Dad: ಈಗಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣ, ಶಿಸ್ತು ಮತ್ತು ಮೌಲ್ಯಗಳನ್ನು ಕಲಿಸುವುದು ಎಲ್ಲಾ ಪೋಷಕರ ದೊಡ್ಡ ಜವಾಬ್ದಾರಿಯಾಗಿದೆ. ಮಕ್ಕಳನ್ನು ಚಿಕ್ಕ ವಯಸ್ಸಿನಿಂದಲೇ ಕೆಲವು ಆದರ್ಶಗಳಿಂದ
ಬೆಳೆಸಿದರೆ ದೊಡ್ಡವರಾದಾಗ ಅವರ ಜೀವನ ಸರಾಗವಾಗಿ ಸಾಗುತ್ತದೆ. ಇಲ್ಲದಿದ್ದರೆ, ನೀವು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಬಾಲ್ಯದಲ್ಲಿ ಕಲಿಸಿದ ಮೌಲ್ಯಗಳು ಅವರನ್ನು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಹಾಗಾಗಿ ಒಬ್ಬ ತಂದೆಯಾದವರು ಮಗನಿಗೆ ಈ ಕೆಲವು ವಿಷಯಗಳನ್ನು ಬಾಲ್ಯದಲ್ಲಯೇ ತಿಳಿಸುವುದು ಉತ್ತಮ. ಹಾಗಾದ್ರ ಅವು ಯಾವುವು ಗೊತ್ತಾ? ಇಲ್ಲಿದೆ ನೋಡಿ.
ಇದನ್ನೂ ಓದಿ: ಭಯೋತ್ಪಾದನೆ ನಿಲ್ಲುವವರೆಗೂ ಸಿಂಧೂ ಜಲ ಒಪ್ಪಂದ ಅಮಾನತಿನಲ್ಲಿರಲಿದೆ; ಎಸ್ ಜೈಶಂಕರ್| Indus Waters
ಹದಿಹರೆಯದ ವರ್ಷಗಳಲ್ಲಿ ಮಕ್ಕಳಿಗೆ ಸರಿಯಾದ ಬುದ್ಧಿ ಹೇಳದಿದ್ದರೆ ಅವರು ಅಡ್ಡ ದಾರ ಹಿಡಿಯುವ ಅಪಾಯಗಳಿವೆ. ನಂತರ ಹೆತ್ತವರ ಮಾತುಗಳನ್ನು ನಿರ್ಲಕ್ಷಿಸುತ್ತಾರೆ. ಅದಕ್ಕಾಗಿಯೇ ತಂದೆ ತನ್ನ ಮಗನಿಗೆ ಸರಿಯಾದ ಮಾರ್ಗವನ್ನು ತೋರಿಸಬೇಕು. ಪ್ರತಿಯೊಬ್ಬ ತಂದೆಯೂ ತನ್ನ ಮಗನಿಗೆ ಹೇಳಬೇಕಾದ ಕೆಲವು ಪ್ರಮುಖ ವಿಷಯಗಳಿವು.
1. ಹಣದ ಮೌಲ್ಯ
ತಂದೆ ಮಗನಿಗೆ ಚಿಕ್ಕ ವಯಸ್ಸಿನಿಂದಲೇ ಹಣದ ಮೌಲ್ಯವನ್ನು ಕಲಿಸುವುದು ಬಹಳ ಮುಖ್ಯ. ಮಕ್ಕಳು ಕೇಳುವ ಎಲ್ಲಾ ಬೇಡಿಕೆಗಳನ್ನು ಪೂರೈಸಬೇಕಾಗಿಲ್ಲ. ಅಲ್ಲದೆ, ಹಣ ಉಳಿಸಲು ಹೇಳಿ, ಮಕ್ಕಳು ತಮ್ಮ ಖರ್ಚುಗಳನ್ನು ತಾವೇ ಯೋಜಿಸಿಕೊಂಡರೆ, ಹಣದ ಮೌಲ್ಯವನ್ನು ಕಲಿಯುತ್ತಾರೆ. ಇಲ್ಲದಿದ್ದರೆ, ನೀವು ಅನಗತ್ಯ ಖರ್ಚು ಮಾಡುತ್ತಾರೆ.
2.ಜವಾಬ್ದಾರಿ
ಪ್ರತಿಯೊಬ್ಬ ತಂದೆಯೂ ತನ್ನ ಮಕ್ಕಳಿಗೆ ಜೀವನದಲ್ಲಿ ಸ್ವಂತ ಕಾಲ ಮೇಲೆ ನಿಲ್ಲುವುದು ಏಕೆ ಮುಖ್ಯ ಎಂದು ಹೇಳಬೇಕು. ಸಣ್ಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಹಣಕಾಸು ನಿರ್ವಹಿಸುವುದು ಮತ್ತು ಮನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು ಹೇಗೆ ಎಂದು ನಿಮ್ಮ ಮಗನಿಗೆ ಕಲಿಸಿ. ಈ ಸಣ್ಣ ವಿಷಯಗಳು ಭವಿಷ್ಯದಲ್ಲಿ ಅವರಿಗೆ ಮುಖ್ಯವಾಗುತ್ತವೆ. ಇಲ್ಲದಿದ್ದರೆ, ಅವರು ಕೈ ತಪ್ಪುವ ಅಪಾಯವಿದೆ.
3. ಸರಿ – ತಪ್ಪುಗಳ ನಡುವಿನ ವ್ಯತ್ಯಾಸ
ಒಬ್ಬ ತಂದೆ ಮಾತ್ರ ತನ್ನ ಮಗನಿಗೆ ನೈತಿಕತೆ ಮತ್ತು ಪ್ರಾಮಾಣಿಕತೆಯ ಮಹತ್ವವನ್ನು ವಿವರಿಸಲು ಸಾಧ್ಯ. ನಮ್ಮ ಮಗನಿಗೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ಗುರುತಿಸಲು ನಾವು ಕಲಿಸಬೇಕಾಗಿದೆ. ಅವರು ಒಳ್ಳೆಯ ಕೆಲಸಗಳನ್ನು ಮಾಡಿದಾಗ ನೀವು ಅವರನ್ನು ಪ್ರೋತ್ಸಾಹಿಸಬೇಕು ಮತ್ತು ಕೆಟ್ಟ ಕೆಲಸಗಳನ್ನು ಮಾಡಿದಾಗ ಗದರಿಸಬೇಕು.
4. ಸೋಲಿಗೆ ಹೆದರದೆ ಇರುವುದು
ಸೋಲಿಗೆ ಹೆದರುವ ಬದಲು, ನಿಮ್ಮ ಮಗನನ್ನು ಅದರಿಂದ ಕಲಿಯಲು ಮತ್ತು ಮತ್ತೆ ಪ್ರಯತ್ನಿಸಲು ಪ್ರೋತ್ಸಾಹಿಸಬೇಕು. ಅಲ್ಲದೆ, ಅವರು ಪರೀಕ್ಷೆಗಳಲ್ಲಿ ಅಥವಾ ಜೀವನದಲ್ಲಿ ಸೋತರೆ ದೂಷಿಸಬೇಡಿ, ಬದಲಿಗೆ ಸೋಲಿನ ನಂತರವೇ ಗೆಲುವಿನ ಮೆಟ್ಟಿು ಎಂದು ಬುದ್ಧಿಮಾತನ್ನು ಹೇಳಿ.
ಇದನ್ನೂ ಓದಿ: 25 ಲಕ್ಷ ರೂ., 2 ಕೆಜಿ ಚಿನ್ನ! ಪತ್ನಿ ನೇಣಿಗೆ ಶರಣು; ಪತಿ ಮೇಲೆಯೇ ಹೆತ್ತವರ ಕಣ್ಣು | Suicide Case
5. ಮಹಿಳೆಯರನ್ನು ಗೌರವಿಸುವುದು
ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ತಂದೆಯಾದವರು ತನ್ನ ನಡವಳಿಕೆ ಮತ್ತು ಮಾತುಗಳ ಮೂಲಕ ತನ್ನ ಮಗನಿಗೆ ಕಲಿಸಬೇಕು.
6. ಆತ್ಮರಕ್ಷಣೆ ಮತ್ತು ಧೈರ್ಯ
ಹದಿಹರೆಯದ ವರ್ಷಗಳು ಎಲ್ಲರಿಗೂ ಸವಾಲುಗಳನ್ನು ಒಡ್ಡುತ್ತವೆ. ಈ ವಯಸ್ಸಿನಲ್ಲಿ, ಮಗನಿಗೆ ಸವಾಲುಗಳು ಹೆಚ್ಚಾಗುತ್ತವೆ. ಅಂತಹ ಸಂದರ್ಭಗಳಲ್ಲಿ, ತಂದೆ ಮಗುವಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹೇಗೆ ಬಲವಾಗಿರಬೇಕೆಂದು ಕಲಿಸಬೇಕು. ಕಷ್ಟದ ಸಮಯದಲ್ಲೂ ಹಿಂದೆ ಸರಿಯದೆ ಧೈರ್ಯದಿಂದ ಇರುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಬೇಕು. ಇವು ಭವಿಷ್ಯದಲ್ಲಿ ಅವರಿಗೆ ಯಶಸ್ಸನ್ನು ತರುತ್ತದೆ. (ಏಜೆನ್ಸೀಸ್)
ರಾಜಸ್ಥಾನದ ಭಾರತ-ಪಾಕಿಸ್ತಾನ ಗಡಿ ಬಳಿ ಶಂಕಿತ ಡ್ರೋನ್ ಪತ್ತೆ: ಎಚ್ಚರಿಕೆ ಘೋಷಣೆ | Jaipur