20.4 C
Bengaluru
Sunday, January 19, 2020

ಪುರಾತನ ಪರಂಪರೆಯ ತಿಮ್ಮಲಾಪುರ ಕ್ಷೇತ್ರ

Latest News

ಎಲ್ಲರ ಬಾಯಿಗೆ ಬೀಗ ಹಾಕಿದ ಅಮಿತ್ ಷಾ

ಹುಬ್ಬಳ್ಳಿ: ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಮಾಡಿದ ಅಮಿತ್ ಷಾ, ಪಕ್ಷದ ಧಾರವಾಡ, ಹಾವೇರಿ, ಗದಗ ಜಿಲ್ಲೆಯ ಪದಾಧಿಕಾರಿಗಳೊಂದಿಗೆ ರಾತ್ರಿಯ ಭೋಜನ ಸವಿದರು.

ತುಂಗಭದ್ರಾ ನದಿಯಲ್ಲಿ ದಂಪತಿ ಶವ ಪತ್ತೆ

ಗುತ್ತಲ: ದಂಪತಿ ಶವಗಳು ಸಮೀಪದ ಹಾವೇರಿ- ಬಳ್ಳಾರಿ ಜಿಲ್ಲೆಗಳ ಸಂಪರ್ಕ ಸೇತುವೆ ಕಳೆಗೆ ತುಂಗಭದ್ರಾ ನದಿಯಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿವೆ.

ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿ

ಹಾನಗಲ್ಲ: ನೌಕರರು ಸರ್ಕಾರಕ್ಕೆ ಬೇಡಿಕೆ ಇಡುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಪ್ರಾಮಾಣಿಕವಾಗಿ ಸಹಕರಿಸಬೇಕು. ಸರ್ಕಾರ-ನೌಕರರ ಸಂಘಟನೆ ಒಂದಾಗಿ ಶ್ರಮಿಸಬೇಕು ಎಂದು ಸರ್ಕಾರಿ ನೌಕರರ...

ಸಂಸ್ಕೃತಿ, ಪರಂಪರೆ ಬೆಳೆಸಲು ಹೋರಾಟ ಅಗತ್ಯ

ರಾಣೆಬೆನ್ನೂರ: ಧರ್ಮ-ಅಧರ್ಮ, ಪರಕೀಯರ ಆಕ್ರಮಣದಿಂದ ಹಾಗೂ ಜಾತಿ, ಭೇದ-ಭಾವ ಹೋಗಲಾಡಿಸುವುದು ಸೇರಿ ಪ್ರತಿ ಹೋರಾಟದಲ್ಲೂ ಕರ್ನಾಟಕದ ಪಾತ್ರ ಬಹುಮುಖ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ...

ಅಂಗವಿಕಲರಿಗೆ ಪ್ರಥಮ ಆದ್ಯತೆ ನೀಡಿ

ಹಾವೇರಿ: ಅಂಗವಿಕಲರಿಗೆ ಎಲ್ಲ ಯೋಜನೆಗಳಲ್ಲಿ ಪ್ರಥಮ ಆದ್ಯತೆ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ...

ಹತ್ತೊಂಬತ್ತನೆಯ ಶತಮಾನದ ಕೀರ್ತನಕಾರ್ತಿಯರಲ್ಲಿ ಅಗ್ರಸ್ಥಾನದಲ್ಲಿರುವವರು ಹರಪನಹಳ್ಳಿ ಭೀಮವ್ವ. ಅವರ ಕುಲದೈವ ದೇವರ ತಿಮ್ಮಲಾಪುರದ ಶ್ರೀ ಲಕ್ಷಿ ್ಮ ವೆಂಕಟೇಶ್ವರ. ಭೀಮವ್ವನವರು ತಮ್ಮ ಕುಲದೈವವನ್ನು, ‘ಕಂಡು ಧನ್ಯನಾದೆ, ತಿಮಲಾಪುರೀಶ ದೊರೆಯೇ’ ಎಂದು ಹಲವು ಪದ್ಯಗಳಿಂದ ಭಜಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯಿಂದ ಆಗ್ನೇಯ ದಿಕ್ಕಿನಲ್ಲಿ 2 ಕಿ.ಮೀ. ಹೋದರೆ ದೇವರ ತಿಮ್ಮಲಾಪುರ ಸಿಗುತ್ತದೆ. ಊರಿಗೆ ಈ ಹೆಸರು ಬರಲು ಕಾರಣ ಇಲ್ಲಿನ ಹೆಮ್ಮೆಯ ಪುರಾತನ ಪರಂಪರೆಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ. ಇಲ್ಲಿನ 60 ಅಡಿ ಎತ್ತರದ ಭವ್ಯ ಗೋಪುರದಲ್ಲಿ ದಶಾವತಾರ, ಸಮುದ್ರಮಥನ, ಮತ್ತಿತರ ಸೂಕ್ಷ್ಮ ಕೆತ್ತನೆಗಳಿವೆ. ಸುಮಾರು ಒಂದೂವರೆ ಎಕರೆ ಪ್ರದೇಶ ವ್ಯಾಪಿಸಿರುವ ದೇಗುಲದ ಮಧ್ಯಭಾಗದಲ್ಲಿ 16 ಕಂಬಗಳ ಶಿಲಾಮಂಟಪವಿದೆ. ಆವರಣದಲ್ಲಿರುವ ನಾಗರ ಕಟ್ಟೆಯ ಬಳಿ ಭಕ್ತಿಯಿಂದ ಪೂಜಿಸಿದರೆ ಮಕ್ಕಳ ಭಾಗ್ಯ ದೊರೆಯುವುದೆಂಬ ನಂಬಿಕೆಯಿದೆ. ಹೊರಬದಿಯಲ್ಲಿ ‘ಹೊರಕೈ ಹನುಮಪ್ಪ’ನ ಗುಡಿಯಿದೆ. ದೇಗುಲದ ಹೊರಗೆ, ಎಂತಹ ಬರಗಾಲದಲ್ಲಿಯೂ ಬತ್ತದ ತೊಟ್ಟಿಲು ಬಾವಿ ಎನ್ನುವ ಪುಷ್ಕರಿಣಿಯಿದೆ.

ಕ್ಷೇತ್ರದ ಇತಿಹಾಸ: 1566ರಲ್ಲಿ ಹರಪನಹಳ್ಳಿಯನ್ನು ಆಳುತ್ತಿದ್ದ ದಾದಣ್ಣನಾಯ್ಕರಿಗೆ ಕನಸಿನಲ್ಲಿ ವೆಂಕಟರಮಣ ಸ್ವಾಮಿ ಪ್ರತ್ಯಕ್ಷನಾಗಿ ಮೈದೂರಿನ ಒಬ್ಬರ ಮನೆಯನ್ನು ತೋರಿಸಿ, ‘ಅಲ್ಲಿ ನಾನಿದ್ದೇನೆ, ಕರೆತಂದು ಪ್ರತಿಷ್ಠಾಪಿಸು. ತರುವಾಗ ಎಲ್ಲಿಯೂ ತಿರುಗಿ ನೋಡಬಾರದು’ ಎಂದು ಆದೇಶಿಸಿದ. ಕನಸಿನಲ್ಲಿ ಕಂಡಂತೆ ಆ ಸ್ಥಳದಲ್ಲಿ ಭವ್ಯಮೂರ್ತಿಯಿತ್ತು.

ಆ ಮೂರ್ತಿಯನ್ನು ಶುಚಿರ್ಭತಗೊಳಿಸಿ ಹತ್ತಿ ತುಂಬಿದ ಗಾಡಿಯಲ್ಲಿ ಸ್ವಾಮಿಯ ಅಪ್ಪಣೆಯಂತೆ ಹಿಂತಿರುಗಿ ನೋಡದೆ ಕರೆತಂದರು. ಆದರೆ ತಿಮ್ಮಲಾಪುರದ ಬಳಿ ಆ ಗಾಡಿ ಮುಂದೆ ಚಲಿಸದೆ ನಿಂತಿತು. ಅದುವರೆಗೆ ಕೇಳುತ್ತಿದ್ದ ಗೆಜ್ಜೆ ಶಬ್ದ ಕೇಳದಾಯಿತು. ಅಂದು ರಾತ್ರಿ ಕನಸಿನಲ್ಲಿ ಪುನಃ ಬಂದ ಸ್ವಾಮಿಯ ಆದೇಶದಂತೆ ಆ ಸ್ಥಳದಲ್ಲಿಯೇ ಒಂದು ದೇವಸ್ಥಾನವನ್ನು ನಿರ್ವಿುಸಲಾಯಿತು. ಶ್ರೀ ವ್ಯಾಸತೀರ್ಥರು ವಿಗ್ರಹವನ್ನು ಪ್ರತಿಷ್ಠಾಪಿಸಿದರು.

ಪ್ರತಿವರ್ಷ ಮಾರ್ಗಶಿರ ಶುಕ್ಲ ಹುಣ್ಣಿಮೆಯಂದು ಅದ್ದೂರಿ ರಥೋತ್ಸವ ಜರುಗುತ್ತದೆ. ಈ ವರ್ಷ ಇದೇ (ಡಿ. 12) ಭಕ್ತರ ಜಯಘೊಷದೊಂದಿಗೆ ರಥೋತ್ಸವ ನಡೆಯಲಿದೆ. ತಿಮ್ಮಲಾಪುರದ ಆಸುಪಾಸಿನಲ್ಲಿರುವ ಇತರ ಸುಕ್ಷೇತ್ರಗಳೆಂದರೆ – ಬಾಗಳಿ ಕಲ್ಲೇಶ್ವರ ದೇವಸ್ಥಾನ (10 ಕಿ. ಮೀ), ಚಿಗಟೇರಿ ನಾರದಮುನಿ ದೇವಸ್ಥಾನ (14 ಕಿ. ಮೀ), ಬೆಟ್ಟದ ಮಲ್ಲೇಶ್ವರ ದೇವಸ್ಥಾನ (18 ಕಿ. ಮೀ), ಉಚ್ಚಂಗಿದುರ್ಗ ಉಚ್ಚಂಗೆಮ್ಮ ದೇವಸ್ಥಾನ (25 ಕಿ. ಮೀ). ದಾವಣಗೆರೆಯಿಂದ ಹರಪನಹಳ್ಳಿಗೆ ಸಾಕಷ್ಟು ವಾಹನ ಸೌಕರ್ಯ ಲಭ್ಯವಿದೆ.

ತಿಮ್ಮಪ್ಪನ ದರ್ಶನ

ಗರ್ಭಗುಡಿ ಹೊಕ್ಕರೆ ಎಂಟು ಅಡಿ ಎತ್ತರದ ಶ್ರೀ ಲಕ್ಷ್ಮಿ ವೆಂಕಟೇಶ್ವರನ ದೇದೀಪ್ಯಮಾನ ವಿಗ್ರಹವಿದೆ. ಸಾತ್ವಿಕ ಮೊಗ, ನೀಳ ನಾಸಿಕ, ವಜ್ರದೋಲೆ ಧರಿಸಿದ ಕಿವಿಗಳು, ಕೊರಳಲ್ಲಿ ಕಂಠೀಹಾರ, ಹಣೆಯಲ್ಲಿ ಮೂರು ನಾಮ, ಎಡಗೈಯಲ್ಲಿ ಶಂಖ, ಬಲಗೈಯಲ್ಲಿ ಚಕ್ರ ಧರಿಸಿದ ನಾಲ್ಕು ಕೈಗಳು. ಶ್ರೀನಿವಾಸನ ಪಕ್ಕದಲ್ಲಿಯೇ ಕೈಯಲ್ಲಿ ವಜ್ರರತ್ನ ಖಚಿತ ಬಳೆಗಳು, ಕಿವಿಯಲ್ಲಿ ವಜ್ರದ ಓಲೆ ಧರಿಸಿದ ಪುಟ್ಟ ಲಕ್ಷಿ ್ಮು ವಿಗ್ರಹವಿದೆ.

| ಕೆ. ಶ್ರೀನಿವಾಸ ರಾವ್ ಹರಪನಹಳ್ಳಿ

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...