More

    ಹೆಣ್ಣು ಮಗು ಎಂಬ ಕಾರಣಕ್ಕೆ ಬಿಟ್ಟು ಹೋದ ಗಂಡ: ಮಗಳನ್ನು ಡಾಕ್ಟರ್​ ಮಾಡಲು ರಿಕ್ಷಾ ಚಾಲಕಿಯಾದ ತಾಯಿ

    ಲಖನೌ: ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬ ಮಾತಿದೆ. ತಾಯಿ ತನ್ನ ಮಕ್ಕಳಿಗೋಸ್ಕರ ಜೀವನದಲ್ಲಿ ಎಂಥಾ ಸವಾಲನ್ನು ಬೇಕಾದರೂ ಸ್ವೀಕರಿಸುತ್ತಾರೆ ಎಂಬ ಮಾತಿಗೆ ನಾವು ಹೇಳ ಹೊರಟಿರುವ ಈ ಮಹಿಳೆ ತಾಜಾ ಉದಾಹರಣೆಯಾಗಿದ್ದಾರೆ. ತನ್ನ ಮಗಳನ್ನು ಒಂದು ಉನ್ನತ ಸ್ಥಾನಕ್ಕೆ ಕೊರೆದೊಯ್ಯಬೇಕೆಂಬ ಬಯಕೆಯಿಂದ ಶ್ರಮದ ಹಾದಿಯಲ್ಲಿ ನಿಯತ್ತಿನ ಸಂಪಾದನೆ ಮಾಡುತ್ತಿರುವ ಈ ಮಹಾತಾಯಿ ಎಲ್ಲರಿಗೂ ಸ್ಫೂರ್ತಿ.

    ಅಂದಹಾಗೆ ಆ ಮಹಾತಾಯಿಯ ಹೆಸರು ಗಾಯತ್ರಿ. ವಯಸ್ಸು ಕೇವಲ 35 ವರ್ಷ. ಉತ್ತರ ಪ್ರದೇಶದ ಅಯೋಧ್ಯೆಯ ಜೈನ್​ಪುರದ ಬೀದಿಗಳಲ್ಲಿ ಆಟೋ ರಿಕ್ಷಾ ಓಡಿಸುವುದು ಇವರ ನಿತ್ಯದ ಕಾಯಕವಾಗಿದೆ. ಈ ಕೆಲಸ ಗಾಯತ್ರಿ ಅವರ ಆಯ್ಕೆಯಲ್ಲ. ಅನಿವಾರ್ಯವಾಗಿ ಈ ಕೆಲಸ ಮಾಡಬೇಕಿದೆ. ಏಕೆಂದರೆ, ಆಕೆಗೆ ಒಂದು ಕನಸಿದೆ. ಆ ಕನಸು ಯಾವುದೆಂದರೆ, ತನ್ನ ಮಗಳು ಶ್ರೇಯಾಳನ್ನು ಡಾಕ್ಟರ್​ ಮಾಡಬೇಕೆಂಬುದು.

    ಗಾಯತ್ರಿ ಹದಿಹರೆಯದಲ್ಲಿ ವಿವಾಹವಾದರು. ಗಾಯತ್ರಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಆಕೆಯ ಪತಿ ಅವಳನ್ನು ಒಂಟಿಯಾಗಿ ಬಿಟ್ಟ ಹೊರಟು ಹೋದನು. ಆದರೂ ತನ್ನ ಒಂಟಿತನಕ್ಕೆ ತಲೆಕೆಡಿಸಿಕೊಳ್ಳದ ಗಾಯತ್ರಿ, ಭರವಸೆಯನ್ನು ಎಂದಿಗೂ ಕಳೆದುಕೊಳ್ಳದೆ, ಮಗಳನ್ನು ಡಾಕ್ಟರ್​ ಮಾಡಬೇಕೆಂಬ ಬಯಕೆಯಿಂದಲೇ ಆಕೆಯನ್ನು ಚೆನ್ನಾಗಿ ಬೆಳೆಸುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಜನ್ಮ ನೀಡುವುದು ಶಾಪವಲ್ಲ. ತನ್ನ ಕಾಲ ಮೇಲೆ ತಾನು ನಿಲ್ಲಲು ಹೆಣ್ಣು ಸರ್ವಶಕ್ತಳು ಎಂಬುದನ್ನು ಸಾಬೀತು ಮಾಡುವ ಭರವಸೆಯನ್ನು ಗಾಯತ್ರಿ ಹೊಂದಿದ್ದಾರೆ.

    ಆಟೋ ರಿಕ್ಷಾ ಓಡಿಸುವುದು ಗಾಯತ್ರಿಯ ಮೊದಲ ಆಯ್ಕೆಯಾಗಿರಲಿಲ್ಲ. ಪತಿ ಹೋದ ನಂತರ ಗಾಯತ್ರಿ, ಶ್ರೇಯಾಳನ್ನು ತನ್ನ ಸಹೋದರಿಯ ಮನೆಯಲ್ಲಿ ಬಿಟ್ಟು ಹಲವಾರು ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ಹೋಗಿದ್ದಳು. ಆದರೆ ಮಗಳ ವಿದ್ಯಾಭ್ಯಾಸಕ್ಕೆ ಸಂಬಳ ಸಾಕಾಗುತ್ತಿರಲಿಲ್ಲ. ಆಗ ಗಾಯತ್ರಿ ಅವರ ತಾಯಿ ಮಧ್ಯಪ್ರವೇಶಿಸಿದರು ಮತ್ತು ಡ್ರೈವಿಂಗ್ ಮಾಡಲು ಆಕೆಗೆ ಸಲಹೆ ನೀಡಿದರು. ಬಳಿಕ ಇ-ರಿಕ್ಷಾವನ್ನು ಖರೀದಿಸಿದ ಗಾಯತ್ರಿ, ಉತ್ತಮ ಹಣ ಗಳಿಕೆ ಮಾಡಲು ಶುರು ಮಾಡಿದರು.

    ಖಾಸಗಿ ಕಂಪನಿ ಉದ್ಯೋಗಗಳಲ್ಲಿ ನನ್ನನ್ನು ಸಾಕಷ್ಟು ಶೋಷಣೆ ಮಾಡಲಾಯಿತು. ಎಲ್ಲ ಕಂಪನಿಗಳೂ ನನ್ನನ್ನು 10 ರಿಂದ 12 ಗಂಟೆ ದುಡಿಸಿದವು. ಆದರೆ, ಸಂಬಳ ಮಾತ್ರ ಕಡಿಮೆ ಇತ್ತು. ಮಗಳ ವೈದ್ಯಕೀಯ ವ್ಯಾಸಂಗ ದುಬಾರಿಯಾಗಿದ್ದು, ನೌಕರಿಯೊಂದಿಗೆ ಶ್ರೇಯಾಳನ್ನು ವೈದ್ಯಳಾಗಿಸುವ ನನ್ನ ಕನಸನ್ನು ನನಸು ಮಾಡಲು ಸಾಧ್ಯವಾಗಲಿಲ್ಲ ಎಂದು ಅಂದುಕೊಂಡೆ. ಆಗ ನನ್ನ ತಾಯಿಯ ಸಲಹೆಯನ್ನು ಕೇಳಿದೆ ಮತ್ತು ಇ-ರಿಕ್ಷಾ ಓಡಿಸಲು ನಿರ್ಧರಿಸಿದೆ ಎಂದು ಗಾಯತ್ರಿ ಹೆಮ್ಮೆಯಿಂದ ಹೇಳಿದರು.

    ಸಮಾಜದಲ್ಲಿ ತನ್ನನ್ನು ಸ್ವೀಕರಿಸಿದ ರೀತಿಯ ಬಗ್ಗೆ ಮಾತನಾಡಿದ ಗಾಯತ್ರಿ, ಅಯೋಧ್ಯೆಗೆ ಭೇಟಿ ನೀಡಲು ಬರುವ ಪ್ರವಾಸಿಗರು ಸಾಮಾನ್ಯವಾಗಿ ನನ್ನ ರಿಕ್ಷಾದಲ್ಲಿ ಕುಳಿತುಕೊಳ್ಳಲು ಬಯಸುವುದಿಲ್ಲ. ಆದರೆ ಜೈನಪುರ ಮತ್ತು ಅಯೋಧ್ಯೆಯ ಜನರು ತುಂಬಾ ಸಹಕಾರಿ. ಅವರು ನನ್ನನ್ನು ಆಟೋ ರಿಕ್ಷಾ ಚಾಲಕಿಯಾಗಿ ಸ್ವೀಕರಿಸಿದ್ದಾರೆ ಎಂದು ಗಾಯತ್ರಿ ಹೇಳಿದರು.

    ನನ್ನ ತಾಯಿ ತುಂಬಾ ಕಷ್ಟಪಡುತ್ತಿದ್ದಾರೆ. ಅವಳಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಮತ್ತು ನನ್ನ ಅಧ್ಯಯನಕ್ಕೆ ಸಹಕಾರಿಯಾಲು ನಾನು ಪಾರ್ಟ್‌ಟೈಮ್ ಕೆಲಸ ಮಾಡಲು ಮುಂದಾದೆ, ಆದರೆ ನನ್ನ ತಾಯಿ ಅದಕ್ಕೆ ಒಪ್ಪಲಿಲ್ಲ. ಅಧ್ಯಯನದ ಮೇಲೆ ಮಾತ್ರ ಕೇಂದ್ರೀಕರಿಸಲು ಹೇಳಿದ್ದಾಳೆ. ತಾಯಿಯ ಕನಸನ್ನು ನನ್ನ ಕನಸಾಗಿಸಿಕೊಂಡಿದ್ದೇನೆ ಎಂದು ಶ್ರೇಯಾ ಹೇಳಿದರು.

    ಇಂಟರ್‌ಮೀಡಿಯೇಟ್ ಪರೀಕ್ಷೆಗೆ ಕೇವಲ ಒಂದು ವರ್ಷ ಬಾಕಿ ಇರುವಾಗ, ಶ್ರೇಯಾ ಶೀಘ್ರದಲ್ಲೇ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಅರ್ಹತೆ ಪಡೆಯುವ ಭರವಸೆ ಹೊಂದಿದ್ದಾರೆ. (ಏಜೆನ್ಸೀಸ್​)

    ವಿಷ್ಣು ಸ್ಮಾರಕ ಉದ್ಘಾಟನೆ: ಬೆಂಗಳೂರಿಂದ ಮೈಸೂರಿನವರೆಗೆ 1000 ರಥಯಾತ್ರೆ, ದಾರಿಯುದ್ದಕ್ಕೂ ಕಟೌಟ್ ಜಾತ್ರೆ

    ಹೃದಯಾಘಾತದಿಂದ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಮಂದೀಪ್​ ರಾಯ್ ವಿಧಿವಶ

    ಮೂವರು ಮಕ್ಕಳ ಸಮೇತ ಸಂಪ್​ಗೆ ಬಿದ್ದು ಸಾವಿಗೆ ಶರಣಾದ ಮಹಿಳೆ: ವಿಜಯಪುರದಲ್ಲಿ ಹೃದಯವಿದ್ರಾವಕ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts