ಹಿಂದೂಸ್ತಾನದ ಹೀರೋ ಬಲಿಷ್ಠನೋ ಅಥವಾ ಪಾಕಿಸ್ತಾನದ ಪಕ್ಷಪಾತಿಗಳೋ ಎಂಬುದು ಚುನಾವಣೆ ನಿರ್ಧರಿಸುತ್ತೆ

ಸೋನೆಪುರ್​ (ಒಡಿಶಾ): ಹಿಂದೂಸ್ತಾನದ ಹೀರೋ ಬಲಿಷ್ಠನೋ ಅಥವಾ ಪಾಕಿಸ್ತಾನದ ಪಕ್ಷಪಾತಿಗಳು ಬಲಿಷ್ಠರೋ… ನಮ್ಮ ಯೋಧರು, ರೈತರು ಮತ್ತು ಯುವಕರಿಗೆ ಸೂಕ್ತ ಗೌರವಾದರಗಳು ಲಭಿಸುತ್ತದೋ ಇಲ್ಲವೋ ಅಥವಾ ಇವರೆಲ್ಲರನ್ನೂ ವಿಭಜಿಸುವ ಶಕ್ತಿಗಳ ಧ್ವನಿ ಜೋರಾಗುತ್ತದೆಯೇ ಎಂಬುದನ್ನು ಈ ಬಾರಿಯ ಲೋಕಸಭೆ ಚುನಾವಣೆ ನಿರ್ಧರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಒಡಿಶಾದ ಸೋನೆಪುರ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಬಳಿಕ ಒಡಿಶಾ ರಾಜ್ಯ ಇಂದಿಗೂ ಹಿಂದುಳಿದಿರುವುದಕ್ಕೆ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್​ ಮತ್ತು ಬಿಜೆಡಿ ಪಕ್ಷಗಳು ಬಡವರನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ. ಇದರಿಂದಾಗಿ ಒಡಿಶಾ ಒಳಗೊಂಡಂತೆ ಭಾರತದ ಬಹುತೇಕ ಪ್ರದೇಶಗಳು ಇಂದಿಗೂ ಹಿಂದುಳಿಯುವ ಜತೆಗೆ ಕಡುಬಡತನದ ಬೇಗೆಯಲ್ಲಿ ಬೇಯುತ್ತಿವೆ. ನಕ್ಸಲರು ಈ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು. (ಏಜೆನ್ಸೀಸ್​)

One Reply to “ಹಿಂದೂಸ್ತಾನದ ಹೀರೋ ಬಲಿಷ್ಠನೋ ಅಥವಾ ಪಾಕಿಸ್ತಾನದ ಪಕ್ಷಪಾತಿಗಳೋ ಎಂಬುದು ಚುನಾವಣೆ ನಿರ್ಧರಿಸುತ್ತೆ”

Comments are closed.