ಕಾರಿನ ಕಿಟಕಿ ಗಾಜು ಒಡೆದು 10 ಲಕ್ಷ ಹಣ ಕಳ್ಳತನ

ನೆಲಮಂಗಲ: ಹಾಡಹಗಲೇ ಕಾರಿನಲ್ಲಿದ್ದ 10 ಲಕ್ಷ ಹಣ ಕದ್ದು ಪರಾರಿಯಾಗಿರುವ ಘಟನೆ ನೆಲಮಂಗಲದ ಮುಖ್ಯರಸ್ತೆಯಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸಮೀಪ ತೊಣಚಿನಕುಪ್ಪೆಯ ಸುರೇಶ್ ಕುಮಾರ್​ಗೆ ಸೇರಿದ 10 ಲಕ್ಷ ಹಣವನ್ನು ಖದೀಮರು ಎಗರಿಸಿದ್ದಾರೆ.

ಜಮೀನು ಖರೀದಿಗಾಗಿ ಹಣ ಡ್ರಾ ಮಾಡಿದ್ದ ಸುರೇಶ್, ಹಣವನ್ನು ಕಾರಿನಲ್ಲಿಟ್ಟು ಸಬ್​ರಿಜಿಸ್ಟ್ರಾರ್​​ ಕಚೇರಿಗೆ ತೆರಳಿದ್ದರು. ಈ ವೇಳೆ ಕಾರಿನ ಕಿಟಕಿ ಗಾಜು ಒಡೆದು ಹಣದ ಬ್ಯಾಗ್ ಕದ್ದು ಕಳ್ಳರು ಪರಾರಿಯಾಗಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರಿಂದ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ನೆಲಮಂಗಲ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್)