Monday, 12th November 2018  

Vijayavani

ಕಳಚಿತು ರಾಜಕೀಯ ರಂಗದ ಮತ್ತೊಂದು ಕೊಂಡಿ- ಬಾರದ ಲೋಕಕ್ಕೆ ಅನಂತ್ ಕುಮಾರ್ ಪಯಣ - ಶೋಕದ ಕಡಲಲ್ಲಿ ಬಿಜೆಪಿ ಪಾಳಯ        ಅಗಲಿದ ನಾಯಕನ ಅಂತಿಮ ದರ್ಶನ- ಇನ್ನು ಕೆಲವೇ ಹೊತ್ತಲ್ಲಿ ಬೆಂಗಳೂರಿಗೆ ಪ್ರಧಾನಿ ಆಗಮನ- ಅದಮ್ಯ ಚೇತನ ನೇತಾರನ ಗುಣಗಾನ        ನಾಳೆ ವೈದಿಕ ಸಂಪ್ರದಾಯದಂತೆ ಅಂತ್ಯಸಂಸ್ಕಾರ- ಬೆಳಗ್ಗೆ 8ಗಂಟೆಯಿಂದ ಸಾರ್ವಜನಿಕ ದರ್ಶನ - ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳೋರಿಗಾಗಿ ವಿಶೇಷ ರೈಲು        ಜೈಲು ಹಕ್ಕಿಯಾಗಿರೋ ರೆಡ್ಡಿಗೆ ಸಿಗುತ್ತಾ ಜಾಮೀನು- ನಾಳೆ ನಡೆಯಲಿದೆ ಅರ್ಜಿ ವಿಚಾರಣೆ- ಪರಪ್ಪರ ಅಗ್ರಹಾರದಲ್ಲಿ ದಿನಕಳೆದ ನಾಯಕ        ಸಿಲಿಕಾನ್ ಸಿಟಿಯಲ್ಲಿ ಎದೆ ಝಲ್ಲೆನಿಸುವ ಘಟನೆ- ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು- ಡೆತ್​ನೋಟ್ ಬರೆದಿಟ್ಟು ಸೂಸೈಡ್        ಕಾರ್ತಿಕ ಮಾಸದ ಮೊದಲ ಸೋಮವಾರ- ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ- ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಂದಿಮೂರ್ತಿಗೆ ರುದ್ರಾಭಿಷೇಕ       
Breaking News

31 ನರಭಕ್ಷಕರ ಕೊಂದ ಬೇಟೆಗಾರ!

Thursday, 12.07.2018, 3:02 AM       No Comments

ಕಾಡುಮೃಗಗಳನ್ನು ಬೇಟೆಯಾಡುವಂತಿಲ್ಲ ಎಂದು ಸರ್ಕಾರ ನಿರ್ಬಂಧ ಹೇರಿದ್ದರೂ, ಕೆಲವೊಮ್ಮೆ ಆತ್ಮರಕ್ಷಣೆ ಹಾಗೂ ನಮ್ಮ ಸುತ್ತಮುತ್ತಲಿನ ಜನರ ಜೀವಹಾನಿ ತಡೆಯಲು, ದಾಳಿ ಮಾಡುವ ಮೃಗಗಳನ್ನು ಕೊಲ್ಲುವುದು ಅನಿವಾರ್ಯವಾಗುತ್ತದೆ. ಮನುಷ್ಯನ ರಕ್ತದ ರುಚಿ ಕಂಡ ಸಿಂಹ, ಹುಲಿ, ಚಿರತೆಯಂಥ ಪ್ರಾಣಿಗಳು ಮತ್ತೆ ಮತ್ತೆ ಮನುಷ್ಯರನ್ನು ಕೊಲ್ಲಲು ಹೊಂಚು ಹಾಕಿ ಅರಣ್ಯದ ಅಂಚಿನ ಗ್ರಾಮಗಳ ಮೇಲೆ ದಾಳಿನಡೆಸುತ್ತವೆ. ಇಂಥ ‘ನರಭಕ್ಷಕ’ ಪ್ರಾಣಿಗಳನ್ನು ಹುಡುಕಿ ಬೇಟೆಯಾಡಲೆಂದೆ ಉತ್ತರಾಖಂಡದಲ್ಲಿ ಗುಡ್ಡಗಾಡು ಪ್ರದೇಶದ ಪಟ್ಟಣ ಪೌರಿ ಘರ್​ವಾಲ್ ನಿವಾಸಿ ‘ಜಾಯ್ ಹುಕಿಲ್ ’ ಎಂಬಾತನಿಗೆ ಸ್ಥಳೀಯರು ಗುತ್ತಿಗೆ ಕೊಟ್ಟಿದ್ದಾರೆ. ಸರ್ಕಾರ ಕೂಡ ಇವರನ್ನು ನರಭಕ್ಷಕ ಪ್ರಾಣಿಗಳ ಹತ್ಯೆಗಾಗಿ ಹಲವು ಕಾರ್ಯಾಚರಣೆಗಳಲ್ಲಿ ಬಳಸಿಕೊಂಡಿದೆ. ಕುಮಾವೊನ್ ಮತ್ತು ಘರ್​ವಾಲ್ ಪರ್ವತಗಳಲ್ಲಿ ನೆಲೆಸಿದ್ದ 31 ನರಭಕ್ಷಕ ಹುಲಿ, ಚಿರತೆಗಳನ್ನು ಕೊಂದು, ಜಾಯ್ ಸ್ಥಳೀಯರ ಜೀವ ಉಳಿಸಿದ್ದಾರೆ.

ಬೆಟ್ಟ ಗುಡ್ಡ ಏರಲು ಬೊಲೆರೊ ಸಾಥ್

ಹಲವು ವರ್ಷಗಳಿಂದ ಮಾರುತಿ 800 ಕಾರಿನಲ್ಲಿ ಉತ್ತರಾಖಂಡದ ಹಲವು ಬೆಟ್ಟ ಗುಡ್ಡಗಳ ಅರಣ್ಯಗಳಲ್ಲಿ ಸಂಚರಿಸಿ ಬೇಟೆ ಹಾಗೂ ವಿವಿಧ ಕಾರ್ಯಾಚರಣೆಗಳನ್ನು ನಡೆಸಿದ್ದ ಜಾಯ್, ಪ್ರಸ್ತುತ ಬೊಲೆರೊ ಎಸ್​ಯುುವಿ ಬಳಸುತ್ತಾರೆ. ಜತೆಯಲ್ಲಿ ಒಬ್ಬ ಸಹಾಯಕನನ್ನು ಕರೆದೊಯ್ಯುತ್ತಾರೆ.

ಎನ್​ಸಿಸಿಯಲ್ಲಿ ಶೂಟಿಂಗ್ ತರಬೇತಿ

2007ರಿಂದ ಬೇಟೆಯಾಡುವುದನ್ನು ಆರಂಭಿಸಿದ ಜಾಯ್, ಶೂಟಿಂಗ್ ಕಲಿತಿದ್ದು ಎನ್​ಸಿಸಿಯಲ್ಲಿ. ಹಲವು ವರ್ಷಗಳ ಹಿಂದೆ 11 ಮಂದಿಯನ್ನು ಒಂದೇ ಬಾರಿಗೆ ಚಿರತೆಯೊಂದು ಬೇಟೆಯಾಡಿ ಕೊಂದಿದ್ದನ್ನು ಕಂಡ ಜಾಯ್ಗೆ ನರಭಕ್ಷಕ ಮೃಗಗಳನ್ನು ಸುಮ್ಮನೆ ಬಿಡಬಾರದು ಎಂದೆನಿಸಿ ಗನ್ ಹಿಡಿದರಂತೆ. ಸದಾ ಜೀವವನ್ನು ಪಣಕ್ಕೆ ಇಟ್ಟು ಹೊರಡುವ ಜಾಯ್ ಅನಿಸಿಕೆಯಲ್ಲಿ ‘ ನಾವು ಗನ್ ಹಿಡಿದ ಮೇಲೆ ಬೇಟೆಗಾರರು. ಆದರೆ ಮೃಗಗಳು ಜನ್ಮತಃ ಬೇಟೆಗಾರರು. ಅವು ದಾಳಿಗೂ ಮುನ್ನ ಪೂರ್ಣ ಸಂಚು ಸಿದ್ಧಗೊಳಿಸಿಕೊಂಡಿರುತ್ತವೆ. ಮನುಷ್ಯರಿಗೆ ರಾತ್ರಿ ವೇಳೆ ಸರಿಯಾಗಿ ಕತ್ತಲಲ್ಲಿ ಸ್ಪಷ್ಟ ದೃಷ್ಟಿ ಇರುವುದಿಲ್ಲ ಎಂದು ಅವುಗಳಿಗೆ ತಿಳಿದಿದೆ ’ ಎಂದು ತಿಳಿಸುತ್ತಾರೆ. ಹೈಕೋರ್ಟ್​ನಿಂದ ನರಭಕ್ಷಕ ಮೃಗಗಳನ್ನು ಬೇಟೆ ಆಡುವಂತಿಲ್ಲ ಎಂಬ ಆದೇಶ ಹೊರಬಿದ್ದ ಬಳಿಕ ಜಾಯ್ ತಮ್ಮ ಗನ್ ಕೆಳಗೆ ಇಟ್ಟಿದ್ದಾರೆ.

ಬೇಟೆಗಾರನಿಗೆ ಗೊಂದಲ ಮೂಡಿಸುತ್ತವೆ!

ಕಾಡುಮೃಗಗಳ ಪೈಕಿ ನರಭಕ್ಷಣೆ ಅಭ್ಯಾಸ ಹತ್ತಿಸಿಕೊಂಡಿರುವ ಪ್ರಾಣಿಗಳನ್ನು ಗುರುತಿಸುವುದು ಸುಲಭದ ಮಾತಲ್ಲ. ಅರಣ್ಯದಲ್ಲಿ ಇದ್ದುಕೊಂಡು ಅವುಗಳ ಚಲನವಲನ ಗಮನಿಸುತ್ತಾ ಕೆಲವು ಬಾರಿ ತಿಂಗಳುಗಳನ್ನೇ ಕಳೆಯಬೇಕಾಗುತ್ತದೆ. ಇತರ ಪ್ರಾಣಿಗಳಂತೆ ಧ್ವನಿ ಬದಲಾಯಿಸಿ ಕೂಗಿ ಬೇಟೆಗಾರನ ಗಮನ ತಪ್ಪಿಸುವ ಚಾಣಾಕ್ಷತನ ನರಭಕ್ಷಕ ಮೃಗಗಳಿಗೆ ಇರುತ್ತದೆ ಎಂದು ಜಾಯ್ ಅನುಭವ ಬಿಚ್ಚಿಟ್ಟಿದ್ದಾರೆ. ಅಲ್ಮೊರಾ ಪ್ರದೇಶದಲ್ಲಿದ್ದ ನರಭಕ್ಷಕ ಚಿರತೆಯನ್ನು ಬೆನ್ನತ್ತಿದ್ದ ಜಾಯ್ ಅವರ ಗಮನ ತಪ್ಪಿಸಲು ಅದು ನಾಯಿಯಂತೆ ಬೊಗಳುತ್ತಿತ್ತಂತೆ.

Leave a Reply

Your email address will not be published. Required fields are marked *

Back To Top