ಹೈದರಾಬಾದ್: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದ್ದು, ಮತದಾರರನ್ನು ಸೆಳೆಯಲು ಈಗಾಗಲೇ ವಿವಿಧ ಪಕ್ಷಗಳ ಅಭ್ಯರ್ಥಿಗಳು ಕೂಡ ಭಾರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ರಾಷ್ಟ್ರೀಯ ಆಮ್ಜಾನ್ ಪಕ್ಷದ ಅಭ್ಯರ್ಥಿ ಶರದ್ ಸಿಂಗ್ ಕುಮಾರ್ ಚುನಾವಣೆ ಗುರುತಾಗಿ ಶೂವನ್ನು ಹೊಂದಿದ್ದು, ವಿಶೇಷ ಪ್ರಚಾರ ಶೈಲಿಯಿಂದಾಗಿ ಸುದ್ದಿಯಾಗಿದ್ದಾರೆ.
ಶೂ ಪಾಲಿಶ್ ಮಾಡುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಅನನ್ಯವಾದ ಗುರುತಿಗೆ ಮತ ನೀಡಿ ಆಶೀರ್ವದಿಸುವಂತೆ ಕೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಸಿಂಗ್, ಇದೊಂದು ಉಚಿತ ಮತದಾನದ ಚಿಹ್ನೆಯಾಗಿತ್ತು. ಯಾರೊಬ್ಬರು ತೆಗೆದುಕೊಳ್ಳಲು ಸಿದ್ಧರಿರರಲಿಲ್ಲ. ಹಾಗಾಗಿ ನಾವು ಇದನ್ನು ತೆಗೆದುಕೊಂಡಿದ್ದು, ಇದನ್ನೇ ಆಶೀರ್ವಾದವನ್ನಾಗಿ ಬದಲಾಗಿಸುತ್ತೇವೆ ಎಂದಿದ್ದಾರೆ.
ಡಿ. 7ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆ ಅಂಗವಾಗಿ ಜಾಗ್ತಿಯಲ್ ಜಿಲ್ಲೆಯ ಕೋರುತ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿರುವ ಅಕುಲಾ ಹನುಮಂತ್ ಅವರು ಮತದಾರರ ಕೈಗೆ ಚಪ್ಪಲಿ ಕೊಟ್ಟು ಮತ ನೀಡುವಂತೆ ಕೇಳುತ್ತಿದ್ದರು. ಗೆದ್ದ ಮೇಲೆ ನಾನು ಅಭಿವೃದ್ಧಿ ಕಾರ್ಯ ಮಾಡದಿದ್ದರೆ ನೀವು ಇದೇ ಚಪ್ಪಲಿಯಿಂದ ನನಗೆ ಹೊಡೆಯಿರಿ ಎಂದು ಮನವಿ ಮಾಡಿಕೊಂಡು ಸುದ್ದಿಯಾಗಿದ್ದರು.
230 ವಿಧಾನಸಭೆ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ ನ. 28 ರಂದು ಚುನಾವಣೆ ನಡೆಯಲಿದ್ದು, ಡಿ. 11 ರಂದು ಫಲಿತಾಂಶ ಪ್ರಕಟವಾಗಿಲಿದೆ. (ಏಜೆನ್ಸೀಸ್)