More

    ರಾಹುಲ್ ಗಾಂಧಿ ಪತ್ರವನ್ನು ಅಟ್ಯಾಚ್ ಮಾಡಿ ಕೇರಳ ಸಿಎಂ ಟ್ವೀಟ್​: ಕಾಂಗ್ರೆಸ್ ನಾಯಕ ಆಕ್ರೋಶಕ್ಕೆ ಕಾರಣವಾಯಿತೇಕೆ?

    ತಿರುವನಂತಪುರಂ: ಲೋಕ ಕೇರಳ ಸಭಾ(ಎಲ್​ಕೆಎಸ್​) ಕಾರ್ಯಕ್ರಮಕ್ಕೆ ಸಂಬಂಧಿಸಿದ ಸೌಜನ್ಯಪೂರ್ವಕವಾಗಿ ವಯನಾಡಿನ ಸಂಸದ ರಾಹುಲ್ ಗಾಂಧಿ ಬರೆದಿದ್ದ ಪತ್ರವನ್ನು ಟ್ವೀಟ್ ಮಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್​ ಕಾಂಗ್ರೆಸ್​ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

    ಕೇರಳ ಸಿಎಂ ಅವರ ಟ್ವೀಟ್​ನಲ್ಲಿ ಏನಿದೆ?: ಲೋಕ ಕೇರಳ ಸಭಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಪತ್ರಕ್ಕೆ ಧನ್ಯವಾದ ಸೂಚಿಸಿರುವ ಪಿಣರಾಯಿ ವಿಜಯನ್​, ರಾಹುಲ್ ಅವರ ನಡೆಯನ್ನು ಪ್ರಶಂಸಿಸಿದ್ದಾರೆ. ಆ ಪತ್ರದಲ್ಲಿ ಇಂತಹ ಕಾರ್ಯಕ್ರಮ ಹೊರದೇಶದಲ್ಲಿರುವ ದೇಶವಾಸಿಗಳನ್ನು ಸಂಪರ್ಕಿಸುವುದಕ್ಕೆ ಉತ್ತಮ ವೇದಿಕೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಆ ಪತ್ರವನ್ನೂ ಸೇರಿಸಿ ಟ್ವೀಟ್​ ಮಾಡಿದ್ದರು.

    ಕಾಂಗ್ರೆಸ್ ನಾಯಕರ ಟೀಕೆ ಯಾಕೆ?: ವಾಸ್ತವದಲ್ಲಿ ಅನಿವಾಸಿ ಕೇರಳೀಯರನ್ನು ಒಂದೆಡೆ ಸೇರಿಸುವ ಎಲ್​ಕೆಎಸ್ ಕಾರ್ಯಕ್ರಮವನ್ನು ಕೇರಳದ ಕಾಂಗ್ರೆಸ್ ನೇತೃತ್ವದ ವಿಪಕ್ಷ ಬಹಿಷ್ಕರಿಸಿತ್ತು. ಸಿಬ್ಬಂದಿಗೆ ವೇತನ ಕೊಡುವುದಕ್ಕೇ ಸರ್ಕಾರ ಕಷ್ಟಪಡುತ್ತಿರುವಾಗ ಇಂತಹ ದುಂದುವೆಚ್ಚದ ಕಾರ್ಯಕ್ರಮ ಬೇಡ ಎಂಬ ಕಾರಣವನ್ನೂ ಅದಕ್ಕೆ ಕೊಟ್ಟಿತ್ತು. ಆದರೆ, ರಾಹುಲ್ ಗಾಂಧಿ ಅವರ ಪತ್ರವನ್ನು ಒಳಗೊಂಡ ಈ ಟ್ವೀಟ್​ ಕೇರಳ ಕಾಂಗ್ರೆಸ್ ನಾಯಕರಿಗೆ ಭಾರಿ ಇರಿಸುಮುರಿಸು ಉಂಟುಮಾಡಿತ್ತು.

    ಹೀಗಾಗಿ ಎಐಸಿಸಿ ಜನರಲ್ ಸೆಕ್ರೆಟರಿ ಕೆ.ಸಿ.ವೇಣುಗೋಪಾಲ್​, ಕೇರಳ ವಿಧಾನಸಭೆಯ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಪ್ರತಿಕ್ರಿಯಿಸಿದ್ದು, ವಿಜಯನ್ ಪೊಲಿಟಿಕಲ್ ಮೈಲೇಜ್​ಗೋಸ್ಕರ ಹೀಗೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರು ವಯನಾಡಿನ ಸಂಸದರಾಗಿರುವ ಕಾರಣ ಅವರು ಸೌಜನ್ಯಕ್ಕೋಸ್ಕರ ಕಳುಹಿಸಿದ ಪತ್ರ ಅದು. ಅದನ್ನು ಮುಖ್ಯಮಂತ್ರಿ ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts