ಹಾರೂಗೇರಿ: ಪಟ್ಟಣದ ಕೆನರಾ ಬ್ಯಾಂಕ್ ಹತ್ತಿರದ ಮೊಬೈಲ್ ಅಂಗಡಿಗೆ ಕನ್ನ ಹಾಕಿದ ಕಳ್ಳರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಅಲಖನೂರ ಗ್ರಾಮದ ಮುತ್ತಪ್ಪ ಸವದತ್ತಿ (21), ರಾಜು ಸವದತ್ತಿ (23) ಮತ್ತು ಭೀಮಪ್ಪ ಹಳಕಲ್ (22) ಬಂಧಿತರು. ಇವರಿಂದ ಕಳ್ಳತನ ಮಾಡಿದ 5,09,000 ರೂ. ಮೊತ್ತದ ಐೆನ್ ಸೇರಿದಂತೆ ವಿವಿಧ ಕಂಪನಿಯ 12 ಮೊಬೈಲ್ ಹಾಗೂ ಕಳ್ಳತನಕ್ಕೆ ಬಳಸಿದ 20 ಸಾವಿರ ರೂ. ಮೌಲ್ಯದ ಬೈಕ್ ವಶಪಡಿಸಿಕೊಂಡಿದ್ದಾರೆ. ಆ.20ರಂದು ಆನಂದ ತೇಲಿ ಎಂಬುವರ ಆನಂದ ಕಮ್ಯೂನಿಕೇಷನ್ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದರು. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಲೆ ಬೀಸಿದ ಪೊಲೀಸರು 2 ದಿನಗಳಲ್ಲಿ ಕಳ್ಳರನ್ನು ಬಂಧಿಸಿದ್ದಾರೆ. ಸಿಪಿಐ ರವಿಚಂದ್ರ ಡಿ.ಬಿ, ಪಿಎಸ್‌ಐ ಮಾಳಪ್ಪ ಪೂಜೇರಿ, ಗಿರಿಮಲ್ಲಪ್ಪ ಉಪ್ಪಾರ, ಸಿಬ್ಬಂದಿಗಳಾದ ಎ.ಎಸ್.ಶಾಂಡಗೆ, ಬಿ.ಎಲ್.ಹೊಸಟ್ಟಿ, ಆರ್.ಎನ್. ಮುಂದಿನಮನಿ, ಎಚ್.ಆರ್.ಅಂಬಿ, ಪ್ರಕಾಶ ಕವಟಕೊಪ್ಪ, ವಿನೋದ ಠಕ್ಕಣ್ಣವರ, ಜಿ.ಎನ್.ಕಾಗವಾಡೆ, ವಿನೋದ ಠಕ್ಕಣ್ಣವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಳ್ಳರ ಬಂಧನ, 5.09 ಲಕ್ಷ ರೂ. ಮೊತ್ತದ ಮೊಬೈಲ್ ವಶ
ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips
ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…
ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…
ಬೆಂಗಳೂರು: ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…
ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower
ಬೆಂಗಳೂರು: ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…