ಬಿಜೆಪಿ ಮುಖಂಡರ ಜತೆ ಸಾ.ರಾ.ಮಹೇಶ್​ ಚರ್ಚೆ? ಮುರಳೀಧರ್​ ರಾವ್​ ಟ್ವೀಟ್​ ಮಾಡಿದ್ದು ಹೀಗೆ…

ಬೆಂಗಳೂರು: ಅತೃಪ್ತ ಶಾಸಕರು ಆಗಮಿಸಿ ಸ್ಪೀಕರ್​ಗೆ ರಾಜೀನಾಮೆ ಕೊಟ್ಟು ತೆರಳಿದ ಬೆನ್ನಲ್ಲೇ ಜೆಡಿಎಸ್ ಸಚಿವ ಸಾ.ರಾ.ಮಹೇಶ್​ ಅವರು ಬಿಜೆಪಿ ಮುಖಂಡರಾದ ಕೆ.ಎಸ್​.ಈಶ್ವರಪ್ಪ ಮತ್ತು ಮುರಳೀಧರ್​ ರಾವ್​ ಜತೆ ಕುಮಾರಕೃಪ ಅತಿಥಿಗೃಹದಲ್ಲಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿತ್ತು.

ಆದರೆ ಈ ವಿಚಾರವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್​ ಹಾಗೂ ಜೆಡಿಎಸ್ ಪಕ್ಷದವರು ಅಲ್ಲಗಳೆದಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಮುರಳೀಧರ್​, ನಾವು ಜೆಡಿಎಸ್​ ಸಚಿವರೊಂದಿಗೆ ಚರ್ಚೆ ನಡೆಸಿದ್ದು ಸತ್ಯಕ್ಕೆ ದೂರವಾದ ವರದಿ. ಸಾರ್ವಜನಿಕ ಸ್ಥಳದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಕಾಕತಾಳೀಯವಷ್ಟೇ. ಅಷ್ಟಕ್ಕೇ ಹೆಚ್ಚಿನ ಊಹಾಪೋಹ ಮಾಡುವುದು ಬೇಡ ಎಂದಿದ್ದಾರೆ.

ಅಲ್ಲದೆ ಜೆಡಿಎಸ್​ ಕೂಡ ಟ್ವೀಟ್​ ಮಾಡಿದ್ದು, ಕುಮಾರಕೃಪ ಗೆಸ್ಟ್​ಹೌಸ್​ಗೆ ಶಾಸಕರು, ಮಂತ್ರಿಗಳು ವಿಶ್ರಾಂತಿ ಪಡೆಯಲು ಹೋಗುವುದು ಸಹಜ. ಹೀಗೆ ಹೋಗುವಾಗ ದಾರಿ ಮಧ್ಯ ಸಾ.ರಾ.ಮಹೇಶ್​ ಅವರು ಆಕಸ್ಮಿಕವಾಗಿ ಈಶ್ವರಪ್ಪ, ಮುರಳೀಧರ್​ ರಾವ್​ ಅವರನ್ನು ಭೇಟಿಯಾಗಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಜೆಡಿಎಸ್​-ಕಾಂಗ್ರೆಸ್​ ಮೈತ್ರಿಕೂಟ ಸದೃಢವಾಗಿದ್ದು ಸಮರ್ಥ ಆಡಳಿತ ಮುಂದುವರಿಸಲಿದೆ ಎಂದು ಪೋಸ್ಟ್​ ಮಾಡಿದೆ.

Leave a Reply

Your email address will not be published. Required fields are marked *