ಬೆಂಗಳೂರು: ನಾಗಮಂಗಲ ಗಲಭೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಳಿಸಬೇಕು ಎಂದು ಬೆಂಗಳೂರಿನ ಟೌನ್ ಹಾಲ್ ಮುಂದೆ ನಿನ್ನೆ (ಸೆ.13) ಗಣಪತಿ ಮೂರ್ತಿಯನ್ನು ಹೊತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ ಹಲವು ಹಿಂದೂ ಸಂಘಟನೆಗಳು, ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ವೇಳೆ ಹಿಂದೂ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು, ಗಣಪನನ್ನು ಬಂಧಿಸಿ, ವ್ಯಾನ್ನೊಳಗೆ ಕೂರಿಸಿದರು. ಇದು ಅನೇಕರ ಅಸಮಾಧಾನಕ್ಕೆ ಕಾರಣವಾಯಿತು. ಸದ್ಯ ಈ ವಿಷಯವನ್ನು ಖಂಡಿಸಿ ಮಾತನಾಡಿರುವ ವಿಪಕ್ಷ ನಾಯಕ ಆರ್. ಅಶೋಕ, ವಿನಾಶಕಾಲೇ ವಿಪರೀತ ಬುದ್ಧಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕಾಳು ಮೆಣಸಿನ ಶೀಘ್ರ ಸೊರಗು ರೋಗದ ನಿರ್ವಹಣೆ
“ಕಡುಬು, ಮೋದಕ ಇಟ್ಟು ನೈವೇದ್ಯ ಮಾಡಬೇಕಾದ ಕೈಗಳಿಗೆ ಸಂಕೋಲೆ ತೊಡಿಸಿದೆ ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ. ಭಕ್ತರ ಜಯಘೋಷ, ಮಂಗಳ ವಾದ್ಯಗಳ ಮಧ್ಯೆ ಭವ್ಯವಾದ ಮೆರವಣಿಗೆಯಲ್ಲಿ ಸಾಗಬೇಕಾದ ಗಣೇಶನನ್ನ ಪೊಲೀಸ್ ವ್ಯಾನ್ ಹತ್ತಿಸಿದೆ ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ” ಎಂದು ಆಕ್ರೋಶ ಹೊರಹಾಕಿದ್ದಾರೆ.
“ದೀಪ ಆರುವುದಕ್ಕೂ ಮುಂಚೆ ಜೋರಾಗಿ ಉರಿಯುತ್ತದೆ ಎಂಬ ಮಾತಿದೆ. ಹಾಗೆಯೇ ಈ ಧರ್ಮದ್ರೋಹಿ ಕಾಂಗ್ರೆಸ್ ಸರ್ಕಾರ ಸರ್ವನಾಶವಾಗುವ ದಿನ ದೂರವಿಲ್ಲ ಎಂಬ ಎಲ್ಲ ಲಕ್ಷಣಗಳೂ ಸುಸ್ಪಷ್ಟವಾಗಿ ಗೋಚರಿಸುತ್ತಿವೆ” ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ ಗರಂ ಆಗಿದ್ದಾರೆ.
‘ರನ್ ಮಷಿನ್’ ಮೇಲೆ ಮುಂಬೈ ಇಂಡಿಯನ್ಸ್ ಕಣ್ಣು! ಈ 3 ಕಾರಣಗಳ ಹಿಂದೆ ಕ್ಯಾಪ್ಟನ್ ಹಾರ್ದಿಕ್ ಓಟ