ರಿಸಲ್ಟ್‌ ಬಗ್ಗೆ ಕಾನ್ಫಿಡೆನ್ಸ್‌ ಇದೆ, ಓವರ್‌ ಕಾನ್ಫಿಡೆನ್ಸ್‌ ಇಲ್ಲ; ನನಗೆ ಯಾವುದೇ ರಾಜಕೀಯ ಒತ್ತಡವಿಲ್ಲ ಎಂದ ಸುಮಲತಾ

ಬೆಂಗಳೂರು: ಮಂಡ್ಯದಲ್ಲಿ ಮೈತ್ರಿ ಧರ್ಮ ಪಾಲನೆ ಆಗಿಲ್ಲ. ಬಹಿರಂಗವಾಗಿಯೇ ಹಲವು ಕಾರ್ಯಕರ್ತರು ಬೆಂಬಲಿಸಿದರು. ದಿನಕ್ಕೊಂದು ಸಮೀಕ್ಷೆ ಬರುತ್ತಿದೆ. ನಾನು ಚಿಂತಿಸುತ್ತಿಲ್ಲ. ಸದ್ಯ ನನಗೆ ಯಾವುದೇ ರಾಜಕೀಯ ಒತ್ತಡವಿಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ನಟಿ ಸುಮಲತಾ ಅಂಬರೀಷ್‌ ತಿಳಿಸಿದ್ದಾರೆ.

ಸಿನಿಮಾ ಪ್ರಚಾರವೊಂದರ ವೇದಿಕೆಯಲ್ಲಿ ಮಾತನಾಡಿದ ಅವರು, ಮಂಡ್ಯ ಕಾಂಗ್ರೆಸ್ ರೆಬಲ್ ನಾಯಕರ ಪಾರ್ಟಿ ವಿಚಾರವಾಗಿ ಖಾಸಗಿ ಹೋಟೆಲ್‌ನಲ್ಲಿ ಪಾರ್ಟಿ ಮಾಡಿದ್ದ ಬಗ್ಗೆ ಸ್ಪಷ್ಟನೆ ನೀಡಿ, ಅದೊಂದು ಬರ್ತ್​ಡೇ ಪಾರ್ಟಿ ಅಷ್ಟೆ. ರಿಸಲ್ಟ್ ಬಗ್ಗೆ ಓವರ್ ಕಾನ್ಫಿಡೆನ್ಸ್ ಅಂತ ಇಲ್ಲ, ಕಾನ್ಫಿಡೆನ್ಸ್ ಇದೆ. ಅಂಬರೀಷ್ ಚುನಾವಣೆ ರಿಸಲ್ಟ್ ಇದ್ದಾಗ ಬಿಂದಾಸ್ ಆಗಿ ಇರುತ್ತಿದ್ದರು. ಆದರೆ, ನನಗೆ ಸ್ವಲ್ಪ ಕುತೂಹಲವಿದೆ. ದಿನಕ್ಕೊಂದು ಸಮೀಕ್ಷೆ ಬರುತ್ತಿದೆ. ಅದರ ಕುರಿತು ನಾನೇನು ಚಿಂತಿಸುತ್ತಿಲ್ಲ. ಮಂಡ್ಯದಲ್ಲಿ ಮನೆ ಕಟ್ಟುವ ಪ್ಲ್ಯಾನ್ ಇದೆ ಎಂದು ಹೇಳಿದರು.

ಅಮರ್ ಸಿನಿಮಾನಾ ಇನ್ನೂ ನಾನು ನೋಡಿಲ್ಲ. ಡಾಟರ್ ಆಫ್ ಪಾರ್ವತಮ್ಮ ಸಿನಿಮಾ ನನ್ನ ಸಿನಿಮಾ ಎನ್ನುವುದಕ್ಕಿಂತ ಹರಿಪ್ರಿಯಾ ಸಿನಿಮಾ. ಅಂಬಿ ನೋಡಿದ ಕೊನೆಯ ಸಿನಿಮಾವೂ ನನ್ನ ನಟನೆಯ ತಾಯಿಗೆ ತಕ್ಕ ಮಗ ಆಗಿತ್ತು. ಸದ್ಯ ನನಗೆ ಯಾವುದೇ ರಾಜಕೀಯ ಒತ್ತಡವಿಲ್ಲ. ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ನಟಿಸಿದ್ದೇನೆ. ನಾನು ಗೆಲ್ಲಲಿ ಅಂತಾ ಚಿತ್ರತಂಡ ಹಾರೈಸಿದೆ ಎಂದರು.

ನನ್ನ ಸಿನಿ ಜರ್ನಿಯಲ್ಲೇ ಇದು ವಿಶೇಷ ಸಿನಿಮಾ. ಇಂಥದ್ದೊಂದು ಥ್ರಿಲ್ಲರ್ ಸಿನಿಮಾನಾ ನಾನೆಂದು ಮಾಡಿರಲಿಲ್ಲ. ಇದೊಂದು ಮಹಿಳಾ ಪ್ರಧಾನ ಸಿನಿಮಾ. ಹರಿಪ್ರಿಯಾ 25ನೇ ಸಿನಿಮಾಗೆ ಒಳ್ಳೆಯದು ಆಗಲಿ‌. ಧನಂಜಯ್ ಸಾಹಿತ್ಯ ಬರೆದಿದ್ದಾರೆ. ಅವರಲ್ಲಿ ಇಂತಹ ಪ್ರತಿಭೆ ಇರುವುದು ನನಗೆ ಗೊತ್ತಿರಲಿಲ್ಲ. ಜೋಡೆತ್ತು, ನಿಖಿಲ್ ಎಲ್ಲಿದ್ದೀಯಪ್ಪಾ ಸಿನಿಮಾಗಳಿಗೆ ಒಳ್ಳೆಯದಾಗಲಿ. ಚುನಾವಣೆ ಪ್ರಚಾರ ನಂತರ ನಾನು, ದರ್ಶನ್, ಯಶ್ ಒಟ್ಟಿಗೆ ಕೂತು ಚರ್ಚಿಸಿಲ್ಲ. ಸಿನಿಮಾರಂಗದಿಂದ ಹಲವರು ನನಗೆ ಶುಭಾಶಯ ತಿಳಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು ಎಂದರು. (ದಿಗ್ವಿಜಯ ನ್ಯೂಸ್)