ಅವು ಫಿಲಂನಲ್ಲಿ ಇದ್ದವು ಅವುಕ್ಕೇನು ಗೊತ್ತು? ದರ್ಶನ್ ಹೋಗಿ ಸ್ವಲ್ಪ ಮಾರ್ಕೆಟ್ ಸ್ಟಡಿ ಮಾಡಲಿ!

ಹಾಸನ: ಅವು ಫಿಲಂನಲ್ಲಿ ಇದ್ದವು ಅವುಕ್ಕೇನು ಗೊತ್ತು? ದರ್ಶನ್ ಹೋಗಿ ಸ್ವಲ್ಪ ಮಾರ್ಕೆಟ್ ಸ್ಟಡಿ ಮಾಡಲಿ ಎಂದು ಸಚಿವ ರೇವಣ್ಣ ರೈತರ ಸಾಲಮನ್ನಾ ಮಾಡಬಾರದು ಎಂಬ ನಟ ದರ್ಶನ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಅವರು ಒಂದು ಸಿನಿಮಾ ಮಾಡೋಕೆ ಎಷ್ಟು ಕೋಟಿ ತೆಗೆದುಕೊಳ್ಳುತ್ತಾರೋ ಅದರ ಅರ್ಧ ಹಣವನ್ನು ರೈತರಿಗೆ ನೀಡಲಿ. ಈಗಾಗಲೇ ಚುನಾವಣೆಗಾಗಿ ಎರಡು ಸಿನಿಮಾ ಫ್ರೀ ಮಾಡೋದಾಗಿ ಹೇಳಿ ದರ್ಶನ್ ಹಣ ಪಡೆದಿದ್ದಾರೆ. ಮೊದಲು ಹೋಗಿ ಕಾಳು ಮೆಣಸು ಅಮದು ನಿಲ್ಲಿಸುವಂತೆ ಯಡಿಯೂರಪ್ಪ ಮತ್ತು ದರ್ಶನ್ ಅಮಿತ್ ಷಾ ಅವರ ಮಗನಿಗೆ ಹೇಳಲಿ ಎಂದು ಸವಾಲೆಸೆದರು.

ಎಲೆಕ್ಟ್ರಾನಿಕ್ ಮಿಡಿಯಾಗೆ ನನ್ನ ಧನ್ಯವಾದಗಳು. ನಮ್ಮನ್ನು ಬೆಳಗಿಂದ ಸಯಂಕಾಲದವರೆಗೂ ತೋರಿಸಿ, ತೋರಿಸಿ ನಮಗೆ ವೋಟ್ ಹಾಕಿದ್ದಾರೆ. ನಿಮಗೆ ಹೆಚ್ಚಿನ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಹಾಸನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಮೊದಲ ಸ್ಥಾನ ಪಡೆದಿದ್ದಕ್ಕೆ ಮಾಜಿ ಡಿಸಿ ರೋಹಿಣಿ ಸಿಂಧೂರಿ ಕಾರಣ ಎಂಬ ವಿಚಾರಕ್ಕೆ ಎದಿರೇಟು ಕೊಟ್ಟ ಅವರು, ಅವಳೇನು ಕಡಿದುಕಟ್ಟೆ ಹಾಕಿದ್ದಾಳೆ. ಆ ಯಮ್ಮ ಶಿಕ್ಷಕರಿಗೆ ಪರೀಕ್ಷೆ ಮಾಡೋಕೆ ಹೋಗಿ ವಿಧಾನಸಭೆಯಲ್ಲಿ ಚರ್ಚೆ ಆಯ್ತು. ಎಲ್ಲ ಶಿಕ್ಷಕರು ಆಯಮ್ಮನ ಕ್ರಮವನ್ನು ವಿರೋಧಿಸಿದರು. ಅವ್ರು ಎಲ್ಲಿ ಹೋಗಿ ಪಾಠ ಮಾಡವ್ರೆ? ಯಾವುದಾದ್ರು ಇದ್ರೆ ತೋರಿಸಲಿ, ಅವರಿಗೂ ಸನ್ಮಾನ ಮಾಡ್ತಿನಿ ಎಂದು ಕಿಡಿಕಾರಿದರು.

ಶಿಕ್ಷಣ ಸಾಧನೆಗೆ ಮುಖ್ಯ ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಕಾರಣ. ಹಾಸನದ ಶಿಕ್ಷಣದ ಈ ಸಾಧನೆಗೆ ಮುಖ್ಯಮಂತ್ರಿ, ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರು, ಹಾಗೂ ಶಿಕ್ಷಣ ಸ್ಥಾಯಿ ಸಮೀತಿ ಅಧ್ಯಕ್ಷೆ ಭಾವಾನಿ ರೇವಣ್ಣನವರು ಕಾರಣ. ಜಾತ್ಯತೀತ ಪಕ್ಷಕ್ಕೆ ವೋಟು ಮಾಡಿದ ಹಾಸನ, ರಾಮನಗರ ಜಿಲ್ಲೆ ಶಿಕ್ಷಣದಲ್ಲಿ ಮೊದಲು ಬಂದಿವೆ. ಮಂಗಳೂರು, ದಕ್ಷಿಣ ಕನ್ನಡದಲ್ಲಿ ಬಿಜೆಪಿಗೆ ವೋಟು ಹಾಕಿ ಹಾಕಿ ಶಿಕ್ಷಣ ಕ್ಷೀಣಿಸಿ ಐದನೇ ಸ್ಥಾನಕ್ಕೆ ಹೋಗಿದೆ. ಅಲ್ಲಿ ಶಿಕ್ಷಣವನ್ನು ಕಡೆಗಣಿಸಲಾಗುತ್ತಿದೆ ಎಂದರು.

ಎಂಬತ್ತಕ್ಕೂ ಹೆಚ್ಚು ಶೇ ಫಲಿತಾಂಶ ಬಂದ ಸರ್ಕಾರಿ ಶಾಲೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನ ನಾನೇ ಒಂದು ಕಾರ್ಯಕ್ರಮ ಮಾಡಿ ಸನ್ಮಾನಿಸುತ್ತೇನೆ. ಸರ್ಕಾರಿ ಶಾಲೆ ಬಡಮಕ್ಕಳು ಈ ಸಾಧನೆ ಮಾಡಿರುವುದು ಸಂತಸದ ವಿಚಾರ. ರಾಜ್ಯ ಪ್ರತೀ ವಿಧಾನಸಭೆ ಕ್ಷೇತ್ರಕ್ಕೂ ಕನಿಷ್ಠ ಹತ್ತು ಆಂಗ್ಲ ಮಾಧ್ಯಮ ಶಾಲೆಯನ್ನು ತೆರೆಯಲೇಬೇಕು. ಒಬ್ಬ ಸಾಮಾನ್ಯ ಪ್ರಜೆಯಾಗಿ ಸಿಎಂ ಅವರನ್ನು ನಾನು ಕೇಳಿಕೊಳ್ಳುತ್ತೇನೆ. ಎಲ್‌ಕೆಜಿಯಿಂದ ಪಿಯುವರೆಗೂ ಇಂಗ್ಲೀಷ್ ಶಾಲೆ ತೆರೆಯಲೇಬೇಕು. ಬೇರೆ ಅನುಧಾನ ಕಡಿತ ಮಾಡಿ ಶಿಕ್ಷಣಕ್ಕೆ ಹಣ ನೀಡಲಿ ಎಂದು ಒತ್ತಾಯಿಸಿದರು. (ದಿಗ್ವಿಜಯ ನ್ಯೂಸ್)

One Reply to “ಅವು ಫಿಲಂನಲ್ಲಿ ಇದ್ದವು ಅವುಕ್ಕೇನು ಗೊತ್ತು? ದರ್ಶನ್ ಹೋಗಿ ಸ್ವಲ್ಪ ಮಾರ್ಕೆಟ್ ಸ್ಟಡಿ ಮಾಡಲಿ!”

  1. what is your qualifications Sir, what is your percentage in SSLC sir. Madam Sinduri IAS and you are MT (master of Thief). First learn decency. You got everything due to your father who was a govt contractor. Did you earn a single rupee by sweat

Leave a Reply

Your email address will not be published. Required fields are marked *