ಎರಡಕ್ಕೂ ಹೆಚ್ಚು ಮಕ್ಕಳಿದ್ದವರಿಂದ ಮತದಾನ ಹಕ್ಕು ಕಸಿಯಬೇಕು, ಸರ್ಕಾರಿ ಸೇವೆ ನೀಡಬಾರದು

ದೆಹಲಿ: ದೇಶದ ಜನಸಂಖ್ಯೆ ಜಗತ್ತಿನ ಎಲ್ಲ ರಾಷ್ಟ್ರಗಳನ್ನು ಮೀರಿ ವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಂತ್ರಿಸಲು ಪಾಲಿಸಬೇಕಾದ ಪರಿಹಾರೋಪಾಯಗಳನ್ನು ಯೋಗ ಗುರು ಬಾಬಾ ರಾಮ್​ ದೇವ್​ ನೀಡಿದ್ದಾರೆ.

ಈ ಕುರಿತು ಖಾಸಗಿ ಕಾರ್ಯಕ್ರಮವೊಂದರಲ್ಲಿ ಬುಧವಾರ ಮಾತನಾಡಿರುವ ಅವರು, ” ದೇಶದಲ್ಲಿ ಯಾರೆಲ್ಲ ಇಬ್ಬರಿಗಿಂತಲೂ ಹೆಚ್ಚು ಮಕ್ಕಳನ್ನು ಹೊಂದುವರೋ ಅವರಿಂದ ಮತದಾನದ ಹಕ್ಕನ್ನು ಕಿತ್ತುಕೊಳ್ಳಬೇಕು. ಅಂಥವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು. ಅವರ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಸೀಟು ನೀಡಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ನೀಡಬಾರದು. ಅವರಿಗೆ ಸರ್ಕಾರಿ ನೌಕರಿ ನೀಡಬಾರದು,” ಎಂದು ಪರಿಹಾರ ಕ್ರಮಗಳನ್ನು ಸೂಚಿಸಿದ್ದಾರೆ.

ತಾವು ಹೇಳಿದ ಕ್ರಮಗಳನ್ನು ಕೈಗೊಂಡರೆ ತಾನೇ ತಾನಾಗಿ ಜಸಂಖ್ಯೆ ಇಳಿಮುಖವಾಗಲಿದೆ ಎಂದು ರಾಮ್​ದೇವ್​ ಹೇಳಿದ್ದಾರೆ.

One Reply to “ಎರಡಕ್ಕೂ ಹೆಚ್ಚು ಮಕ್ಕಳಿದ್ದವರಿಂದ ಮತದಾನ ಹಕ್ಕು ಕಸಿಯಬೇಕು, ಸರ್ಕಾರಿ ಸೇವೆ ನೀಡಬಾರದು”

Comments are closed.