ರೋಷನ್​ ಬೇಗ್​ ಸೇರಿ ಹಲವು ಶಾಸಕರು ಬಿಜೆಪಿಗೆ ಬರುವ ಲಕ್ಷಣ ಕಾಣುತ್ತಿದೆ: ಉಮೇಶ್​ಜಾಧವ್​

ಕಲಬುರಗಿ: ಸಮ್ಮಿಶ್ರ ಸರ್ಕಾರದ ವಿರುದ್ಧ ರೋಷನ್ ಬೇಗ್ ಗುಡುಗಿದ್ದಾರೆ. ರೋಷನ್ ಬೇಗ್ ಸೇರಿ ಹಲವರು ಬಿಜೆಪಿಗೆ ಬರುವ ಲಕ್ಷಣ ಕಾಣುತ್ತಿದ್ದು, 20 ರಿಂದ 25 ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್​ ಜಾಧವ್​ ಹೇಳಿದರು.

ಕಲಬುರಗಿಯಲ್ಲಿ ಮಾತನಾಡಿದ ಅವರು, ಸುಭದ್ರ ಸರ್ಕಾರಕ್ಕಾಗಿ ಕಾಂಗ್ರೆಸ್​ನ ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದ ಅವರು, ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ಭೀತಿ ಇದೆ. ಇದರಿಂದ ಇವಿಎಂ ಯಂತ್ರದ ಮೇಲೆ ಆರೋಪ ಹೊರಿಸೋಕೆ ಮುಂದಾಗಿದ್ದಾರೆ. ಅದರ ಅರ್ಥ ಬಿಜೆಪಿಗೆ ಗೆಲ್ಲಲಿದೆ, ಕಾಂಗ್ರೆಸ್ ಸೋಲಲಿದೆ ಅನ್ನೋ ಲೆಕ್ಕದಲ್ಲಿ ಖರ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಲಬುರಗಿಯಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ. ಚಿಂಚೋಳಿ ಉಪಚುನಾವಣೆಯಲ್ಲೂ ನಾವು ಗೆಲ್ಲಲಿದ್ದೇವೆ. ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿರುವುದು ನೋಡಿದರೆ ಕಾಂಗ್ರೆಸ್​ಗೆ ಸೋಲು ಖಚಿತ ಅನಿಸುತ್ತಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತ ಕ್ರಮವಾಗಿ ಬಂದೋಬಸ್ತ್ ಕೈಗೊಂಡಿದ್ದಾರೆ ಎಂದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *