21 C
Bengaluru
Thursday, January 23, 2020

ಅಪಾರ್ಟ್​ಮೆಂಟ್​ನಲ್ಲಿ ಇದ್ದ ಈ ಶ್ವಾನವೆಂದರೆ ಯಾರಿಗೂ ಆಗುತ್ತಿರಲಿಲ್ಲ, ಹತ್ತಿರವೂ ಬಿಟ್ಟುಕೊಳ್ಳುತ್ತಿರಲಿಲ್ಲ, ಆದರೆ ಇದೊಂದು ಘಟನೆ ಬಳಿಕ ‘ಸಿಂಬಾ’ ಎಲ್ಲರಿಗೂ ಅಚ್ಚುಮೆಚ್ಚು !

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಪಿಟ್​ಬುಲ್​ ಎಂಬುದು ಅಮೆರಿಕನ್ ತಳಿಯ ನಾಯಿ. ಇವು ಅತ್ಯಂತ ಅಪಾಯಕಾರಿ ನಾಯಿಗಳು ಎಂದೇ ಕರೆಸಿಕೊಳ್ಳುತ್ತವೆ. ಅಷ್ಟೇ ಅಲ್ಲ ತುಂಬ ಬಲಶಾಲಿಯೂ ಹೌದು. ಸಾಮಾನ್ಯ ನಾಯಿಗಳಿಗಿಂತ ತುಸು ವಿಶೇಷ ಎನ್ನುವ ಗುಣಗಳನ್ನು ಹೊಂದಿವೆ. ಈಗ ಇದೇ ಪಿಟ್​ಬುಲ್​ ನಾಯಿಗೆ ಸಂಬಂಧಪಟ್ಟು ನಡೆದ ವಿಶೇಷ ಸ್ಟೋರಿ ಇದು.

ಘಟನೆ ನಡೆದದ್ದು ಸ್ವೀಡನ್​ನಲ್ಲಿ. ಅಪಾರ್ಟ್​ಮೆಂಟ್​ವೊಂದರಲ್ಲಿ ವಾಸವಾಗಿದ್ದ ಅರ್ಜನಿತ್ ಮೆಹಾನಾ ಎಂಬುವರು ಪಿಟ್​ಬುಲ್​ ತಳಿಯ ನಾಯಿಯೊಂದನ್ನು ಸಾಕಿ ಅದಕ್ಕೆ ಸಿಂಬಾ ಎಂದು ಹೆಸರಿಟ್ಟಿದ್ದರು. ಆ ನಾಯಿ ಸಿಕ್ಕಾಪಟೆ ಕ್ಯೂಟ್ ಆಗಿತ್ತು. ಆದರೆ ಅಪಾರ್ಟ್​ಮೆಂಟ್​ನಲ್ಲಿದ್ದ ಅನೇಕರು ಆ ನಾಯಿಯ ಬಳಿಯೂ ಸುಳಿಯುತ್ತಿರಲಿಲ್ಲ. ಅದನ್ನು ತಪ್ಪಿಸಿಕೊಂಡೇ ಓಡಾಡುತ್ತಿದ್ದರು. ಇದು ಅರ್ಜನಿತ್ ಅವರಿಗೆ ದೊಡ್ಡ ಪ್ರಶ್ನೆಯಾಗಿತ್ತು. ಸಿಂಬಾ ಎಲ್ಲರೊಂದಿಗೂ ಸ್ನೇಹದಿಂದಲೇ ಇರುತ್ತದೆ ಎಂದು ಅವರು ಹೇಳಿದರೂ ಕೆಲವರು ತಮಗೆ ಆ ನಾಯಿ ಕಂಡರೆ ಭಯವಾಗುತ್ತದೆ ಎಂದು ಹೇಳಿಕೊಂಡು ದೂರವೇ ಉಳಿದಿದ್ದರು. ಅದರಲ್ಲೂ ಅಪಾರ್ಟ್​ಮೆಂಟ್​ನ ನೆರೆಮನೆಯಲ್ಲಿಯೇ ಇದ್ದ ವೃದ್ಧೆಯೋರ್ವರಿಗೆ ಸಿಂಬಾ ನಾಯಿಯನ್ನು ಕಂಡರೇ ಆಗುತ್ತಿರಲಿಲ್ಲ.

ಆದರೆ ಬಳಿಕ ನಡೆದ ಒಂದು ಘಟನೆ ಆ ವಯಸ್ಸಾದ ಮಹಿಳೆಯೂ ಸೇರಿ ಅಪಾರ್ಟ್​ಮೆಂಟ್​ನಲ್ಲಿದ್ದ ಎಲ್ಲರೂ ಪಿಟ್​ಬುಲ್​ನ್ನು ಪ್ರೀತಿಸುವಂತೆ ಮಾಡಿತು. ಅಂದು ಏನು ನಡೆಯಿತು ಎಂಬ ಬಗ್ಗೆ ಅದರ ಮಾಲೀಕರಾದ ಅರ್ಜನಿತ್​ ಸ್ವೀಡನ್​ ಮಾಧ್ಯಮವೊಂದಕ್ಕೆ ವಿವರಿಸಿದ್ದಾರೆ.

‘ಅವತ್ತು ನಾನು ವಾಕಿಂಗ್​ಗೆ ತೆರಳಿದ್ದೆ. ವಾಪಸ್​ ಅಪಾರ್ಟ್​ಮೆಂಟ್​ಗೆ ಬರುತ್ತಿದ್ದಂತೆ ನನ್ನ ಸಿಂಬಾ ವಯಸ್ಸಾದ ಮಹಿಳೆ ವಾಸವಾಗಿದ್ದ ಮನೆಯ ಬಳಿ ನಿಂತು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿತು. ಒಂದೇ ಸಮ ಕೂಗತೊಡಗಿತು. ನಾನು ನಾಯಿಯನ್ನು ಎಳೆದುಕೊಂಡು ಮನೆಗೆ ಹೋಗಲು ಯತ್ನಿಸಿದೆ. ಆದರೆ ಅದು ಬರಲಿಲ್ಲ. ಅಷ್ಟರಲ್ಲಿ ಮನೆಯೊಳಗಿನಿಂದ ನರಳಾಟದ ಶಬ್ದವೊಂದು ಕೇಳಿತು. ಆ ಧ್ವನಿ ಸಹಾಯಕ್ಕಾಗಿ ಯಾಚಿಸುತ್ತಿತ್ತು. ನಾನು ಆತಂಕದಿಂದ ಬಾಗಿಲು ತೆರೆಯಲು ಯತ್ನಿಸಿದೆ. ಆದರೆ ಒಳಗಿನಿಂದ ಲಾಕ್​ ಆಗಿತ್ತು. ಬಳಿಕ ಹೇಗೋ ಬಾಗಿಲು ತೆಗೆದು ಒಳಗೆ ಹೋಗಿ ನೋಡಿದರೆ ಆ ವೃದ್ಧ ಮಹಿಳೆ ನೆಲದ ಮೇಲೆ ಬಿದ್ದಿದ್ದರು. ಅವರ ಸೊಂಟಕ್ಕೆ ಪೆಟ್ಟು ಬಿದ್ದು ಏಳಲೂ ಆಗದೆ ಕಷ್ಟಪಡುತ್ತಿದ್ದರು. ಕೂಡಲೇ ನಾನವರನ್ನು ಆಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ದಾಖಲಿಸಿದೆ. ಈಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿಯನ್ನು ನನಗೆ ತಿಳಿಸಿದ್ದು ನನ್ನ ಸಿಂಬಾ’ ಎಂದು ಅರ್ಜನಿತ್​ ಹೇಳಿದ್ದಾರೆ.

ಈ ಘಟನೆ ನಡೆದ ಬಳಿಕ ವೃದ್ಧೆಗಂತೂ ಸಿಂಬಾ ತುಂಬ ಅಚ್ಚುಮೆಚ್ಚು. ನಾಯಿಯಿಂದಲೇ ನನ್ನ ಜೀವ ಉಳಿಯಿತು. ಇದು ತುಂಬ ಒಳ್ಳೆಯ ನಾಯಿ. ನನ್ನ ನೋವು ಕೇಳಿದ್ದಕ್ಕೆ ಅದಕ್ಕೆ ಧನ್ಯವಾದ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಅಪಾರ್ಟ್​ಮೆಂಟ್​ನ ಎಲ್ಲರೂ ಪಿಟ್​ಬುಲ್​ನ್ನು ಪ್ರೀತಿಸಲು ಶುರು ಮಾಡಿದ್ದಾರೆ ಎಂದು ಮೆಹಾನಾ ಹೆಮ್ಮೆಯಿಂದ ತಿಳಿಸಿದ್ದಾರೆ.
ಇದು ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟೆ ವೈರಲ್​ ಆಗಿದ್ದು ಶ್ವಾನದ ಚುರುಕುತನವನ್ನು ನೆಟ್ಟಿಗರು ಮೆಚ್ಚಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...