ಬೆಂಗಳೂರು: ಕರೊನಾ ಸೋಂಕನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಹಲವರು ತಮ್ಮದೇ ಆದ ರೀತಿಯಲ್ಲಿ ಏನಾದರೂ ಒಂದು ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. ಅದಾಗ್ಯೂ ಕರೊನಾ ನಿಯಂತ್ರಣಕ್ಕೆ ಅಗತ್ಯವಾಗಿ ಅನುಸರಿಸಬೇಕಾದ ಕೋವಿಡ್-19 ಮಾರ್ಗಸೂಚಿಗಳ ಪಾಲನೆ ಆಗುತ್ತಿಲ್ಲ. ಇದನ್ನು ಮನಗಂಡ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಅಭಿಯಾನವೊಂದನ್ನೇ ಆರಂಭಿಸಿದ್ದಾರೆ.
ಯಾವುದೇ ಸಮಸ್ಯೆ ಪರಿಹಾರಕ್ಕೆ ಒಂದು ಸುಲಭದ ಸೂತ್ರವಿದ್ದೇ ಇರುತ್ತದೆ. ಹಾಗೇ ಕೋವಿಡ್ ನಿಯಮ ಪಾಲನೆ ಆಗುತ್ತಿಲ್ಲ ಎಂಬ ಸಮಸ್ಯೆಯನ್ನು ನಿವಾರಿಸಲು ಕೂಡ ಒಂದು ಸೂತ್ರವನ್ನು ಹೇಳಿದ್ದಾರೆ ಬೆಂಗಳೂರಿನ ಪೊಲೀಸ್ ಇನ್ಸ್ಪೆಕ್ಟರ್ ಎಲ್.ವೈ. ರಾಜೇಶ್. ಯಾವುದಾದರೂ ಸಮಸ್ಯೆಯಿಂದ ಕೂದಲೆಳೆಯ ಅಂತರದಲ್ಲಿ ಪಾರಾದರು ಎಂಬಂತೆ ಇವರೂ ಕರೊನಾ ಸೋಂಕಿನಿಂದ ಪಾರಾಗುವ ಒಂದು ಎಳೆಯನ್ನು ತಿಳಿಸಿದ್ದಾರೆ.
ಇದನ್ನೂ ಓದಿ: ‘ನಾಯಿಗೆ ರಕ್ತ ಬೇಕಾಗಿದೆ!’; ಅಪಘಾತಕ್ಕೀಡಾಗಿ ಮೂಳೆ ಮುರಿದ ಶ್ವಾನಕ್ಕೆ ನಡೆಯಲಿದೆ ಸರ್ಜರಿ..
ಕರೊನಾದಿಂದಾಗಿ ಜನರ ಜೀವ-ಜೀವನ ಎರಡೂ ಸಂಕಷ್ಟಕ್ಕೆ ಸಿಲುಕಿದೆ. ಕರೊನಾ ಪೂರ್ತಿಯಾಗಿ ತೊಲಗುವವರೆಗೂ ಈ ಸಂಕಷ್ಟ ತಪ್ಪಿದಲ್ಲ. ಕರೊನಾ ಸೋಂಕನ್ನು ಪೂರ್ತಿಯಾಗಿ ತೊಲಗಿಸಬೇಕೆಂದರೆ ಕೋವಿಡ್ ನಿಯಮವನ್ನು ಸರಿಯಾಗಿ ಪಾಲನೆ ಮಾಡಬೇಕು. ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಸುವುದು ಮುಂತಾದ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಇದು ಸರಿಯಾಗಿ ಪಾಲನೆ ಆಗಬೇಕೆಂದರೆ ನಮಗೆ ಇದು ಪದೇಪದೆ ನೆನಪಾಗುತ್ತಿರಬೇಕು. ಹಾಗೆ ನೆನಪಾಗಲಿ ಎಂದೇ ನಾನು ಈ ದಾರ (ಸೂತ್ರ) ಕಟ್ಟಿಕೊಳ್ಳುತ್ತಿದ್ದೇನೆ. ಕರೊನಾ ಪೂರ್ತಿಯಾಗಿ ತೊಲಗುವವರೆಗೂ ಹೀಗೆ ದಾರವನ್ನು ಕಟ್ಟಿಕೊಳ್ಳುತ್ತಿರುತ್ತೇನೆ. ನೀವೂ ಇದನ್ನು ಅನುಸರಿಸಿ, ಮತ್ತೆ ಮೂವರಿಗೆ ತಿಳಿಸುವ ಮೂಲಕ ಅಭಿಯಾನ ಮುಂದುವರಿಸಿ ಎಂದಿರುವ ಅವರು ಈ ಅಭಿಯಾನವನ್ನು ಥ್ರೆಡ್ ಫಾರ್ ನೇಷನ್ ಎಂಬ ಹೆಸರಲ್ಲಿ ಆರಂಭಿಸಿದ್ದಾರೆ. ಅವರ ಈ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದ್ದು, ನಟರಾದ ಕಿಚ್ಚ ಸುದೀಪ್, ವಸಿಷ್ಠ ಸಿಂಹ, ನಟಿ ಪಾರೂಲ್ ಯಾದವ್ ಮುಂತಾದವರು ಬೆಂಬಲ ಸೂಚಿಸಿದ್ದಾರೆ.
Thanks to Sri @KicchaSudeep for supporting this initiative to fight against Covid-19. #ThreadForNation pic.twitter.com/87ERe9M7hw
— L y Rajesh (@LyRajesh1) June 24, 2021
I support the #ThreadForNation campaign.. an initiative by @LyRajesh1 and team..
ನಮ್ಮ ಆರಕ್ಷಕರ ಮನವಿಗೆ ಸ್ಪಂದಿಸೋಣ, ಸದಾ ಜಾಗರೂಕರಾಗಿ ಬಾಳೋಣ..🙏🏼 pic.twitter.com/lliugbXwJD— Vasishta N Simha (@ImSimhaa) June 24, 2021
ಸೀಟ್ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ
ಕೆಎಸ್ಆರ್ಟಿಸಿ ಬಸ್ನಲ್ಲಿ ಹಾವು!; ಲಾಕ್ಡೌನ್ ಇಫೆಕ್ಟ್, ಚಾಲಕರಲ್ಲಿ ಭಯ…