ಈ ದಾಳಿಯನ್ನು ಮರೆಯುವುದಿಲ್ಲ, ಇದಕ್ಕೆ ಪ್ರತೀಕಾರ ಪಡೆದೇ ಪಡೆಯುತ್ತೇವೆ: ಸಿಆರ್​ಪಿಎಫ್​ ಶಪಥ

ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಕುರಿತು ಸಿಆರ್​ಪಿಎಫ್​ ಇಂದು ಅಧಿಕೃತವಾಗಿ ಮಾತನಾಡಿದೆ.

ಇಂದು ಟ್ವೀಟ್​ ಮಾಡಿರುವ ಸಿಆರ್​ಪಿಎಫ್​, “ನಾವು ಈ ಘಟನೆಯನ್ನು ಮರೆಯುವುದಿಲ್ಲ. ಈ ಕೃತ್ಯ ಎಸಗಿದ ಯಾರನ್ನೂ ನಾವು ಕ್ಷಮಿಸುವುದಿಲ್ಲ. ದಾಳಿಯ ವೇಳೆ ಹುತಾತ್ಮರಾದ ಯೋಧರಿಗೆ ನಮ್ಮ ಸಲ್ಯೂಟ್​. ಹುತಾತ್ಮ ಯೋಧರ ಕುಟುಂಬದ ಅಣ್ಣ ತಮ್ಮಂದಿರೊಂದಿಗೆ ನಾವಿದ್ದೇವೆ,” ಎಂದು ತಿಳಿಸಿದೆ.

ಇದೇ ವೇಳೆ ಮುಯ್ಯಿಗೆ ಮುಯ್ಯಿ ನೀಡುವ ಮಾತನ್ನೂ ಸಿಆರ್​ಪಿಎಫ್​ ಆಡಿದೆ. “ಈ ಘೋರ ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲಿದ್ದೇವೆ,” ಎಂದು ಸಿಆರ್​ಪಿಎಫ್​ ಶಪಥ ಮಾಡಿದೆ.