ರಾಜ್ಯಸಭೆಗೆ ಬಿಜೆಪಿಯಿಂದ ಮೂರನೇ ಅಭ್ಯರ್ಥಿಯ ಘೋಷಣೆ!

ಬೆಂಗಳೂರು: ರಾಜ್ಯಸಭೆಯ ಚುನಾವಣಾ ಕಣ ರಂಗೇರಿದ್ದು, ಒಂದರ ಹಿಂದೊಂದರಂತೆ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ. ಅದರ ಮತ್ತೊಂದು ಮಜಲು ಎಂಬಂತೆ ಇದುವರೆಗೆ ಇಬ್ಬರು ಅಭ್ಯರ್ಥಿಗಳನ್ನಷ್ಟೇ ಘೋಷಿಸಿ ಸುಮ್ಮನಿದ್ದ ಬಿಜೆಪಿ ಇದೀಗ ಮೂರನೇ ಅಭ್ಯರ್ಥಿಯನ್ನು ಘೋಷಿಸಿದೆ. ರಾಜ್ಯಸಭೆಗೆ ಬಿಜೆಪಿಯ ಮೂರನೇ ಅಭ್ಯರ್ಥಿಯನ್ನಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಲೆಹರ್​ ಸಿಂಗ್ ಹೆಸರನ್ನು ಪಕ್ಷ ಅಧಿಕೃತಗೊಳಿಸಿ ಘೋಷಣೆ ಹೊರಡಿಸಿದೆ. ಜೆಡಿಎಸ್​ ತನ್ನ ಅಭ್ಯರ್ಥಿಯನ್ನು ದಿಢೀರ್ ಬದಲಾಯಿಸಿದ ಹಿಂದೆಯೇ ಬಿಜೆಪಿ ತನ್ನ ಚಾಣಾಕ್ಷ ನಡೆಯನ್ನು ಚಲಾಯಿಸಿದೆ. ಒಂದೆಡೆ ಜೆಡಿಎಸ್​ ಅಭ್ಯರ್ಥಿಯ ದಿಢೀರ್ ಬದಲಾವಣೆ, … Continue reading ರಾಜ್ಯಸಭೆಗೆ ಬಿಜೆಪಿಯಿಂದ ಮೂರನೇ ಅಭ್ಯರ್ಥಿಯ ಘೋಷಣೆ!