More

  ಎಕ್ಸ್​ಪ್ರೆಸ್​ನಂತೆ ಚಲಿಸುತ್ತಿದೆ ಈ ರೈಲ್ವೆ ಸ್ಟಾಕ್​ ಬೆಲೆ: 400 ರೂಪಾಯಿ ಗಡಿ ದಾಟಿ ದಾಖಲೆ

  ಮುಂಬೈ: ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ಷೇರುಗಳು ಸೋಮವಾರ ಗಮನಸೆಳೆದಿದ್ದು, ಈ ಸ್ಟಾಕ್​ಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ.

  ಸೋಮವಾರದ ಇಂಟ್ರಾಡೇ ವಹಿವಾಟಿನಲ್ಲಿ RVNL ಷೇರುಗಳ ಬೆಲೆ 11.3% ರಷ್ಟು ಏರಿಕೆಯಾಗಿ ಮೊದಲ ಬಾರಿಗೆ 400 ರೂಪಾಯಿಯ ಗಡಿ ದಾಟಿ ರೂ. 424.95 ತಲುಪಿತು. ಇದು ಈ ಷೇರಿನ ಗರಿಷ್ಠ ಬೆಲೆಯಾಗಿದೆ.

  ಷೇರುಗಳಲ್ಲಿನ ಈ ದಾಖಲೆಯ ಏರಿಕೆಯ ನಂತರ, ಕಂಪನಿಯ ಮಾರುಕಟ್ಟೆ ಮೌಲ್ಯವು ರೂ. 85,000 ಕೋಟಿಗೆ ತಲುಪಿತು. ಎಕ್ಸಿಟ್ ಪೋಲ್‌ಗಳ ಫಲಿತಾಂಶವೇ ಷೇರುಗಳ ಏರಿಕೆಗೆ ಕಾರಣ. ವಾಸ್ತವವಾಗಿ, ಮತಗಟ್ಟೆ ಸಮೀಕ್ಷೆಗಳ ಪ್ರಕಾರ ನರೇಂದ್ರ ಮೋದಿ ಮೂರನೇ ಬಾರಿಗೆ ಹ್ಯಾಟ್ರಿಕ್‌ ಬಾರಿಸುವ ಲಕ್ಷಣ ಕಾಣುತ್ತಿದೆ.

  ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ಪಿಎಸ್‌ಯು (ಸರ್ಕಾರಿ ಕಂಪನಿ) ಸ್ಟಾಕ್ ಆಗಿದ್ದು, ಕಳೆದ 12 ತಿಂಗಳುಗಳಲ್ಲಿ ಉತ್ತಮ ಕಾರ್ಯಕ್ಷಮತೆ ತೋರಿದೆ. ಈ ಸ್ಟಾಕ್ 12 ತಿಂಗಳಲ್ಲಿ 250% ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿದೆ.


  ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ, ಇಬಿಐಟಿಡಿಎ, ಪಿಎಟಿ ಕ್ರಮವಾಗಿ ವರ್ಷದಿಂದ ವರ್ಷಕ್ಕೆ 17%, 22% ಮತ್ತು 33% ರಷ್ಟು ಬೆಳೆದಿದೆ. ತ್ರೈಮಾಸಿಕ ಅಂತ್ಯದ ವೇಳೆಗೆ ಈ ಕಂಪನಿಯ ಆರ್ಡರ್ ಬುಕ್ ಅಂದಾಜು ರೂ. 85,000 ಕೋಟಿಯಷ್ಟಿದೆ. 2025 ರ ಹಣಕಾಸು ವರ್ಷದಲ್ಲಿ ಕಂಪನಿಯ ಆರ್ಡರ್ ಒಳಹರಿವು ರೂ. 20,000- 25,000 ಕೋಟಿ ವ್ಯಾಪ್ತಿಯಲ್ಲಿರಬಹುದು ಎಂದು ಅಂದಾಜಿಸಲಾಗಿದೆ.

  ಸರ್ಕಾರವು ಕಳೆದ ವರ್ಷ ಜುಲೈನಲ್ಲಿ ಆರ್‌ವಿಎನ್‌ಎಲ್‌ನಲ್ಲಿನ ತನ್ನ 5.4% ಪಾಲನ್ನು ಪ್ರತಿ ಷೇರಿಗೆ ರೂ. 119 ರಂತೆ ಮಾರಾಟ ಮಾಡಿತ್ತು. ಸ್ಟಾಕ್ ಈ ಮಟ್ಟದಿಂದ ಮೂರು ಪಟ್ಟು ಹೆಚ್ಚಾಗಿದೆ. ಸರ್ಕಾರವು RVNL ನಲ್ಲಿ ಇನ್ನೂ 72.84% ಪಾಲನ್ನು ಹೊಂದಿದೆ.

  See also  'ಮಾರ್ಟಿನ್' ನಲ್ಲಿ ಹೇಗಿರಲಿದೆ ನಟ ಧ್ರುವ ಸರ್ಜಾ ಲುಕ್? ಪೋಟೋ ವೈರಲ್!

  ಸರ್ಕಾರಿ ಕಂಪನಿಗಳ ಷೇರುಗಳ ಬೆಲೆ ಒಂದೇ ದಿನದಲ್ಲಿ ಶೇಕಡಾ 12ರಷ್ಟು ಏರಿಕೆಯಾಗಿದ್ದೇಕೆ?

  1 ಲಕ್ಷವಾಯ್ತು 22 ಲಕ್ಷ: ಹೂಡಿಕೆದಾರರಿಗೆ ಬಂಪರ್​ ಲಾಭ ನೀಡಿದ ಅದಾನಿ ಕಂಪನಿ ಷೇರು ಯಾವುದು ಗೊತ್ತೆ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts