ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಸಿಎಂ, ಸಚಿವರ ಮಕ್ಕಳೇ ಚುನಾವಣೆಗೆ ನಿಲ್ಲುತ್ತಾರೆ. ಸಾಮಾನ್ಯ ಕುಟುಂಬದಿಂದ ಬಂದವರಿಗೆ ಇವರ ಮಧ್ಯೆ ಹೇಗೆ ಸ್ಫರ್ಧೆ ಮಾಡುವುದು ಎಂದೆನಿಸುತ್ತದೆ. ಆದರೆ, ಎಲ್ಲ ಪಡೆದುಕೊಂಡು ಬಂದಿರುವವರಿಗೆ ಕಷ್ಟ ಎದುರಿಸಿ ಗೆಲ್ಲುವ ಶಕ್ತಿ ಇರುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಯಾವುದೇ ಚುನಾವಣೆಗಳಲ್ಲೂ ಸಿಎಂ, ಸಚಿವರ ಮಕ್ಕಳು ಅಭ್ಯರ್ಥಿಯಾಗಿರುತ್ತಾರೆ. ಇಷ್ಟೆಲ್ಲ ಅನುಕೂಲಗಳಿರುವ ಮಧ್ಯೆ ಸ್ಫರ್ಧೆ ಮಾಡುವುದು ಹೇಗೆ ಎಂದು ಸಾಮಾನ್ಯ ಕುಟುಂಬದಿಂದ ಬಂದಿರುವ ಜನಕ್ಕೆ ಅನ್ನಿಸುತ್ತದೆ. ಆದರೆ, ಎಲ್ಲ ಪಡೆದುಕೊಂಡು ಬಂದಿರುವವರಿಗೆ ಅವರಿಗೆ ಕಷ್ಟ ಎದುರಿಸಿ ಗೆಲ್ಲುವ ಶಕ್ತಿ ಅವರಲ್ಲಿರುವುದಿಲ್ಲ. ಕಷ್ಟ ಎದುರಿಸಿ ಮೇಲೆ ಬಂದಿರುವ ಮಕ್ಕಳು ಏನೇ ಕಷ್ಟ ಬಂದರೂ ಸಾಧಿಸಿ ಗೆಲ್ಲುವ ಛಲ ಅವರಲ್ಲಿರುತ್ತದೆ. ಎಲ್ಲ ಕ್ಷೇತ್ರಗಳಲ್ಲೂ ಇದು ಅನ್ವಯವಾಗುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಸಂಸ್ಥಾನ ಕುಸಿದಿದೆ: ಶನಿವಾರ ನಗರದಲ್ಲಿ ಟಿಪ್ಪು ಸುಲ್ತಾನ್ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಕೃತಿ ಕುರಿತು ಲೇಖಕರು ಕೆಲ ಆಸಕ್ತಿದಾಯಕ ವಿಚಾರ ಹಂಚಿಕೊಂಡಿದ್ದರು. ಬಡತನದಲ್ಲಿದ್ದ ಹೈದರಾಲಿ ಮೈಸೂರು ಮಹಾರಾಜರ ಸೇನೆಯ ಬಹಳ ಮುಖ್ಯ ವ್ಯಕ್ತಿಯಾಗಿ ಬೆಳೆಯುತ್ತಾನೆ. ಆದರೆ, ಈತನ ಪುತ್ರ ಟಿಪ್ಪು ಸುಲ್ತಾನ್ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದಿದ್ದ. ಟಿಪ್ಪು ಸುಲ್ತಾನ್ಗೆ ಪರಿಶ್ರಮದ ಮೇಲೆ ಮೇಲೆ ಬರುವುದು ಹೇಗೆ ಎಂಬುದು ಗೊತ್ತಿರಲಿಲ್ಲ. ಟಿಪ್ಪು ಸುಲ್ತಾನ್ಗೆ ಪರಿಶ್ರಮ ಪಡೆದ ಕೈಗೆ ಬಂದಿರುವ ಸಂಪತ್ತಿನ ಬೆಲೆ ಗೊತ್ತಿರದೇ ಅವನ ಕಾಲದ ಅವಧಿಯಲ್ಲಿ ಅವರ ಸಂಸ್ಥಾನ ಪೂರ್ತಿ ಕುಸಿದು ಬ್ರೀಟಿಷರು ಗೆದ್ದುಕೊಂಡು ಬಿಡುತ್ತಾರೆ ಎಂದು ಸಂಸದರು ಹೇಳಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಮೋ ವಿದ್ಯಾನಿಧಿ ಅನುಕೂಲ:ಸಂಸದ ತೇಜಸ್ವಿ ಸೂರ್ಯ ಬಣ್ಣನೆ