ನವದೆಹಲಿ: ಮೂವರು ಗ್ಯಾಂಗ್ ಸ್ಟಾರ್ಗಳು ಏಕಾಏಕಿ ಶೋ ರೂಮ್ಗೆ ನುಗ್ಗಿ ಗಾಳಿಯಲ್ಲಿ ಹಲವು ಬಾರಿ ಗುಂಡು ಹಾರಿಸಿ, ಮಾಲೀಕನನ್ನು ಬೆದರಿಸಿ ಹೊರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾಷ್ಟ್ರ ರಾಜಧಾನಿಯಲ್ಲಿ ಹಗಲಿನಲ್ಲೇ ಧೈರ್ಯವಾಗಿ ಸುಲಿಗೆಗೆ ಯತ್ನಿಸಿದ ಈ ಪ್ರಕರಣ ಸಿಸಿ(CCTV) ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರನ್ನು ಕೂಡ ಚಕಿತಗೊಳಿಸಿದೆ.
3 ದರೋಡೆಕೊರರು ಏಕಾಏಕಿ ಶೋರೂಮ್ಗೆ ನುಗ್ಗಿ ಮಾಲೀಕನಿಗೆ ಚೀಟಿಕೊಟ್ಟಿದ್ದಾರೆ. ಚೀಟಿಯಲ್ಲಿ ಬರೆದ ಮೊತ್ತ ಮನೆಗೆ ತರುವಂತೆ ಬೆದರಿಕೆ ಹಾಕಿ, ಗನ್ ಮೂಲಕ ಆನೇಕ ಬಾರಿ ಗುಂಡು ಹಾರಿಸಿ, ಧೈರ್ಯದಿಂದ ಹೊರ ನಡೆದಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಇದನ್ನು ಓದಿ: Parliament’s Session | ನ.25ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭ; ಸಚಿವ ಕಿರಣ್ ರಿಜಿಜು
2021 ರಲ್ಲಿ ರೋಹಿಣಿ ನ್ಯಾಯಾಲಯದಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ದರೋಡೆಕೋರ ಜಿತೇಂದ್ರ ಗೋಗಿ ಕಡೆಯವರು ಈ ಶೂಟರ್ಗಳು ಎಂದು ಗುರುತಿಸಲಾಗಿದೆ. ಜಿತೇಂದ್ರ ಗೋಗಿ ಸಹಾಯಕ ದೀಪಕ್ ಬಾಕ್ಸರ್ ಈಗ ಗ್ಯಾಂಗ್ನ ಮುಖ್ಯಸ್ಥರಾಗಿದ್ದಾರೆ. ಈ ಗ್ಯಾಂಗ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೂ ಸಂಪರ್ಕ ಹೊಂದಿದೆ ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ದೆಹಲಿಯ ನಂಗ್ಲೋಯ್ ಮತ್ತು ಅಲಿಪುರದಲ್ಲಿ ಇತ್ತೀಚಿಗೆ ಇದೇ ತರಹದ ಎರಡು ಗುಂಡಿನ ಘಟನೆಗಳು ಸಂಭವಿಸಿವೆ. ಈ ಪ್ರಕರಣದಲ್ಲಿ ಗೋಗಿ ಗ್ಯಾಂಗ್ ಹೆಸರು ಕೇಳಿಬಂದಿತ್ತು. ಈ ಘಟನೆಗಳನ್ನು ಪೊಲೀಸ್ ಇಲಾಖೆ ಸಾವಲಾಗಿ ತಗೆದುಕೊಂಡಿದೆ. ಘಟನಾ ಸ್ಥಳಕ್ಕೆ ಪೊಲೀಸ್ ತಂಡ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಯತ್ನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.(ಏಜೆನೀಸ್)