ವಾಚಾಳಿ ಕೆಂದಲೆ ಗಿಳಿ

ವಾಚಾಳಿ ಕೆಂದಲೆ ಗಿಳಿವೈವಿಧ್ಯಮಯ ಸಿಳ್ಳೆ ಹಾಗೂ ಮನುಷ್ಯ ಭಾಷೆಯನ್ನು ಅನುಕರಿಸುವ ಸಾಮರ್ಥ್ಯದಿಂದ ಪಂಜರದಲ್ಲಿ ಸಾಕಲ್ಪಡುವ ಕೆಂದಲೆಗಿಣಿಗಳು ಮಹಾ ವಾಚಾಳಿಗಳು. ಗುಂಪಿನಲ್ಲಿದ್ದಾಗಲಂತೂ ಸದಾ ಲೊಚಗುಡುವ ಈ ಗಿಳಿಗಳಲ್ಲಿ ಕೆಂಪುತಲೆಯಿರುವವು ಗಂಡಾದರೆ ಬೂದುಬಣ್ಣದ ತಲೆಯನ್ನು ಹೊಂದಿರುವವು ಹೆಣ್ಣು.

ಮೈಪೂರ್ತಿ ಹಸಿರು ಕತ್ತಿನ ಬಳಿ ಪುಟ್ಟ ಕಪ್ಪುಬಣ್ಣದ ಹಾಗೂ ಭುಜದ ಬಳಿ ಕೆಂಪುಬಣ್ಣದ ಪಟ್ಟಿಯನ್ನು ಹೊಂದಿರುವ ಈ ಪಕ್ಷಿಗಳ ಬಾಲದ ತುದಿ ನೀಲಿ ಮತ್ತು ಹಸಿರುಬಣ್ಣಗಳನ್ನು ಹೊಂದಿವೆ. ಕೇವಲ ಭಾರತ ಭೂಖಂಡದಲ್ಲಷ್ಟೇ ಕಂಡುಬರುವ ಈ ಪಕ್ಷಿಗಳಲ್ಲಿ ಪ್ರಾದೇಶಿಕವಾಗಿ ಸ್ವಲ್ಪ ಮೈಬಣ್ಣದಲ್ಲಿ ವ್ಯತ್ಯಾಸವನ್ನು ಗುರುತಿಸಲಾಗಿದೆ. ಈ ಕಾರಣದಿಂದ ಇವುಗಳಲ್ಲಿ ಎರಡು ಪ್ರಜಾತಿಗಳಿವೆಯೆಂಬ ವಾದವೂ ಪಕ್ಷಿತಜ್ಞರಲ್ಲಿದೆ.

ಶೈಶವಾವಸ್ಥೆಯಲ್ಲಿ ಹಸಿರುತಲೆಯನ್ನು ಹೊಂದಿರುವ ಹೆಣ್ಣು ಮತ್ತು ಗಂಡಿನಲ್ಲಿ ಕಾಲಕ್ರಮೇಣ ಬಣ್ಣಗಳ ಬದಲಾವಣೆ ಕಂಡುಬರುತ್ತದೆ. ಹಣ್ಣುಗಳು , ಕೆಲಜಾತಿಯ ಹೂಗಳು ಮತ್ತು ಕಾಳು ಇವುಗಳ ಪ್ರಮುಖ ಆಹಾರ. ಹೀಗಾಗಿ ಗುಂಪಿನಲ್ಲಿ ಗದ್ದೆ , ತೋಟಗಳಿಗೆ ಲಗ್ಗೆಯಿಟ್ಟು ರೈತರಿಗೆ ಮಂಡೆಬಿಸಿಮಾಡುವುದೂ ಹೌದು. ಡಿಸೆಂಬರ್​ನಿಂದ ಏಪ್ರಿಲ್​ವರೆಗೆ ಈ ಗಿಳಿಗಳಿಗೆ ವಂಶಾಭಿವೃದ್ಧಿಯ ಸಮಯ .

ಹೆಣ್ಣು ಮತ್ತು ಗಂಡು ಪಕ್ಷಿಗಳು ಜತೆಗೂಡಿ ಮರದಲ್ಲಿ ತಮ್ಮ ಕೊಕ್ಕಿನಿಂದ ರಂಧ್ರವನ್ನು ಕೊರೆದು ಅಲ್ಲಿ ಗೂಡನ್ನು ನಿರ್ವಿುಸುತ್ತವೆ. ಅಲ್ಲಿ ನಾಲ್ಕರಿಂದ ಆರು ಮೊಟ್ಟೆಯನ್ನಿಡುವ ಹೆಣ್ಣು ಕಾವುಕೊಟ್ಟು ಮರಿಮಾಡುತ್ತದೆ. ಈ ಕೆಂದಲೆಗಿಣಿಗಳು ನಮ್ಮಲ್ಲಿನ ಮೂಲನಿವಾಸಿಗಳಾದರೂ ಇಲ್ಲಿಂದ ಪಂಜರದಲ್ಲಿ ಸಾಕಲು ಪಾಶ್ಚಾತ್ಯದೇಶಗಳಿಗೆ ಕೊಂಡೊಯ್ದಾಗ ಅಲ್ಲಿನ ಹವಾಮಾನಕ್ಕೂ ಒಗ್ಗಿಕೊಳ್ಳುವ ಸಾಮರ್ಥ್ಯವಿರುವುದನ್ನು ಗಮನಿಸಲಾಗಿದೆ.

Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…