More

    ತಿಮ್ಮಕ್ಕ ವೃಕ್ಷೋದ್ಯಾನ ರೆಡಿ

    ಖಾನಾಪುರ: ಪಟ್ಟಣದಿಂದ 4 ಕಿ.ಮೀ. ದೂರದ ನಂದಗಡ ರಸ್ತೆಯ ಕರಂಬಳ ಗ್ರಾಮದ ಬಳಿ ಸಂರಕ್ಷಿತ ಅರಣ್ಯದ 104 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆ ಉತ್ತರ ಕರ್ನಾಟಕದ ಪ್ರಥಮ ಟ್ರೀ ಪಾರ್ಕ್ ನಿರ್ಮಿಸಿದೆ.

    ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ ಎಂಬ ಹೆಸರಿನಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಈ ಟ್ರೀ ಪಾರ್ಕ್‌ನಲ್ಲಿ ಎಲ್ಲ ವಯೋಮಾನದವರಿಗೂ ಹಿಡಿಸಬಲ್ಲ ಅಂಶಗಳಿವೆ. ಸಾಹಸ ಕ್ರೀಡೆಗಳು, ತೆರೆದ ವ್ಯಾಯಾಮ ಶಾಲೆ, ಸೈನ್ಸ್ ಪಾರ್ಕ್, ಚಿಕ್ಕಮಕ್ಕಳ ಆಟಿಕೆಗಳು, ುಡ್ ಪಾರ್ಕ್, ಸುಸಜ್ಜಿತ ವೇದಿಕೆ, ಗೃಂಥಾಲಯ ಸೇರಿ ಹತ್ತು-ಹಲವು ಸೌಲಭ್ಯ ಒದಗಿಸಿರುವ ಅರಣ್ಯ ಇಲಾಖೆ ಎಲ್ಲ ವಯೋಮಾನದವರ ದಣಿವು ನಿವಾರಿಸಿ ಮನಸ್ಸಿಗೆ ಮುದ ನೀಡುವ ಉದ್ದೇಶ ಹೊಂದಿದೆ.

    ಒಂದು ಕೋಟಿ. ರೂ. ವೆಚ್ಚ: ಅರಣ್ಯ ಇಲಾಖೆಯ ವಿಶೇಷ ಯೋಜನೆಯಡಿ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಟ್ರೀ
    ಪಾರ್ಕ್‌ನಲ್ಲಿ 12 ವರ್ಷಕ್ಕಿಂತ ಮೇಲಿನವರಿಗಾಗಿ ಸಾಹಸ ಕ್ರೀಡೆಗಳಿಗಳನ್ನು ಕೈಗೊಳ್ಳಲು ವಿಶೇಷ ಮೈದಾನ ಅಭಿವೃದ್ಧಿಪಡಿಸಲಾಗಿದೆ. ಪ್ರಕೃತಿದತ್ತವಾದ ಮರಗಿಡಗಳ ನಡುವೆ ಓಪನ್ ಜಿಮ್ ಮತ್ತು 8ನೇ ತರಗತಿಯ ನಂತರದ ವಿದ್ಯಾರ್ಥಿಗಳಿಗಾಗಿ ಸೈನ್ಸ್ ಪಾರ್ಕ್ ನಿರ್ಮಾಣಗೊಂಡಿವೆ. ಟಿವಿ ಹಾಗೂ ಸಿನಿಮಾಗಳಲ್ಲಿ ನೋಡಿರುವಂತೆ ಹಗ್ಗದ ಸಹಾಯದಿಂದ ಸಾಹಸ ಪ್ರದರ್ಶಿಸುವ ಸಾಧನಗಳು, ಅತ್ಯಾಧುನಿಕ ಪದ್ಧತಿಯ ಜಿಮ್ ಪರಿಕರಗಳು ಮತ್ತು ನಮ್ಮ ಯೋಚನಾಶಕ್ತಿಯನ್ನು ಹೆಚ್ಚಿಸುವ ವಿಜ್ಞಾನದ ಉಪಕರಣಗಳನ್ನು ಅವುಗಳ ವಿಶೇಷತೆಯ ಲಕಗಳ ಜೊತೆಗೆ ಉದ್ಯಾನದಲ್ಲಿ ಅಳವಡಿಸಲಾಗಿದೆ.

    ಫುಡ್‌ಕೋರ್ಟ್ ನಿರ್ಮಾಣ: ಉದ್ಯಾನ ಸುತ್ತುವವರ ದಣಿವು, ಹಸಿವು ನಿವಾರಿಸುವ ಸಲುವಾಗಿ ಪ್ರವೇಶದ್ವಾರದ ಬಳಿ ುಡ್ ಕೋರ್ಟ್ ನಿರ್ಮಿಸಲಾಗಿದೆ. ಇಲ್ಲಿ ಉದ್ಯಾನವನಕ್ಕೆ ಆಗಮಿಸುವವರಿಗಾಗಿ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡೂ ಬದಿಯಲ್ಲಿ ಸಾಲಾದ ಮರಗಳ ನಡುವೆ ಇರುವ ಒಂದೂವರೆ ಕಿ.ಮೀ. ಅಂತರದ ುಟ್‌ಪಾಥ್‌ನಲ್ಲಿ ವಾಕಿಂಗ್ ಮತ್ತು ಉದ್ಯಾನವನದ ಪಶ್ಚಿಮ ದಿಕ್ಕಿನಲ್ಲಿ ಎತ್ತರದ ಬಂಡೆಗಳ ಮೇಲೆ ಓಪನ್ ಗ್ಯಾಲರಿಯಲ್ಲಿ ಕುಳಿತು ಪ್ರಕೃತಿ ಸವಿಯನ್ನು ಸವಿಯುವ ಅವಕಾಶವನ್ನು ಚಾರಣಪ್ರಿಯರಿಗೆ ಕಲ್ಪಿಸಲಾಗಿದೆ.
    ಪರಿಸರ ಪ್ರೇಮಿಗಳಿಗೆ, ಅರಣ್ಯದ ಮಧ್ಯದಲ್ಲಿ ಕಾಲ ಕಳೆಯಬಯಸುವ ಪ್ರವಾಸಿಗರಿಗೆ, ನಗರ ಪ್ರದೇಶದ ಜನನಿಬಿಡ ಜೀವನದಿಂದ ದೂರ ಸಾಗಿ ಕೆಲಕಾಲ ನೆಮ್ಮದಿಯಿಂದ ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಲು ಇಚ್ಛಿಸುವ ನಿಸರ್ಗಪ್ರಿಯರಿಗೆ, ಚಾರಣಪ್ರಿಯರಿಗೆ ಹಾಗೂ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಉದ್ಯಾನವನ ಪ್ರಕೃತಿಯ ಪಾಠವನ್ನು ಪ್ರತ್ಯಕ್ಷವಾಗಿ ಹೇಳಿಕೊಡಲಿದೆ. ಈ ಉದ್ಯಾನದ ಮೂಲಕ ಖಾನಾಪುರ ಅರಣ್ಯದ ಮಹತ್ವವನ್ನು ಹೊರಜಗತ್ತಿಗೆ ತಿಳಿಸುವ ಉದ್ದೇಶವನ್ನು ಅರಣ್ಯ ಇಲಾಖೆ ಹೊಂದಿದೆ ಎನ್ನುತ್ತಾರೆ ಟ್ರೀ ಪಾರ್ಕ್ ರೂವಾರಿಗಳಾದ ಖಾನಾಪುರ ಆರ್.ಎ್.ಒ ಬಸವರಾಜ ವಾಳದ.


    ಅರಣ್ಯ ಇಲಾಖೆ ಪ್ರವಾಸಿಗರಿಗೆ ಕಾನನದ ಮಹತ್ವದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿ ಮುಂದಿನ ಪೀಳಿಗೆಗಾಗಿ ಅರಣ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅರಿವು ಮೂಡಿಸಲು ಕರಂಬಳ ಬಳಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನ ನಿರ್ಮಿಸುತ್ತಿದೆ. ಈಗಾಗಲೇ ಉದ್ಯಾನಕ್ಕೆ ಅಂತಿಮ ಸ್ಪರ್ಶ ನೀಡುವ ಕಾರ್ಯಗಳು ಸಾಗಿದ್ದು, ಶೀಘ್ರ ವೃಕ್ಷೋದ್ಯಾನ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.
    ಕರುಣಾಕರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬೆಳಗಾವಿ ವೃತ್ತ

    ಸಾಲುಮರದ ತಿಮ್ಮಕ್ಕ ಉದ್ಯಾನಕ್ಕೆ ಆಗಮಿಸುವ ಪ್ರವಾಸಿಗರಿಗೆ ಊಟ, ವಸತಿ, ಅರಣ್ಯ ಚಾರಣ ಸೇರಿ ಎಲ್ಲ ವ್ಯವಸ್ಥೆಯನ್ನು ಅರಣ್ಯ ಇಲಾಖೆಯಿಂದ ಕಲ್ಪಿಸಲಾಗುತ್ತದೆ. ಪ್ರತಿಯೊಬ್ಬ ಪ್ರವಾಸಿಗರಿಗೆ ತಲಾ ಇಂತಿಷ್ಟು ಪ್ರವೇಶ ಶುಲ್ಕ ನಿಗದಿಪಡಿಸುವ ಪ್ರಸ್ತಾವನೆ ಇಲಾಖೆಯ ಮುಂದಿದೆ. ಪ್ರವಾಸಿಗರಿಂದ ಬರುವ ಆದಾಯವನ್ನು ಉದ್ಯಾನದ ನಿರ್ವಹಣೆಗೆ ಬಳಸಲಾಗುತ್ತದೆ.
    ಎಂ.ವಿ ಅಮರನಾಥ್ ಉಪ ಅರಣ್ಯ ಸಂರಕ್ಷಣಾಕಾರಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts