ಕೇರಳ: ಕಳೆದ ಒಂದು ತಿಂಗಳಿಂದ ಮಾಲಿವುಡ್ನಲ್ಲಿ ದೊಡ್ಡ ವಿವಾದವೊಂದು ಭುಗಿಲೆದಿದ್ದು, ‘ಕಾಸ್ಟಿಂಗ್ ಕೌಚ್’ ಪದ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಪ್ರತ್ಯೇಕವಾಗಿ ಕೆ. ಹೇಮಾ ಕಮಿಟಿಯ ವರದಿ ಹೊರಬಿದ್ದ ಬಳಿಕ ಮಲಯಾಳಂ ಚಿತ್ರರಂಗದ ಸ್ಟಾರ್ ನಟಿಮಣಿಯರು ಸೇರಿದಂತೆ ಇನ್ನಿತರರು ಸಹ ತಮಗಾದ ಲೈಂಗಿಕ ಕಿರುಕುಳ ಅನುಭವ ಕುರಿತು ಮುಕ್ತವಾಗಿ ಕ್ಯಾಮರಾ ಮುಂದೆ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಮಲಯಾಳಂ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟಿರುವ ನಟಿಯರು ಮುಂದೆ ಯಾರಿಗೂ ನಮಗೆ ಬಂದಂತಹ ಪರಿಸ್ಥಿತಿ ಬರುವುದು ಬೇಡ ಎಂದು ಒತ್ತಿ ಹೇಳಿದ್ದಾರೆ. ಹೀರೋಯಿನ್ಗಳ ಬಿಚ್ಚುಮಾತುಗಳ ಸದ್ಯ ದೇಶವ್ಯಾಪಿ ಭಾರೀ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ನಟ ದರ್ಶನ್ ಮನವಿಯನ್ನು ಮಾನ್ಯ ಮಾಡಿದ ಕೋರ್ಟ್; ಮಾಧ್ಯಮಗಳಲ್ಲಿ ಚಾರ್ಜ್ಶೀಟ್ ಪ್ರಕಟಿಸದಂತೆ ಹೈಕೋರ್ಟ್ ಸೂಚನೆ
ಸದ್ಯ ಇಷ್ಟು ದಿನ ಕಾಸ್ಟಿಂಗ್ ಕೌಚ್ ಬಗ್ಗೆ ನಟಿಯರ ಓಪನ್ ಟಾಕ್ ಭಾರೀ ಸದ್ದು ಮಾಡುತ್ತಿತ್ತು. ಆದ್ರೆ, ಇದೀಗ ನಟರ ಹೇಳಿಕೆ ಮುನ್ನೆಲೆಗೆ ಬಂದಿರುವುದು ಅನೇಕರಲ್ಲಿ ಆಶ್ಚರ್ಯ ಉಂಟುಮಾಡಿದೆ. ಈ ಬಗ್ಗೆ ನಟ ಗೋಕುಲ್ ಸುರೇಶ್ ಮಾತನಾಡಿ, “ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿದ್ದ ಲೈಂಗಿಕ ಕಿರುಕುಳ ವಿಷಯಕ್ಕೆ ಸಂಬಂಧಿಸಿದಂತೆ ಅಂದು ಧ್ವನಿ ಎತ್ತಿದ್ದೆ ನನಗೆ ಮುಳುವಾಯಿತು. ಚಿತ್ರವೊಂದರಲ್ಲಿ ಅಭಿನಯಿಸಬೇಕಿದ್ದ ನನ್ನನ್ನು ಹೇಳದೆ, ಕೇಳದೆ ತೆಗೆದು ಹಾಕಿದರು” ಎಂದು ಹೇಳಿದರು.
ಯಾವ ಚಿತ್ರತಂಡ? ಯಾವ ವಿಷಯ ಎಂಬುದರ ಕುರಿತು ಹೆಚ್ಚಿನ ವಿವರಗಳನ್ನು ನೀಡಲು ಬಯಸದ ಗೋಕುಲ್, “ಇಂತಹ ಸಮಸ್ಯೆಗಳು ಮತ್ತು ಕೆಟ್ಟ ಅನುಭವಗಳ ಬಗ್ಗೆ ಓಪನ್ ಆಗಿ ಮಾತನಾಡಿದ್ರೆ ಅಥವಾ ಧ್ವನಿ ಎತ್ತಿದ್ರೆ ಎಲ್ಲರಿಗೂ ಇದೇ ಪರಿಸ್ಥಿತಿ ಉಂಟಾಗುತ್ತದೆ. ಇಲ್ಲಿ ಮಹಿಳೆ, ಪುರುಷ ಎಂಬ ಮಾತು ಬರೋದಿಲ್ಲ. ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವ ನಟರು ಸಹ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಚಿತ್ರರಂಗಕ್ಕೆ ಬಂದ ಪ್ರಾರಂಭದಲ್ಲಿ ಇಂತಹ ಸಾಕಷ್ಟು ಪರಿಸ್ಥಿತಿಗಳನ್ನು ನಾನು ಎದುರಿಸಿದ್ದೇನೆ” ಎಂದಿದ್ದಾರೆ,(ಏಜೆನ್ಸೀಸ್).
ಆ ಪ್ರೀತಿಯನ್ನು ಮರೆಯಲು ಸಾಧ್ಯವೇ ಇಲ್ಲ! ಈಗಲೂ ಕಣ್ಣಿನಲ್ಲಿ ಕಟ್ಟಿದಂತಿದೆ: ‘ಕಿಂಗ್’ ಕೊಹ್ಲಿ ಮನದಾಳ