More

  ರಾಜ್ಯ ರಾಜಕಾರಣದಲ್ಲಿ ಆಗಲಿದೆ ಅಲ್ಲೋಲ-ಕಲ್ಲೋಲ!; ಕುತೂಹಲ ಮೂಡಿಸಿದೆ ಕಾಲಜ್ಞಾನ ಹೇಳಿಕೆ

  ವಿಜಯಪುರ: ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಸಂಭವಿಸಲಿದೆ ಎಂದು ಬಬಲಾದಿ ಮಠದ ಪೂಜ್ಯ ಸಿದ್ರಾಮಯ್ಯ ಹೊಳಿಮಠ ಭವಿಷ್ಯ ನುಡಿದಿದ್ದಾರೆ. ಕಾಲಜ್ಞಾನಕ್ಕೆ ಹೆಸರುವಾಸಿಯಾದ ಬಬಲಾದಿ ಸದಾಶಿವ ಅಜ್ಜನ ಜಾತ್ರೆ ಹಿನ್ನೆಲೆ ಸೋಮವಾರ ಕಾಲಜ್ಞಾನದ ಹೇಳಿಕೆ ಹೇಳಿದ ಶ್ರೀಗಳು, ಪಕ್ಷ-ಪಕ್ಷದೊಳಗೆ ದ್ವೇಷ ಅಸೂಯೆ, ಗಲಾಟೆ ಹೆಚ್ಚಲಿವೆ. ಒಬ್ಬ ಗಣ್ಯ ವ್ಯಕ್ತಿಯ ಏರಿಳಿತವಾಗಲಿದೆ, ಅದು ಪಕ್ಷ ಇರಬಹುದು ಅಥವಾ ಬೇರೇನೋ ಇರಬಹುದು, ರಾಜಕಾರಣಿಗಳು ಕೆಟ್ಟ ಫಲ ಉಣ್ಣುತ್ತಾರೆ. ಇರಾನ್ ಮತ್ತು ಅಮೆರಿಕದಲ್ಲಿ ಕೇಡು ಸಂಭವಿಸಲಿದೆ ಎಂದು ಹೇಳಿದ್ದಾರೆ.

  ಕಾಳು ಕಡಿ ಬೆಲೆ ಗಗನಕ್ಕೇರುತ್ತವೆ, ಹಿಂಗಾರು ಒಂದು ಕಡೆಯಾದರೆ ಒಂದು ಕಡೆ ಆಗಲ್ಲ, ಅನ್ಯ ಕೋಮಿನ ದಂಗೆ ಏಳುತ್ತವೆ, ಅಗ್ನಿ ಅವಘಡ ಹೆಚ್ಚುತ್ತವೆ, ಭೂಮಿ ಕುಪ್ಪಳಿಸಲಿದೆ, ಯುದ್ದ ಭಯ ಐತಿ ಎಂದಿದ್ದಾರೆ. ತೆಲಗು ರಾಜ್ಯಕ್ಕೆ ಖಂಡಾಂತರ ಇದೆ. ತೆಲಗು ರಾಜ್ಯಕ್ಕೆ ಯುದ್ಧ ಭಯ ಹಾಗೂ ಕೇಡು ಇದೆ. ಮಳೆ ಬೆಳೆ ಸಮಾನಾಗಿ ಇದೆ ಎಂದು ಸಿದ್ರಾಮಯ್ಯ ಭವಿಷ್ಯ ನುಡಿದಿದ್ದಾರೆ.

  ಜೆಡಿಎಸ್​ ಡಿಮ್ಯಾಂಡೆಡ್​ ಪಾರ್ಟಿ ಎಂದ ರೇವಣ್ಣ; ಹೌದು ಎಂದು ಒಪ್ಪಿದ್ರು ಸಿದ್ದರಾಮಯ್ಯ, ಈಶ್ವರಪ್ಪ!

  VIDEO| ವಾರ್​ಗಿತ್ತಿಯರ ವಾರ್​! ಆಸ್ತಿಗಾಗಿ ನಡು ರಸ್ತೆಯಲ್ಲೇ ಜಡೆ ಜಡೆ ಹಿಡಿದು ಹೊಡೆದಾಡಿಕೊಂಡ ನಾರಿಯರು!

   

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts