More

    VIDEO | ವಿಶೇಷ ಸಾಮರ್ಥ್ಯವುಳ್ಳ ಸ್ನೇಹಿತನೂ ಪಠಾಣ್ ಸಿನಿಮಾ ವೀಕ್ಷಿಸಲಿ ಎಂದು ಬೆನ್ನ ಮೇಲೆ ಕುಳ್ಳಿರಿಸಿ ಕರೆತಂದ ಶಾರುಖ್ ಅಭಿಮಾನಿ!

    ನವದೆಹಲಿ: ನಾಲ್ಕು ವರ್ಷಗಳ ನಂತರ ತೆರೆಮೇಲೆ ಬಂದಿರುವ ಶಾರುಖ್​ ಅಭಿನಯದ ಪಠಾಣ್ ಸಿನಿಮಾ ಒಳ್ಳೆಯ ಪ್ರದರ್ಶನವನ್ನೇ ಕಾಣುತ್ತಿದೆ. ವಿಶ್ವದಾದ್ಯಂತ ಇರುವ ಶಾರುಖ್ ಅಭಿಮಾನಿಗಳು ಸಿನಿಮಾ ವೀಕ್ಷಿಸಿ, ಎಂಜಾಯ್ ಮಾಡಿದ್ದಾರೆ. ಈ ಸಿನಿಮಾ ಈಗಾಗಲೇ 200 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ.

    ಪಠಾಣ್ ಸಿನಿಮಾ ಮೂಲಕ ಶಾರುಖ್ ಖಾನ್ ಕಂಬ್ಯಾಕ್ ಮಾಡುತ್ತಾರೆ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ ಅವರ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದರು. ಹೀಗಾಗಿ ಅದ್ಧೂರಿಯಾಗಿ ಸಿನಿಮಾ ಬಿಡುಗಡೆಗೆ ಸಿದ್ಧತೆಯನ್ನೂ ಮಾಡಿದ್ದರು. ಸಿನಿಮಾ ಬಿಡುಗಡೆಯಾದಾಗಿನಿಂದಲೂ ಅವರ ಅಭಿಮಾನಿಗಳು ಸಾಲು ಸಾಲಾಗಿ ಹೋಗಿ, ಸಿನಿಮಾ ನೋಡಿ ಬರುತ್ತಿದ್ದಾರೆ. ಶಾರುಖ್​ ಖಾನ್​ಗೆ ವಿಶ್ವದೆಲ್ಲೆಡೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ.

    ಇದೀಗ ವ್ಯಕ್ತಿಯೊಬ್ಬ ವಿಶೇಷ ಸಾಮರ್ಥ್ಯವುಳ್ಳ ಸ್ನೇಹಿತನಿಗೆ ಪಠಾಣ್ ಸಿನಿಮಾ ತೋರಿಸಲೆಂದು ತನ್ನ ಬೆನ್ನ ಮೇಲೆ ಕೂರಿಸಿ ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗಿದ್ದಾನೆ. ಶಾರುಖ್ ಅಭಿಮಾನಿ ತನ್ನ ಸ್ನೇಹಿತನೂ ಸಿನಿಮಾ ನೋಡಬೇಕೆಂದು ಬಯಸಿದ್ದಾರೆ. ಆದರೆ ಆತ ವಿಶೇಷ ಸಾಮರ್ಥ್ಯವುಳ್ಳವನಾಗಿದ್ದ. ಹೀಗಾಗಿ ಎಲ್ಲರಂತೆ ನಡೆದುಕೊಂಡು ಚಿತ್ರಮಂದಿರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ತನ್ನ ಬೆನ್ನೆ ಮೇಲೆ ಕುಳ್ಳಿರಿಸಿಕೊಂಡು ಬಂದಿದ್ದಾನೆ ಇದರಿಂದಾಗಿ ವಿಶೇಷ ಚೇತನ ಅಭಿಮಾನಿ ಪಠಾಣ್ ಸಿನಿಮಾ ನೋಡುವಂತಾಗಿದೆ.

    ಸದ್ಯ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನು ಬೆನ್ನ ಮೇಲೆ ಕುಳ್ಳಿರಿಸಿ ಪಠಾಣ್ ಸಿನಿಮಾಗೆ ಕರೆತರುತ್ತಿರುವ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಪಠಾಣ್ ಸಿನಿಮಾ ಅಭಿಮಾನಿಗಳಲ್ಲಿ ಯಾವ ರೀತಿಯ ಕ್ರೇಜ್ ಹುಟ್ಟಿಸಿದೆ ಎಂಬಿದಕ್ಕೆ ಈ ವಿಡಿಯೋ ಸಾಕ್ಷಿಯೆಂಬತಿದೆ ಎಂಬ ಕಮೆಂಟ್​ಗಳು ಟ್ವಿಟರ್​ನಲ್ಲಿ ಬರುತ್ತಿವೆ. ವರದಿಯ ಪ್ರಕಾರ ಈತ ತನ್ನ ಸ್ನೇಹಿತನನ್ನು ಬಿಹಾರದಿಂದ ಪಶ್ಚಿಮ ಬಂಗಾಳಕ್ಕೆ ಕರೆತಂದಿದ್ದಾನೆ ಎನ್ನಲಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts