ತಮ್ಮ ಬಳಿ ಬಚ್ಚಿಡುವಷ್ಟು ಆಸ್ತಿ ಹೊಂದಿರುವವರು ಮಾತ್ರ ಸಿಬಿಐಗೆ ಹೆದರುತ್ತಾರೆ: ಜೇಟ್ಲಿ

ಭೋಪಾಲ್​: ತಮ್ಮ ಬಳಿ ಬಚ್ಚಿಡಲು ಅಪಾರ ಪ್ರಮಾಣ ಆಸ್ತಿ ಇರುವವರು ಮಾತ್ರ ಸಿಬಿಐಗೆ ಹೆದರುತ್ತಾರೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ತಿಳಿಸಿದ್ದಾರೆ.

ಭೋಪಾಲ್​ನಲ್ಲಿ ಬಿಜೆಪಿ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಆಂಧ್ರ ಪ್ರದೇಶ ಸರ್ಕಾರ ಯಾವುದೋ ಒಂದು ಪ್ರಕರಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆ ಕಾಣುತ್ತಿಲ್ಲ. ಆದರೆ, ಭವಿಷ್ಯದಲ್ಲಿ ದಾಳಿಯಾಗುವ ಸಾಧ್ಯತೆಯಿಂದ ಹೀಗೆ ಮಾಡಿರಬಹುದು. ನಾನು ಈ ವಿಷಯದ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ.

ಭಾರತ ಒಕ್ಕೂಟ ವ್ಯವಸ್ಥೆಯನ್ನು ಹೊಂದಿದೆ. ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಅನ್ನು ಕೇಂದ್ರ ಸರ್ಕಾರಿ ನೌಕರರ ಕುರಿತಾದ ಪ್ರಕರಣಗಳ ತನಿಖೆಗಾಗಿ ರಚಿಸಲಾಗಿತ್ತು. ಆ ನಂತರ ರಾಜ್ಯ ಸರ್ಕಾರ ಮತ್ತು ಕೋರ್ಟ್​ಗಳ ತೀರ್ಮಾನದಂತೆ ಗಂಭೀರ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಲಾಗುತ್ತಿದೆ ಎಂದು ಆಂಧ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. (ಏಜೆನ್ಸೀಸ್​)

ಸಿಬಿಐಗೇ ಸಿಎಂ ನಾಯ್ಡು ಸಡ್ಡು