ಕಳೆದ ವರ್ಷಕ್ಕೂ ಈ ಸೀಸನ್​ಗೂ ಇದೇ ದೊಡ್ಡ ವ್ಯತ್ಯಾಸ! MI ಗೆಲುವಿಗೆ ಕಾರಣ ತಿಳಿಸಿದ ಗವಾಸ್ಕರ್​ | Hardik Pandya

Hardik Pandya: ಇಂದಿನಿಂದ ಐಪಿಎಲ್​ 18ನೇ ಆವೃತ್ತಿ ಪುನಾರಂಭಗೊಳ್ಳಲಿದ್ದು, ಮೊದಲ ಪಂದ್ಯ ಆರ್​ಸಿಬಿ ಮತ್ತು ಕೆಕೆಆರ್ ನಡುವೆ ನಡೆಯಲಿದೆ. ಭಾರತ-ಪಾಕ್ ಘರ್ಷಣೆಯಿಂದ ರದ್ದಾಗಿದ್ದ ಐಪಿಎಲ್ ಟೂರ್ನಿ,​ ಇಲ್ಲಿಗೆ ಮುಗಿಯಿತು ಎಂದೇ ಕ್ರಿಕೆಟ್ ಪ್ರಿಯರು ಭಾವಿಸಿದ್ದರು. ಆದರೆ, ಇದಕ್ಕೆ ಗೆಲುವಿನ ಮೂಲಕ ಪೂರ್ಣವಿರಾಮ ಘೋಷಿಸಲು ನಿರ್ಧರಿಸಿದ ಬಿಸಿಸಿಐ, ಇದೀಗ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿರುವುದು ಐಪಿಎಲ್ ಫ್ಯಾನ್ಸ್​ಗಳಲ್ಲಿ ಉತ್ಸಾಹ ಹೆಚ್ಚಿಸಿದೆ.

ಇದನ್ನೂ ಓದಿ: ಚಿನ್ನಕ್ಕೆ ಹೆಚ್ಚಿದ ಬೇಡಿಕೆ​! ದೇಶದ ಪ್ರಮುಖ ನಗರಗಳಲ್ಲಿ ಇಂದು ಗೋಲ್ಡ್​ ಬೆಲೆ ಎಷ್ಟಾಗಿದೆ? ಇಲ್ಲಿದೆ ನೋಡಿ ಪಟ್ಟಿ | Gold Rates

ಪ್ರಸ್ತುತ ಐಪಿಎಲ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್​, 18ನೇ ಆವೃತ್ತಿಯಲ್ಲಿ ಅದ್ಭುತ ಕಮ್​ಬ್ಯಾಕ್ ಮಾಡಿದೆ. ಟೂರ್ನಿಯ ಆರಂಭದಲ್ಲಿ ಸರಣಿ ಸೋಲಿನಿಂದ ಕಂಗೆಟ್ಟಿದ್ದ ಎಂ ತಂಡ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಸತತ ಗೆಲುವಿನ ಮೂಲಕ ಇದೀಗ ಪ್ಲೇಆಫ್​ಗೆ ಎರಡೇ ಹೆಜ್ಜೆಗಳಿಂದ ದೂರ ಉಳಿದಿದೆ. ಈ ಮಧ್ಯೆ ಟೀಮ್ ಇಂಡಿಯಾ ದಿಗ್ಗಜ, ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್​ ಮಾತನಾಡಿ, ಮುಂಬೈ ಗೆಲುವಿನ ಹಿಂದಿರುವ ಕಾರಣ ಬಹಿರಂಗಪಡಿಸಿದ್ದಾರೆ.

ಈ ಸೀಸನ್​ ಮುಂಬೈ ಇಂಡಿಯನ್ಸ್ ಭರ್ಜರಿ ಕಮ್​ಬ್ಯಾಕ್ ಮಾಡಿದೆ. ಹಾರ್ದಿಕ್ ಸಾಕಷ್ಟು ಕಲಿತಿದ್ದಾರೆ. ತಮ್ಮ ತಂಡದ ಸದಸ್ಯರು ಮಿಸ್​ಫೀಲ್ಡ್ ಮತ್ತು ಕ್ಯಾಚ್ ಬಿಟ್ಟಾಗಲೂ ಬೇಸರಗೊಳ್ಳದ ಪಾಂಡ್ಯ, ಎಲ್ಲಿಯೂ ಭಾವನೆಯನ್ನು ಬಿಟ್ಟುಕೊಟ್ಟಿಲ್ಲ. ಕ್ಯಾಪ್ಟನ್ ಆಗಿ ಆಟಗಾರರ ಮೇಲೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದರೆ, ಅದು ಆಟಗಾರರ ಮೇಲೆ ಮಾತ್ರವಲ್ಲದೇ ಪಂದ್ಯದ ಮೇಲೂ ಪ್ರಭಾವ ಬೀರುತ್ತದೆ. ಆದರೆ, ಹಾರ್ದಿಕ್ ಆ ರೀತಿ ಎಲ್ಲಿಯೂ ನಡೆದುಕೊಂಡಿಲ್ಲ. ಇದು ಅವರ ಅದ್ಭುತ ಗೆಲುವಿಗೆ ಒಂದು ಕಾರಣ ಎಂದರು.

ಇದನ್ನೂ ಓದಿ: ಕೆಲವೇ ಗಂಟೆಗಳಲ್ಲಿ ಮೊಬೈಲ್​ ಬ್ಯಾಟರಿ​ ಖಾಲಿಯಾಗ್ತಿದ್ಯಾ? ಹಾಗಿದ್ರೆ ಈಗಲೇ ಈ ಸೆಟ್ಟಿಂಗ್​ಗಳನ್ನು ಆಫ್​ ಮಾಡಿ! | Battery Drain

“ಈ ಬಾರಿಯ ಐಪಿಎಲ್​ನಲ್ಲಿ ಹಾರ್ದಿಕ್‌ಗೆ ಅಭಿಮಾನಿಗಳಿಂದ ಉತ್ತಮ ಬೆಂಬಲ ಸಿಕ್ಕಿದೆ. ಆದರೆ, ಕಳೆದ ವರ್ಷ ಕ್ರಿಕೆಟ್ ಪ್ರಿಯರು ಮತ್ತು ಅಭಿಮಾನಿಗಳು ಅವರನ್ನು ಬೆಂಬಲಿಸಲಿಲ್ಲ. ಇದು ಪಾಂಡ್ಯ ಮನಸ್ಥಿತಿಯನ್ನು ಕುಗ್ಗಿಸಿತ್ತು. ಆದರೆ, ಈ ವರ್ಷ ಪರಿಸ್ಥಿತಿ ಬದಲಾಗಿದೆ. ಅಭಿಮಾನಿಗಳ ಸಂಪೂರ್ಣ ಬೆಂಬಲ ಹಾರ್ದಿಕ್​ಗೆ ಲಭಿಸಿದೆ. ಅಂತೆಯೇ, ಹಾರ್ದಿಕ್​ ಕೂಡ ತಮ್ಮ ಬ್ಯಾಟ್​ ಮತ್ತು ಬೌಲಿಂಗ್​ನಿಂದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಫ್ಯಾನ್ಸ್ ಕೂಡ ಈ ಬಾರಿ ಮುಂಬೈ ಟ್ರೋಫಿ ಗೆಲ್ಲಲಿ ಎಂದು ಆಶಿಸಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ,(ಏಜೆನ್ಸೀಸ್).

40 ಲಕ್ಷ ರೂ. ಜಮೀನು, 100 ಗ್ರಾಂ ಚಿನ್ನ! ಷರತ್ತಿಗೆ ಒಪ್ಪಿದ್ದರೂ ಹೀಗೇಕೆ ಆಯಿತು? ವಧು ಕಂಗಾಲು | Marriage

Share This Article

ಮಳೆ ಬಂದಾಗ ಸ್ನಾನ ಮಾಡುವುದು ಅಪಾಯಕಾರಿ! ಮೊದಲು ಈ ಕುರಿತು ತಿಳಿದುಕೊಳ್ಳಿ… lifestyle

lifestyle : ಮಳೆ ಬಂದಾಗ   ಗುಡುಗು ಮತ್ತು ಮಿಂಚಿನೊಂದಿಗೆ ಬಂದರೆ, ನಾವು ಜಾಗರೂಕರಾಗಿರಬೇಕು. ಮಳೆ ಬರುತ್ತಿರುವಾಗ…

ಮಳೆಗಾಲದಲ್ಲಿ ಪಪ್ಪಾಯಿ ಉತ್ತಮ; ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲ ಪ್ರಯೋಜನ ಗೊತ್ತೇ? ಇಲ್ಲಿದೆ ಮಾಹಿತಿ | Papaya

Papaya Benefits: ನಾವು ತಿನ್ನುವ ಹಣ್ಣುಗಳಲ್ಲಿ ಪಪ್ಪಾಯಿ ಕೂಡ ಬಹಳ ವಿಶೇಷವಾದುದು. ಈ ಹಣ್ಣಿನ ಬಗ್ಗೆ…