ಕೊಲ್ಕತ್ತ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಹಾಗೂ ಹತ್ಯೆ ಘಟನೆಯ ತನಿಖೆ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಅಫ್ಸರ್ ಅಲಿ ಖಾನ್ ಹಾಗೂ ಬಿಪ್ಲಬ್ ಸಿಂಗ್ ಮತ್ತು ಸುಮನ್ ಹಜ್ರಾರನ್ನು ಸಿಬಿಐ ಅಧಿಕಾರಿಗಳು ಅರೆಸ್ಟ್ ಮಾಡಿ, ತನಿಖೆಗೆ ಒಳಪಡಿಸಿದರು. ಸದ್ಯ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತಷ್ಟು ಚುರುಕುಗೊಳಿಸುವ ಮೂಲಕ ಮಗಳನ್ನು ಕಳೆದುಕೊಂಡ ಪೋಷಕರಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದೆ. ಆದ್ರೆ, ಇದೀಗ ಮೃತ ಟ್ರೈನಿ ವೈದ್ಯೆ ಪೋಷಕರ ಆರೋಪಗಳು ನೇರವಾಗಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕೇಳಿಬಂದಿದ್ದು, ಭಾರೀ ಅನುಮಾನ ಭುಗಿಲೆದ್ದಿದೆ.
ಇದನ್ನೂ ಓದಿ: ಅರೆಭಾಷೆ ಬೆಳೆಸಲು ವೈಜ್ಞಾನಿಕ ಕ್ರಮ ಅಗತ್ಯ
ಕೋಲ್ಕತ್ತ ಪೊಲೀಸರು ಪೋಷಕರಿಗೆ ಲಂಚ ಕೊಡಲು ಮುಂದಾಗಿದ್ದರು ಎಂಬ ಆರೋಪವನ್ನು ತಳ್ಳಿಹಾಕಿದ ಬ್ಯಾನರ್ಜಿ, ಇದೆಲ್ಲವೂ ನಮ್ಮ ಸರ್ಕಾರದ ವಿರುದ್ಧ ಮಾಡುತ್ತಿರುವ ತಪ್ಪು ಆರೋಪಗಳು ಎಂದು ಯುವತಿಯ ತಾಯಿ ಹೇಳಿಕೆಗೆ ತಿರುಗೇಟು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಟ್ರೈನಿ ವೈದ್ಯೆಯ ತಾಯಿ, “ಮುಖ್ಯಮಂತ್ರಿ ಸುಳ್ಳು ಹೇಳುತ್ತಿದ್ದಾರೆ. ಪರಿಹಾರ ಕೊಡಿಸುತ್ತೇನೆ, ನಿಮ್ಮ ಮಗಳ ನೆನಪಿಗಾಗಿ ಏನಾದರೂ ಕಟ್ಟಿಕೊಳ್ಳಿ ಎಂದು ಹೇಳಿದ್ದರು. ನನ್ನ ಮಗಳಿಗೆ ನ್ಯಾಯ ಸಿಕ್ಕಾಗ ನಾನು ಬರ್ತಿನಿ, ಹಣ ಪಡಿತೀನಿ ಎಂದಿದ್ದೆ” ಎಂದು ಅಳಲು ತೋಡಿಕೊಂಡಿದ್ದಾರೆ.
“ದುರ್ಗಾಪೂಜಾ ಉತ್ಸವಗಳಿಗೆ ಸಿದ್ಧರಾಗುವಂತೆ ರಾಜ್ಯದ ಜನರನ್ನು ಮನವಿ ಮಾಡುವ ಬ್ಯಾನರ್ಜಿ, ನಮ್ಮ ಹೋರಾಟವನ್ನು ‘ಅಮಾನವೀಯ’ ಎಂದು ಕರೆಯುತ್ತಾರೆ. ಇದು ನನಗೆ ಅಮಾನವೀಯ ಅನಿಸಬೇಕು. ಏಕೆಂದರೆ ನಾನು ಒಬ್ಬ ಮೃತ ಹೆಣ್ಣು ಮಗುವಿನ ತಾಯಿ. ನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ಹೀಗಾಗಿ ಆ ಭಾವನೆ ನನ್ನಲ್ಲಿದೆ. ನಮ್ಮ ಮನೆಯಲ್ಲೂ ನನ್ನ ಪುತ್ರಿಯೇ ದುರ್ಗಾಪೂಜೆ ಆಚರಿಸುತ್ತಿದ್ದರು. ಆದರೆ, ಈಗ ನಮ್ಮ ಜೀವನವನ್ನು ಕತ್ತಲೆಯೇ ಆವರಿಸಿಕೊಂಡಿದೆ. ಇದೇ ಘಟನೆ ಅವರ ಕುಟುಂಬದಲ್ಲಿ ನಡೆದಿದ್ದರೆ ಹೀಗೆ ಹೇಳುತ್ತಿದ್ದರೇ?” ಎಂದು ಆಕ್ರೋಶ ಹೊರಹಾಕಿದ್ದಾರೆ,(ಏಜೆನ್ಸೀಸ್).
ಅದೊಂದು ಪತ್ರ ನೋಡಿ ನನ್ನ ಕೈ-ಕಾಲು ನಡುಗಿತ್ತು! ಫ್ಯಾನ್ ಕೊಟ್ಟ ಲೆಟರ್ ಮರೆಯದ ವಿರಾಟ್ ಹೇಳಿದ್ದಿಷ್ಟು
ಲವ್ ತ್ರಿಕೋನಕ್ಕೆ ಬಿಗ್ ಟ್ವಿಸ್ಟ್! ಮುಗಿಯದ ಕಥೆಯಾಯ್ತು ರಾಜ್-ಲಾವಣ್ಯ ಪ್ರೇಮ ವಿವಾದ