ಕಳ್ಳ ಸಾಗಾಟ ಮಾಡುತ್ತಿದ್ದ 3 ಕ್ವಿಂಟಾಲ್ ಪಡಿತರ ಅಕ್ಕಿ ವಶ

0 Min Read
ಕಳ್ಳ ಸಾಗಾಟ ಮಾಡುತ್ತಿದ್ದ 3 ಕ್ವಿಂಟಾಲ್ ಪಡಿತರ ಅಕ್ಕಿ ವಶ

ರಾಣೆಬೆನ್ನೂರ: ಸರ್ಕಾರದ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಆಟೋ ಮೇಲೆ ದಾಳಿ ಮಾಡಿದ ಆಹಾರ ಇಲಾಖೆ ಅಧಿಕಾರಿಗಳು 12 ಸಾವಿರ ರೂ. ಮೌಲ್ಯದ 3 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ವಡೇರಾಯನಹಳ್ಳಿಯಲ್ಲಿ ಸೋಮವಾರ ನಡೆದಿದೆ.
ವ್ಯಕ್ತಿಯೊಬ್ಬ ವಡೇರಾಯನಹಳ್ಳಿಯಲ್ಲಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಅಕ್ಕಿಯ ಚೀಲ ಹಾಗೂ ಆಟೋವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಆಸ್ತಿ ಕಣಜ ತಂತ್ರಾಂಶದಲ್ಲಿ ದಾಖಲೆ ನಮೂದಿಸಿ
Share This Article