Actress Namitha : ಒಂದು ಕಾಲದಲ್ಲಿ ಪಡ್ಡೆ ಹುಡುಗರ ಫೇವರಿಟ್ ನಟಿಯಾಗಿದ್ದ ನಮಿತಾ ಬಗ್ಗೆ ಖ್ಯಾತ ನಿರ್ದೇಶಕ ಸುಂದರ್. ಸಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸುಂದರ್. ಸಿ ಅವರು ಖ್ಯಾತ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಅವರ ಪತಿ ಎಂಬುದು ಎಲ್ಲರಿಗೂ ತಿಳಿದೇ ಇದೆ. ಸುಂದರ್ ಅವರು ಮಾರು ಮಾಮನ್ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಸ್ಟಾರ್ ನಟರೊಂದಿಗೆ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದು, ಅವರನ್ನು ತಮಿಳು ಚಿತ್ರರಂಗದ ಸ್ಟಾರ್ ನಿರ್ದೇಶಕರನ್ನಾಗಿ ಮಾಡಿದೆ.
ನಿರ್ದೇಶನವನ್ನು ಸ್ವಲ್ಪ ಕಾಲ ಬದಿಗಿಟ್ಟು ನಟಿಸಲು ಆರಂಭಿಸಿದಾಗ ಎದುರಿಸಿದ ಸವಾಲುಗಳ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಸುಂದರ್ ಅವರು ಮಾತನಾಡಿದ್ದಾರೆ. ತಮ್ಮ ಜೊತೆಯಲ್ಲಿ ನಟಿಸಿದ ನಟಿಯರಲ್ಲಿ ಸ್ನೇಹಾ ಅವರ ನೆಚ್ಚಿನ ನಟಿಯಾದರೆ, ಎಂದಿಗೂ ಮರೆಯಲಾಗದ ನಟಿ ನಮಿತಾ ಎಂದಿದ್ದಾರೆ. ಅಲ್ಲದೆ, ಅದಕ್ಕೆ ಕಾರಣವನ್ನೂ ಸುಂದರ್ ವಿವರಿಸಿದ್ದಾರೆ.
ನನಗೆ ಡಾನ್ಸ್ ಮಾಡೋದೇ ಗೊತ್ತಿಲ್ಲ. ಆದರೆ, ಪ್ರತಿ ಚಿತ್ರದಲ್ಲೂ ನನ್ನನ್ನು ಕುಣಿಯುವಂತೆ ಮಾಡುತ್ತಾರೆ. ಅಷ್ಟೇ ಅಲ್ಲ, ಪ್ರತಿ ಡಾನ್ಸ್ ಮಾಸ್ಟರ್ ನನಗೆ ಯಾವಾಗಲೂ ನಾಯಕಿಯರ ಜತೆ ಕುಣಿಯುವ ಡಾನ್ಸ್ ಮಾಡಿಸುತ್ತಾರೆ. ಮಧ್ಯವಯಸ್ಕ ನಾಯಕಿಯಾದರೇ ಪರವಾಗಿಲ್ಲ. ಆದರೆ, ನಮಿತಾಳನ್ನು ಭುಜದ ಮೇಲೆ ಹೊತ್ತುಕೊಂಡು ಕುಣಿಯಬೇಕಾದರೆ ಸ್ವಲ್ಪ ಕಷ್ಟವಾಯಿತು. ನಮಿತಾಳನ್ನು ಭುಜದ ಮೇಲೆ ಹೊರಲು ನಾನು ಸಾಕಷ್ಟು ಅಭ್ಯಾಸ ಮಾಡಿದ್ದೇ. ಹೀಗಾಗಿಯೇ ನಾನು ಎಂದಿಗೂ ನಮಿತಾರನ್ನು ಮರೆಯುವುದಿಲ್ಲ. ಅಲ್ಲದೆ, ಡಾನ್ಸ್ ಮಾಡಿದ ಆ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಮತ್ತೊಬ್ಬ ನಿರ್ದೇಶಕರ ಜತೆಗಿನ ಸಿನಿಮಾದಲ್ಲಿ ನನ್ನಿಂದ ಡಾನ್ಸ್ ಮಾಡಲು ಆಗುವುದಿಲ್ಲ. ಹೀಗಾಗಿಯೇ ನಾನು ನಟನೆ ನಿಲ್ಲಸಿದೆ ಎಂದು ಸುಂದರ್ ಸಿ ಹೇಳಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗುತ್ತಿದೆ.
ನಮಿತಾ ( Actress Namitha ) ಕನ್ನಡಿಗರಿಗೂ ಪರಿಚಿತ
ಅಂದಹಾಗೆ ನಟಿ ನಮಿತಾ ಅವರನ್ನು ಕನ್ನಡಿಗರಿಗೆ ಹೆಚ್ಚು ಪರಿಚಯಿಸುವ ಅಗತ್ಯವಿಲ್ಲ. ಏಕೆಂದರೆ, ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ನೀಲಕಂಠ ಸಿನಿಮಾ ಮೂಲಕ ನಮಿತಾ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಮೊದಲ ಕನ್ನಡ ಸಿನಿಮಾದಲ್ಲೇ ತಮ್ಮ ಬೋಲ್ಡ್ ಅವತಾರ ಮೂಲಕ ಸದ್ದು ಮಾಡಿದರು. “ಅಮ್ಮಮ್ಮಮ್ಮೋ ವಯ್ಯಾರಮ್ಮಮ್ಮಮ್ಮೋ” ಹಾಡು ಇಂದಿಗೂ ಸಂಗೀತ ಪ್ರಿಯರ ಮನದಲ್ಲಿ ಮನೆ ಮಾಡಿದೆ. ನೀಲಕಂಠ ಬಳಿಕ ನಮಿತಾ, ಸ್ಟಾರ್ ನಟ ದರ್ಶನ್ ಜತೆಗೆ ಇಂದ್ರ ಸಿನಿಮಾದಲ್ಲಿ ಅಭಿನಯಿಸಿದರು. ಈ ಸಿನಿಮಾ ಗುಮ್ ಗುಮ್ ಗುಮ್ತಾನೆ ಮತ್ತು ನಿನ್ನಾಣೆ ನಿನ್ನಾಣೆ ಪ್ರೀತಿ ದೇವತೆ ನಿನ್ನಾಣೆ ಹಾಡು ಸಿಕ್ಕಾಪಟ್ಟೆ ಹಿಟ್ ಆಯಿತು. ಇದಿಷ್ಟೇ ಅಲ್ಲದೆ, ‘ಹೂ’ ಸಿನಿಮಾದಲ್ಲಿ ಮತ್ತೆ ರವಿಚಂದ್ರನ್ ಜತೆಯಾದರು. ಬೆಂಕಿ ಬಿರುಗಾಳಿ ನಮಿತಾ ನಟನೆಯ ಕೊನೆಯ ಕನ್ನಡ ಸಿನಿಮಾ ಆಗಿದೆ. ನಟಿಸಿದ್ದು ನಾಲ್ಕೇ ಸಿನಿಮಾವಾದರೂ ಕನ್ನಡಿಗರ ಮನದಲ್ಲೂ ನಮಿತಾ ಮನೆ ಮಾಡಿದ್ದಾರೆ. ತಮ್ಮ ಬೋಲ್ಡ್ ಪಾತ್ರಗಳಿಂದಲೇ ಹೆಚ್ಚು ಸುದ್ದಿ ಮಾಡಿದ ನಮಿತಾ ಒಂದು ಕಾಲದಲ್ಲಿ ಪಡ್ಡೆ ಹುಡುಗರ ಫೇವರಿಟ್ ಆಗಿದ್ದರು.
ಗುಜರಾತ್ ಮೂಲದ ನಮಿತಾ ಆರಂಭದಲ್ಲಿ ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ನಮಿತಾ ಸೊಂಟಂ ಹೆಸರಿನ ತೆಲುಗು ಸಿನಿಮಾಕ್ಕೆ ಮೊದಲು ಬಣ್ಣ ಹಚ್ಚಿದರು. ಸಾಕಷ್ಟು ತಮಿಳು ಸಿನಿಮಾಗಳಲ್ಲಿ ನಟಿಸಿರುವ ನಮಿತಾ, ಮಲಯಾಳಂ, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಆದರೆ, ಸಿನಿಮಾ ಅವಕಾಶಗಳು ಕಡಿಮೆಯಾದಾಗ ದಿಢೀರನೇ ತೂಕ ಹೆಚ್ಚಿಸಿಕೊಂಡ ನಮಿತಾ ಕೆಲವು ಐಟಂ ಸಾಂಗ್ಗಳಿಯೂ ಕಾಣಿಸಿಕೊಂಡರು.
ಸಿನಿಮಾ ಅವಕಾಶ ಸಂಪೂರ್ಣ ನಿಂತಾಗ ಕಿರುತೆರೆ ಕಡೆ ಮುಖ ಮಾಡಿದ ನಮಿತಾ, ಕಾವಂದೆ ಮಯಿಲಾಡ ಕಾರ್ಯಕ್ರಮದ ಜಡ್ಜ್ ಆಗಿ ಅನೇಕ ವರ್ಷಗಳವರೆಗೆ ಶೋ ನಡೆಸಿಕೊಟ್ಟರು. ತಮಿಳು ಬಿಗ್ಬಾಸ್ ಸೀಸನ್ 1ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ನಮಿತಾ 28 ದಿನಕ್ಕೆ ಮನೆಯಿಂದ ಹೊರಬಂದರು. ಹೀಗೆ ಬಣ್ಣದ ಜಗತ್ತಿನೊಂದಿಗೆ ನಂಟು ಬೆಳೆಸಿಕೊಂಡಿದ್ದ ನಮಿತಾ, ನಿರ್ಮಾಪಕ ವೀರೇಂದ್ರ ಚೌಧರಿ ಎಂಬುವರನ್ನು ಪ್ರೀತಿಸಿ 2017ರಲ್ಲಿ ಮದುವೆ ಮಾಡಿಕೊಂಡರು. ದಂಪತಿಗೆ ಅವಳಿ ಮಕ್ಕಳಿದ್ದಾರೆ. (ಏಜೆನ್ಸೀಸ್)
30 ವರ್ಷಗಳ ಬಳಿಕ ಶನಿ-ಬುಧ ಗ್ರಹ ಸಂಯೋಗ… ಈ 3 ರಾಶಿಯವರಿಗೆ 2025ರಲ್ಲಿ ಅದೃಷ್ಟವೋ ಅದೃಷ್ಟ! HOROSCOPE 2025