ನಡೆದಿದ್ದು ಸಣ್ಣ ಜಗಳವಷ್ಟೇ, ಈಗ ಸರಿಯಾಗಿದೆ, ಬಿರ್ಯಾನಿ ಊಟ ಮಾಡಿದ್ದಾರೆ: ಶಾಸಕ ಜಮೀರ್​ ಅಹಮದ್​

ಬೆಂಗಳೂರು: ಶಾಸಕರ ಮಧ್ಯ ಸಣ್ಣಪುಟ್ಟ ಜಗಳವಾಗಿದೆ. ಸ್ನೇಹಿತ ಮಧ್ಯ ಇದೆಲ್ಲ ಸಾಮಾನ್ಯ. ಮಧ್ಯಾಹ್ನ ಬಿರಿಯಾನಿ ಊಟ ಮಾಡಿದ್ದಾರೆ ಎಂದು ಶಾಸಕ ಜಮೀರ್​ ಅಹಮ್ಮದ್​ ಹೇಳಿದರು.

ಶಾಸಕ ಆನಂದ್​ ಸಿಂಗ್​ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟು ಪ್ರತಿಕ್ರಿಯೆ ನೀಡಿದ ಅವರು, ಗಣೇಶ್​, ಆನಂದ್​ಸಿಂಗ್​, ಭೀಮಾನಾಯ್ಕ್​ ಎಲ್ಲ ಸ್ನೇಹಿತರು. ಏನೋ ಸಣ್ಣ ಏಟು ಬಿದ್ದಿದೆ. ಆಪರೇಷನ್​ ಕಮಲದ ವಿಚಾರವಾಗಿ ಆದ ಜಗಳವಲ್ಲ. ಈಗ ಎಲ್ಲ ಸರಿಯಾಗಿದೆ. ಸ್ನೇಹಿತರ ಮಧ್ಯ ಜಗಳ, ಕಿತ್ತಾಟಗಳೆಲ್ಲ ಸಹಜವಲ್ಲವಾ ಎಂದರು.

ಆನಂದ್​ಸಿಂಗ್​ಗೆ 14-15ಕಡೆ ಹೊಲಿಗೆ ಹಾಕಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಮಾಡಿದ್ದು ಸುಳ್ಳು. ಆನಂದ್​ ಸಿಂಗ್​ ಆರಾಮಾಗಿದ್ದಾರೆ. ನಾಳೆ ಬೆಳಗ್ಗೆ ಡಿಸ್​ಚಾರ್ಜ್​ ಆಗಬಹುದು ಎಂದು ತಿಳಿಸಿದರು.