯೂಟ್ಯೂಬರ್ ಉನ್ನಿಕೃಷ್ಣನ್, ಗುರುವಾರ (ಸೆ.19) ತನಗೆ ಬಂದ ಬೆದರಿಕೆ ಕರೆಯನ್ನು ಒಳಗೊಂಡ ವೀಡಿಯೊವನ್ನು ತಮ್ಮ ಚಾನೆಲ್ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವೀಡಿಯೊದಲ್ಲಿ, ಕರೆ ಮಾಡಿದವರು ತನ್ನನ್ನು ಅಬಾಮ್ ಮೂವೀಸ್‌ನ ಚಲನಚಿತ್ರ ನಿರ್ಮಾಪಕ ಅಬ್ರಹಾಂ ಮ್ಯಾಥ್ಯೂ ಎಂದು ಹೇಳಿಕೊಂಡಿರುವುದು ಗೊತ್ತಾಗಿದೆ.
ನಾನು ನಿರ್ಮಾಣದ ಚಿತ್ರದ ವಿಮರ್ಶೆಯನ್ನು ಈ ಕೂಡಲೇ ತೆಗೆದುಹಾಕಬೇಕು. ಒಂದು ಸಿನಿಮಾವನ್ನು ವಿಮರ್ಶೆ ಮಾಡುವ ಹಕ್ಕು ನಿನಗೆ ಯಾರು ಕೊಟ್ಟಿದ್ದು? ತಕ್ಷಣವೇ ಅದನ್ನು ಡಿಲೀಟ್ ಮಾಡು, ಇಲ್ಲದಿದ್ದರೆ ಸರಿಯಾದ ಪರಿಣಾಮ ಎದುರಿಸಲು ರೆಡಿಯಾಗಿರು ಎಂದು ಬೆದರಿಕೆಯೊಡ್ಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ ಯೂಟ್ಯೂಬರ್, ಕರೆ ಮಾಡಿರುವ ನೀವು ಎಲ್ಲಿಂದ ಮಾತನಾಡುತ್ತಿದ್ದೀರಿ ಹಾಗೂ ಯಾರೆಂದು ಸರಿಯಾದ ಮಾಹಿತಿ ಕೊಟ್ಟರೆ ತಕ್ಷಣವೇ ಡಿಲೀಟ್ ಮಾಡ್ತೀನಿ ಎಂದಿದ್ದಾರೆ. ಈ ಮಾತನ್ನು ಕೇಳಿದ ಬಳಿಕ ಇಲ್ಲ, ನಾನ್ಯಾರು ಎಂಬುದನ್ನು ಈಗ ರಿವೀಲ್ ಮಾಡಲು ಸಾಧ್ಯವಿಲ್ಲ ಎಂದು ನಿರ್ಮಾಪಕ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದಾರೆ.
ಇದನ್ನೂ ಓದಿ: ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!
ಸದ್ಯ ಈ ವಿಚಾರ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ನೆಟ್ಟಿಗರು, ಆತನ ಬೆದರಿಕೆ ಕೇಳಿಬಂದ ಬೆನ್ನಲ್ಲೇ ಅವರ ಚಾನೆಲ್ನಿಂದ ವಿಡಿಯೋ ಡಿಲೀಟ್ ಆಗಿದೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).
57ನೇ ವಯಸ್ಸಿಗೆ ಮತ್ತೆ ಮದುವೆ! ವಿಲನ್ ಪಾತ್ರಗಳಿಂದಲೇ ಸಖತ್ ಸದ್ದು ಮಾಡಿದ ಈ ನಟ ಯಾರು ಗೊತ್ತೇ?
ಟೀಮ್ ಇಂಡಿಯಾಗೆ ಕೆ.ಎಲ್. ರಾಹುಲ್ ಸ್ಟೆಪ್ನಿ ಇದ್ದಂತೆ! ಶಾಕಿಂಗ್ ಹೇಳಿಕೆ ಕೊಟ್ಟ ಮಾಜಿ ಹಿರಿಯ ಆಟಗಾರ