ಗಾಂಧಿ ಕೊಂದ ನಾಡಿದು, ರಮೇಶ್​ಕುಮಾರ್​ ಯಾವ ಲೆಕ್ಕ? ಗಾಂಧಿ ಮೌಲ್ಯಗಳನ್ನು ಅನುಸರಿಸಿಕೊಂಡು ಹೋಗಬೇಕು…

ಬೆಂಗಳೂರು: ಗಾಂಧಿ ಕೊಂದ ನಾಡಿದು. ರಮೇಶ್​ಕುಮಾರ್​ ಯಾವ ಲೆಕ್ಕ? ನಮಸ್ಕಾರ ಮಾಡುವ ನೆಪದಲ್ಲಿ ಕರಗಳ ಮಧ್ಯೆ ಪಿಸ್ತೂಲ್​ ಹಿಡಿದುಕೊಂಡು ಹೋಗಿ ಗಾಂಧಿಯನ್ನು ಕೊಲ್ಲಬೇಕಿತ್ತೇ? ದೊಣ್ಣೆ ತೆಗೆದುಕೊಂಡು ಮೂರು ಹೊಡೆತ ಹೊಡೆದಿದ್ದರೂ ಸಾಕಿತ್ತು. ಹಾಗೆಂದು ಗಾಂಧಿ ಸತ್ತಿದ್ದಾರಾ? ಗಾಂಧಿ ಸಾಯಲ್ಲ, ಅವರು ಸ್ಥಾಪಿಸಿರುವ ಮೌಲ್ಯಗಳೂ ಸಾಯಲ್ಲ. ಅವರು ದೈಹಿಕವಾಗಿಲ್ಲ ನಮ್ಮೊಂದಿಗೆ ಇಲ್ಲ. ಅವರು ಸ್ಥಾಪಿಸಿರುವ ಮೌಲ್ಯಗಳನ್ನು ನಾವು ಅನುಸರಿಸಿಕೊಂಡು ಹೋಗಬೇಕಷ್ಟೇ ಎಂದು ವಿಧಾನಸಭಾಧ್ಯಕ್ಷ ಕೆ.ಆರ್​. ರಮೇಶ್​ಕುಮಾರ್​ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯ ಸಮ್ಮತವಾಗಿ ಕಾರ್ಯನಿರ್ವಹಿಸುವ ಹೆಗ್ಗಳಿಕೆ ಹೊಂದಿರುವ ನಿಮ್ಮ ತೇಜೋವಧೆಗೆ ಪ್ರಯತ್ನಿಸಲಾಗುತ್ತಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ಉತ್ತರ ನೀಡಿದರು.

ವಿಧಾನಸಭಾಧ್ಯಕ್ಷರೇ ಮಿಗಿಲು. ಅವರಿಗೆ ನಿರ್ದೇಶನ, ಆದೇಶ ಕೊಡಲು ಯಾವುದೇ ಕೋರ್ಟ್​ಗೂ ಅಧಿಕಾರ ಇಲ್ಲ ಅಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಏನು ತೀರ್ಪು ಕೊಡುತ್ತಾರೋ ಕೊಡಲಿ. ಪಾಲನೆ ಮಾಡುವಂತಿದ್ದರೆ ಪಾಲಿಸೋಣ. ತಪ್ಪು ತಿಳಿವಳಿಕೆ ಇದ್ದರೆ ಸ್ಪಷ್ಟನೆ ಕೇಳೋಣ. ಶಾಸಕಾಂಗವೂ ಉಳಿಯಬೇಕು, ನ್ಯಾಯಾಂಗವೂ ಉಳಿಯಬೇಕು. ಸಣ್ಣಪುಟ್ಟ ವಿಚಾರಗಳಿಗೆ ವ್ಯಾಜ್ಯ ಏಕೆ ಎಂದು ಮರು ಪ್ರಶ್ನಿಸಿದರು.

2 Replies to “ಗಾಂಧಿ ಕೊಂದ ನಾಡಿದು, ರಮೇಶ್​ಕುಮಾರ್​ ಯಾವ ಲೆಕ್ಕ? ಗಾಂಧಿ ಮೌಲ್ಯಗಳನ್ನು ಅನುಸರಿಸಿಕೊಂಡು ಹೋಗಬೇಕು…”

  1. Congress and Gandhi is debatable. Congress raped gandhian values and ruled india by his name and made him naked. Rameshji boothada baiyalli bhagavath geetha

Leave a Reply

Your email address will not be published. Required fields are marked *