Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಮಂಗಳೂರಿನ ಮೀನುಗಳಲ್ಲಿ ಫಾರ್ಮಲಿನ್ ಇಲ್ಲ

Saturday, 07.07.2018, 3:00 AM       No Comments

– ವಿಜಯವಾಣಿ ಸುದ್ದಿಜಾಲ ಮಂಗಳೂರು
ಕೇರಳದ ಕೊಚ್ಚಿನ್‌ನಲ್ಲಿರುವ ಕೇಂದ್ರ ಮೀನುಗಾರಿಕೆ ತಂತ್ರಜ್ಞಾನ ಸಂಸ್ಥೆ (ಸಿಐಎಫ್‌ಟಿ) ಅಭಿವೃದ್ಧಿಪಡಿಸಿದ ವಿಶೇಷ ಕಿಟ್ ಮೂಲಕ ಶುಕ್ರವಾರ ಮಂಗಳೂರಿನ ವಿವಿಧೆಡೆ ಪರೀಕ್ಷೆ ನಡೆಸಿದ ಆಹಾರ ಸುರಕ್ಷತಾ ಅಂಕಿತ ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮೀನುಗಳಲ್ಲಿ ಫಾರ್ಮಲಿನ್ ಅಂಶ ಪತ್ತೆಯಾಗಿಲ್ಲ.
ಮಂಗಳೂರು ಬಂದರು, ಹರೇಕಳ, ಬಿಜೈ ಮತ್ತು ಮುಕ್ಕಗಳಲ್ಲಿ ಅಧಿಕಾರಿಗಳ ತಂಡ ಮೀನುಗಳನ್ನು ಪರೀಕ್ಷೆಗೆ ಒಳಪಡಿಸಿದೆ. ಈ ಸಂದರ್ಭ ಎಲ್ಲ ಸ್ಯಾಂಪಲ್‌ಗಳು ನೆಗೆಟಿವ್ (ಫಾರ್ಮಲಿನ್ ಅಂಶ ಇಲ್ಲ ಎಂದು) ಬಂದಿದೆ. ಅಧಿಕಾರಿಗಳ ತಂಡ ಶನಿವಾರ ಮತ್ತೆ ಪರೀಕ್ಷೆ ಕಾರ್ಯ ಮುಂದುವರಿಸಲು ಉದ್ದೇಶಿಸಿದೆ.
ಮೀನುಗಾರಿಕಾ ಇಲಾಖೆ ಉಪನಿರ್ದೇಶಕ (ದ.ಕ.) ಮಹೇಶ್ ಕುಮಾರ್, ಆಹಾರ ಸುರಕ್ಷತಾ ಅಂಕಿತ ಅಧಿಕಾರಿಗಳಾದ ಡಾ.ರಾಜೇಶ್, ಡಾ.ನವೀನ್, ಡಾ.ರಾಜು ಭಾಗವಹಿಸಿದ್ದರು.
ಒಂದು ಕಿಟ್‌ನಲ್ಲಿ 20 ಸ್ಟ್ರಿಪ್‌ಗಳಿದ್ದು, ಎರಡು ರೀತಿಯ ದ್ರಾವಣಗಳನ್ನು ಬೆರೆಸಬೇಕು. ಒಂದು ಸ್ಟ್ರಿಪ್‌ನಿಂದ ಪರೀಕ್ಷೆಗೆ ಒಳಪಡಿಸಲಿರುವ ಮೀನನ್ನು ತಿವಿದು ಬೆರೆಸಿದ ದ್ರಾವಣದಲ್ಲಿ ಮುಳುಗಿಸಬೇಕು. ಈ ಸಂದರ್ಭ ಸ್ಟ್ರಿಪ್ ನೀಲ ಬಣ್ಣಕ್ಕೆ ತಿರುಗುತ್ತದೆ. ಈ ಸಂದರ್ಭ ಬಣ್ಣದ ಗಾಢತೆ ಅವಲಂಬಿಸಿ ಮೀನಿನಲ್ಲಿ ಫಾರ್ಮಲಿನ್ ಬಳಸಲಾಗಿದೆಯೇ ಎಂದು ತೀರ್ಮಾನಿಸಲಾಗುತ್ತದೆ.

ಲೀಗಲ್ ಸ್ಯಾಂಪಲ್: ಸಾಮಾನ್ಯ ಸ್ಯಾಂಪಲ್ ಪರೀಕ್ಷೆ ಸಂದರ್ಭ ‘ಪಾಸಿಟಿವ್’ ಬಂದರೆ, ಪರೀಕ್ಷೆಗೆ ಒಳಪಡಿಸಿದ ಮೀನುಗಳ ಲೀಗಲ್ ಸ್ಯಾಂಪಲ್ ತೆಗೆಯಲಾಗುವುದು. ಈ ಸಂದರ್ಭ ಒಂದೇ ಮೀನಿನ ನಾಲ್ಕು ಸ್ಯಾಂಪಲ್‌ಗಳನ್ನು ತೆಗೆಯಲಾಗುತ್ತದೆ. ಒಂದು ಸ್ಯಾಂಪಲನ್ನು ಎನ್‌ಎಬಿಎಲ್(ನೇಶನಲ್ ಅಕ್ರಡೇಶನ್ ಬೋರ್ಡ್ ಫಾರ್ ಟೆಸ್ಟಿಂಗ್ ಆ್ಯಂಡ್ ಕ್ಯಾಲಿಬ್ರೇಶನ್ ಲ್ಯಾಬೊರೇಟರೀಸ್) ಲ್ಯಾಬ್‌ಗಳಿಗೆ ಕಳುಹಿಸಲಾಗುತ್ತದೆ. ಒಂದು ಸ್ಯಾಂಪಲ್ ಡೀಲರ್‌ಗೆ ಒದಗಿಸಲಾಗುತ್ತದೆ. ಆ ಸ್ಯಾಂಪಲನ್ನು ಡೀಲರ್ ಖಾಸಗಿ ಲ್ಯಾಬೊರೇಟರಿಯಲ್ಲಿ ಪರೀಕ್ಷಿಸಿಕೊಳ್ಳಲು ಅವಕಾಶವಿದೆ. ಇನ್ನೆರಡು ಸ್ಯಾಂಪಲ್‌ಗಳು ವಿಭಿನ್ನ ರೀತಿಯಲ್ಲಿ ಪರೀಕ್ಷೆಗೆ ಒಳಗಾಗುತ್ತವೆ.
ಲೀಗಲ್ ಸ್ಯಾಂಪಲ್‌ನಲ್ಲಿ ಫಾರ್ಮಲಿನ್ ಅಂಶ ದೃಢವಾದರೆ ಕೇಸು ನ್ಯಾಯಾಲಯದ ಮೆಟ್ಟಿಲೇರುತ್ತದೆ. ಬಳಿಕ ಅಪರಾಧಿಗಳಿಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶವಿರುತ್ತದೆ.

ದೂರು ಸಲ್ಲಿಸಬಹುದು: ನಿರ್ದಿಷ್ಟ ಪ್ರದೇಶದಲ್ಲಿ ಮೀನುಗಳಲ್ಲಿ ಫಾರ್ಮಲಿನ್ ಬಳಕೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರು ಅಥವಾ ಖಚಿತ ಮಾಹಿತಿ ಒದಗಿಸಿದರೆ ಪರೀಕ್ಷಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿರ್ದಿಷ್ಟ ಕ್ರಮದಲ್ಲಿ ಪರೀಕ್ಷೆ ನಡೆಸಬೇಕಾಗಿರುವ ಕಾರಣ ಕಿಟ್ ಸಾರ್ವಜನಿಕರ ಕೈಗೆ ನೇರವಾಗಿ ಸಿಗುತ್ತಿಲ್ಲ. ಅಗತ್ಯವಿರುವವರು ಆಹಾರ ಸುರಕ್ಷಾ ಅಧಿಕಾರಿಗಳಿಗೆ 9449843255 ಅಥವಾ 9845228689 ಮಾಹಿತಿ ನೀಡಬಹುದು. ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಹೊರ ರಾಜ್ಯಗಳಿಂದ ಕೇರಳಕ್ಕೆ ತರುವ ಬೃಹತ್ ಪ್ರಮಾಣದ ಮೀನುಗಳಲ್ಲಿ ಮನುಷ್ಯನ ಮೃತದೇಹ ಕೆಡದಂತೆ ಇಡಲು ಬಳಸುವ ಕ್ಯಾನ್ಸರ್‌ಕಾರಕ ಫಾರ್ಮಲಿನ್ ರಾಸಾಯನಿಕ ಅಂಶವಿರುವುದು ಕೊಚ್ಚಿನ್‌ನ ಸಿಐಎಫ್‌ಟಿ ಕೇಂದ್ರದ ಲ್ಯಾಬ್‌ನಲ್ಲಿ ಇತ್ತೀಚೆಗೆ ದೃಢಪಟ್ಟಿತ್ತು.

ತಾಲೂಕಿನ ನಾಲ್ಕು ಕಡೆ ಸ್ಯಾಂಪಲ್‌ಗಳನ್ನು ತೆಗೆದು ಪರೀಕ್ಷಿಸಲಾಗಿದ್ದು, ಎಲ್ಲ ಕಡೆ ಫಲಿತಾಂಶ ನೆಗೆಟಿವ್ ಬಂದಿದೆ. ಸಿಐಎಫ್‌ಟಿ ಕಿಟ್‌ನಿಂದ ಫಾರ್ಮಲಿನ್ ಅಂಶವಿರುವುದನ್ನು ಮಾತ್ರ ಪತ್ತೆ ಹಚ್ಚಲಾಗುತ್ತದೆ. ಇತರ ರಾಸಾಯನಿಕ ವಸ್ತುಗಳನ್ನು ಇದು ಗುರುತಿಸುವುದಿಲ್ಲ.
ಡಾ.ರಾಜೇಶ್
ಆಹಾರ ಸುರಕ್ಷತಾ ಅಂಕಿತ ಅಧಿಕಾರಿ

Leave a Reply

Your email address will not be published. Required fields are marked *

Back To Top