ಸಾಂಪ್ರದಾಯಿಕ ವಿವಿಗಳಲ್ಲಿ ದೂರ ಶಿಕ್ಷಣ ಬೇಡ

ಮೈಸೂರು: ದೂರ ಶಿಕ್ಷಣ ‌ನೀಡಲು ಪ್ರತ್ಯೇಕ ವಾದ ಕರ್ನಾಟಕ ‌ಮುಕ್ತ ವಿಶ್ವವಿದ್ಯಾಲಯ ಇರುವಾಗ ಸಾಂಪ್ರದಾಯಿಕ ‌ವಿವಿಗಳಿಗೆ ದೂರ ಶಿಕ್ಷಣ ನೀಡಲು ಸರ್ಕಾರ ಅನುಮತಿ ನೀಡಿರುವ‌ ಕ್ರಮ ಸರಿಯಲ್ಲ ಎಂದು ಮುಕ್ತ ವಿವಿ‌ ವಿಶ್ರಾಂತ ಕುಲಪತಿ ‌ಡಾ.ಎನ್.ಎಸ್.ರಾಮೇಗೌಡ ಹೇಳಿದರು.

ಸಾಂಪ್ರದಾಯಿಕ ವಿವಿಗಳಲ್ಲಿ ಆರ್ಥಿಕ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ದೂರ ಶಿಕ್ಷಣ ನೀಡಲು ಅನುಮತಿ ನೀಡಿರುವುದಾಗಿ ಸರ್ಕಾರ ತಿಳಿಸಿದೆ. ಆದರೆ ಶಿಕ್ಷಣ ಇದರಿಂದ ವ್ಯಾಪಾರಿಕರಣವಾದಂತೆ ಅಗುತ್ತದೆ. ಹಣ ಇದ್ದವರಿಗೆ‌ ಉನ್ನತ ಶಿಕ್ಷಣ ಎಂದಾಗುತ್ತದೆ. ಆದ್ದರಿಂದ ಸರ್ಕಾರ ಇಂತಹ ನಿರ್ಧಾರದಿಂದ‌ ಹಿಂದೆ ಸರಿಯಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಮುಕ್ತ ವಿವಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಈಗಾಗಲೇ ಗೊಂದಲ‌ ಇರುವುದರಿಂದ ಅದನ್ನು ಹೋಗಲಾಡಿಸಬೇಕು. ದೂರ ಶಿಕ್ಷಣ ಪದ್ಧತಿ ಉನ್ನತ ಶಿಕ್ಷಣ ವಂಚಿತರಿಗೆ ಉತ್ತಮ ಅವಕಾಶವಾಗಿರುವುದರಿಂದ ಅದರ ಸುಧಾರಣೆ ಮಾಡಬೇಕು ಎಂದರು.

ಹಿಂದೆ ಅಗಿರುವ ತಪ್ಪನ್ನು ಸರಿಪಡಿಸಿಕೊಂಡು‌ ಮುಂದೆ ಮುಕ್ತ ವಿವಿ ಸುಧಾರಣೆಗೆ ನಾನು ಸೇರಿದಂತೆ ನಾಲ್ವರ ಸಮಿತಿ ರಚಿಸಲಾಗಿದ್ದು ಸದ್ಯವೇ ವರದಿ ನೀಡಲಾಗುವುದು ಎಂದರು.

Leave a Reply

Your email address will not be published. Required fields are marked *