ರಾಮರಾಜ್ಯ ಬೇಕೇಬೇಕು

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಿುಸಿಯೇ ತೀರುವ ಸಂಕಲ್ಪದೊಂದಿಗೆ ದೇಶದ ಹಲವೆಡೆ ಜನಾಗ್ರಹ ರ‍್ಯಾಲಿ ನಡೆಸಿ ಒಗ್ಗಟ್ಟು ಪ್ರದರ್ಶನದ ಜತೆಯಲ್ಲೇ ಹೋರಾಟಕ್ಕೂ ಬಲ ತುಂಬುತ್ತಿರುವ ವಿಶ್ವ ಹಿಂದು ಪರಿಷತ್, ಮಂದಿರ ವಿಚಾರವಾಗಿ ನರೇಂದ್ರ ಮೋದಿ ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ರವಾನಿಸಿದೆ. ರಾಮಮಂದಿರ ನಿರ್ಮಾಣ ಹಾದಿ ಸುಗಮಗೊಳಿಸಲು ಕಾನೂನು ರಚಿಸಬೇಕೆಂಬ ಬೇಡಿಕೆಯನ್ನು ಈಗಾಗಲೇ ಕೇಂದ್ರ ಸರ್ಕಾರದ ಮುಂದಿಟ್ಟಿರುವ ವಿಹಿಂಪ ಸಂಸತ್​ನ ಚಳಿಗಾಲದ ಅಧಿವೇಶನ ಆರಂಭಕ್ಕೆ 2 ದಿನ ಬಾಕಿ ಇರುವಂತೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಲಕ್ಷಾಂತರ ರಾಮಭಕ್ತರೊಂದಿಗೆ ಬೃಹತ್ ರ‍್ಯಾಲಿ ನಡೆಸುವ ಮೂಲಕ ಮಂದಿರ ಕೋರಿಕೆಯನ್ನು ನೆನಪಿಸಿತು.

ಕೇಂದ್ರಕ್ಕೆ ವಿಹಿಂಪ ಸಂದೇಶ

  • ಯಾರು ರಾಮ ಮಂದಿರ ನಿರ್ವಿುಸುವ ಭರವಸೆ ನೀಡಿ ಅಧಿಕಾರದಲ್ಲಿರುವರೋ ಅವರು ಜನರ ಭಾವನೆಗಳನ್ನು ಅರಿತು ಬೇಡಿಕೆ ಈಡೇರಿಸಬೇಕು.
  • ನಾವು ಸರ್ಕಾರವನ್ನು ಒತ್ತಾಯಿಸುತ್ತಿಲ್ಲ. ನಾವು ನಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೇವೆ. ಈ ದೇಶಕ್ಕೆ ರಾಮರಾಜ್ಯ ಬೇಕೇಬೇಕು.

 

ವಿಹಿಂಪ ಕಾರ್ಯತಂತ್ರ

  1. ಮಂಗಳವಾರ ಸಂಸತ್​ನ ಚಳಿಗಾಲದ ಅಧಿವೇಶನ ಆರಂಭವಾಗುತ್ತಿರುವುದರಿಂದ ಮಂದಿರ ನಿರ್ವಣಕ್ಕಾಗಿ ಕಾನೂನು ರಚಿಸಬೇಕೆಂದು ಕೇಂದ್ರದ ಮೇಲೆ ಒತ್ತಡ ತರುವುದು
  2. ಅಯೋಧ್ಯೆ ಸ್ಥಳ ವಿವಾದದ ವಿಚಾರಣೆ ಆರಂಭದ ದಿನಾಂಕವನ್ನು ಸುಪ್ರೀಂ ಜನವರಿಯಲ್ಲೇ ಪ್ರಕಟಿಸುವುದರಿಂದ ಅದಕ್ಕೂ ಮೊದಲೇ ಕಾನೂನಿನ ಬಲ ಪಡೆದುಕೊಳ್ಳುವುದು
  3. ರಾಮಮಂದಿರ ನಿರ್ಮಾಣ ವಿಚಾರವಾಗಿ ಬಿಜೆಪಿ ಜತೆ ಕಾಂಗ್ರೆಸ್ ಬೆಂಬಲವನ್ನೂ ಪಡೆದುಕೊಳ್ಳುವುದು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬೇಡ ಎನ್ನುವವರು ಮುಂದೆ ಬನ್ನಿ. ಮುಂದಿನದನ್ನು ಭಕ್ತರು ನೋಡಿಕೊಳ್ಳುತ್ತಾರೆ.

| ಭಯ್ಯಾಜಿ ಜೋಷಿ, ಆರೆಸ್ಸೆಸ್ ಸರಕಾರ್ಯವಾಹ


ಮಂದಿರಕ್ಕೆ ಹಕ್ಕೊತ್ತಾಯ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ವಿವಿಧ ಹಿಂದು ಸಂಘಟನೆಗಳು ಮತ್ತೊಮ್ಮೆ ಶಕ್ತಿ ಪ್ರದರ್ಶನ ನಡೆಸಿವೆ. ವಿಎಚ್​ಪಿ ನೇತೃತ್ವದಲ್ಲಿ ಒಗ್ಗೂಡಿದ ನೂರಾರು ಸಂಘಟನೆಗಳು, ಕಾರ್ಯಕರ್ತರು ಮಂದಿರ ನಿರ್ವಣಕ್ಕೆ ಕಾಯ್ದೆ ಜಾರಿಗೆ ತರುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು.

ಬೃಹತ್ ‘ಧರ್ಮ ಸಂಸದ್’ ಸಭೆಯಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಸುರೇಶ್ ಭಯ್ಯಾಜಿ ಜೋಶಿ, ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಮಂದಿರ ನಿರ್ವಣಕ್ಕಾಗಿ ನಾವು ಬೇಡುತ್ತಿಲ್ಲ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೇವೆ. ದೇಶಕ್ಕೆ ರಾಮರಾಜ್ಯ ಬೇಕಿದೆ ಎಂದರು. ಇಂದು ಅಧಿಕಾರದಲ್ಲಿರುವವರು ರಾಮ ಮಂದಿರ ನಿರ್ವಣದ ಬಗ್ಗೆ ಈ ಹಿಂದೆ ಭರವಸೆ ಕೊಟ್ಟಿದ್ದರು. ಹಾಗಾಗಿ ಜನರ ಧ್ವನಿಗೆ ಅವರು ಕಿವಿಗೊಡಬೇಕಿದೆ. ಮಂದಿರ ನಿರ್ವಣವಾಗಬೇಕೆಂಬ ನಮ್ಮ ಭಾವನೆಗಳಿಗೆ ಬೆಲೆ ಸಿಗಲೇಬೇಕು ಎಂದು ಅವರು ಹೇಳಿದರು. ಡಿ. 11ರಂದು ಆರಂಭವಾಗುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಕಾನೂನು ಮಾರ್ಗದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನೆರವಾಗುವ ರೀತಿ ವಿಧೇಯಕಮಂಡಿಸಬೇಕು ಎಂದು ಮುಖಂಡರು ಆಗ್ರಹಿಸಿದರು.

ನ. 25ರಂದು ಅಯೋಧ್ಯೆ, ನಾಗ್ಪುರದಲ್ಲಿ ಆಯೋಜಿಸಲಾಗಿದ್ದ ಧರ್ಮ ಸಂಸದ್ ಮತ್ತು ಉಳಿದ ಕಡೆ ನಡೆದ ಜನಾಗ್ರಹ ರ‍್ಯಾಲಿ ಯಲ್ಲಿಯೂ ರಾಮ ಮಂದಿರ ನಿರ್ವಣಕ್ಕೆ ಸುಗ್ರೀವಾಜ್ಞೆ ಹೊರಡಿಸು ವಂತೆ ಒತ್ತಾಯಿಸಲಾಗಿತ್ತು. 1.5 ಲಕ್ಷಕ್ಕೂ ಅಧಿಕ ಜನರು ರ್ಯಾಲಿಯಲ್ಲಿ ಸೇರಿದ್ದರು. ಹಿಂದು ಪರ ಸಂಘಟನೆಗಳ ಅನೇಕ ಮುಖಂಡರು ಭಾಗವಹಿಸಿದ್ದರು.

ವಿಶೇಷ ಭದ್ರತೆ, 210 ಸಿಸಿ ಕ್ಯಾಮರಾ

ಬೃಹತ್ ರ್ಯಾಲಿಗೆ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯಿಂದಲೇ ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದರು. ದೆಹಲಿ ಗೇಟ್ ಮತ್ತು ರಾಜಪಥದ ಕಡೆಗೆ ಸಾಗುವ ಮಾರ್ಗದಲ್ಲಿ ಹೆಚ್ಚುವರಿ 210 ಸಿಸಿಟಿವಿ ಕ್ಯಾಮರಾ, 4 ವಿಶೇಷ ಕಂಟ್ರೋಲ್ ರೂಮ್ ಸ್ಥಾಪನೆ, ಅರೆಸೈನಿಕ ಪಡೆಗಳ ಭದ್ರತೆ ಕಲ್ಪಿಸಲಾಗಿತ್ತು. ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಸಾರ್ವಜನಿಕ ಸಂಚಾರ ಮಾರ್ಗಗಳನ್ನು ಬದಲಿಸಲಾಗಿತ್ತು. ರಾಮಲೀಲಾ ಮೈದಾನದ ಸುತ್ತಲಿನ ಪ್ರದೇಶವನ್ನು 11 ವಲಯಗಳಾಗಿ ವಿಂಗಡಿಸಿ ಹೆಚ್ಚುವರಿ ಡಿಸಿಪಿ ನೇತೃತ್ವದ ತಂಡಗಳನ್ನು ನಿಯೋಜಿಸಲಾಗಿತ್ತು.

ನಮ್ಮ ದೇಶದ ಮೇಲೆ ದಾಳಿ ನಡೆದ ಎಲ್ಲ ಕುರುಹುಗಳನ್ನು ಅಳಿಸಬೇಕು. ಯಾವುದೇ ಧರ್ಮ ಪಾಲಿಸುವವರೊಂದಿಗೆ ನಮ್ಮ ಸಂಘರ್ಷವಿಲ್ಲ. ಒಂದು ವೇಳೆ ಸಂಘರ್ಷ ಮಾಡುವುದೇ ಆಗಿದ್ದರೆ ಇಷ್ಟು ಕಾಯುವ ಅಗತ್ಯವಿರಲಿಲ್ಲ. ಮಂದಿರ ನಿರ್ವಣದಿಂದ ಭವಿಷ್ಯದಲ್ಲಿ ರಾಮರಾಜ್ಯಕ್ಕೆ ಅಡಿಪಾಯವಾಗಲಿದೆ.

| ಸುರೇಶ್ ಭಯ್ಯಾಜಿ ಜೋಶಿ, ಆರ್​ಎಸ್​ಎಸ್ ಸರಕಾರ್ಯವಾಹ

 

ರಾಮ ಮಂದಿರ ನಿರ್ವಣದ ಭರವಸೆ ಪೂರ್ಣಗೊಳಿಸುವವರೆಗೂ ಪ್ರಧಾನಿ ಹುದ್ದೆಯಿಂದ ನರೇಂದ್ರ ಮೋದಿ ಅವರು ನಿರ್ಗಮಿಸಲು ನಾವು ಅವಕಾಶ ಮಾಡಿಕೊಡಬಾರದು.

| ಸ್ವಾಮಿ ಹಂಸದೇವಾಚಾರ್ಯ, ಹರಿದ್ವಾರದ ಧಾರ್ವಿುಕ ಮುಖಂಡ

 

ಸರ್ಕಾರಕ್ಕಿರುವ ಆಯ್ಕೆ

  • ವಿವಾದಿತ ಜಾಗದಲ್ಲೇ ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸುವುದು.
  • ಸಂಸತ್ತಿನಲ್ಲಿ ಮಂದಿರ ನಿರ್ಮಾಣ ಪರವಾಗಿ ವಿಧೇಯಕ ಮಂಡನೆ
  • ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗುವವರೆಗೂ ಕಾಯುವುದು.

Leave a Reply

Your email address will not be published. Required fields are marked *