ಜಿಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ ಮನೆಯಲ್ಲಿ ಕಳ್ಳತನ

ವಿಜಯಪುರ: ವಿಜಯಪುರ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಕಳ್ಳರು ನಗದು, ಚಿನ್ನಾಭರಣ ಮತ್ತು ಕಾರನ್ನು ಕದ್ದೊಯ್ದಿದ್ದಾರೆ.

ಜಿಪಂ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ಕೊಡಲು ನೀಲಮ್ಮ ಪತಿಯೊಂದಿಗೆ ಬುಧವಾರ ಬೆಂಗಳೂರಿಗೆ ತೆರಳಿದ್ದರು. ಇದೇ ಸಮಯವನ್ನು ಬಳಸಿಕೊಂಡ ಕಳ್ಳರು ಅವರ ಮನೆ ಬೀಗ ಮುರಿದು 4 ಲಕ್ಷ ರೂ. ನಗದು, ಸುಮಾರು 300 ಗ್ರಾಂ ಚಿನ್ನಾಭರಣ, ಫಾರ್ಚುನರ್​ ಕಾರನ್ನು ಕಳವು ಮಾಡಿದ್ದಾರೆ. ಗುರುವಾರ ನಸುಕಿನ ಜಾವ ನೀಲಮ್ಮ ವಾಪಸ್​ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.