ನೆಲ್ಲೂರು: ಈಗಿರುವ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಯೋಜನೆಗಳಿಲ್ಲ. ಇಲ್ಲಿ ಎಲ್ಲರ ಕಣ್ಣಿಗೆ ಕಾಣಿಸುತ್ತಿರೋದು ಕೇವಲ ಹಗರಣಗಳು ಮಾತ್ರ ಎಂದು ಆಂಧ್ರಪ್ರದೇಶ ಮಾಜಿ ಸಚಿವ ಕಾಕಣಿ ಗೋವರ್ಧನ್ ರೆಡ್ಡಿ ಕಿಡಿಕಾರಿದರು.

ಇದನ್ನೂ ಓದಿ: ಭಾರತದ ಭವಿಷ್ಯ & ಶಿಕ್ಷಣ ವ್ಯವಸ್ಥೆ ನಾಶಮಾಡುವ ಯತ್ನ; ಆರ್ಎಸ್ಎಸ್ ವಿರುದ್ಧ ರಾಹುಲ್ ಗಾಂಧಿ ಆರೋಪ | Rahul Gandhi
ಇಂದು ನೆಲ್ಲೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಕಣಿ, “ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಯೋಜನೆಗಳಿಲ್ಲ. ಹಗರಣಗಳು ಮಾತ್ರ ಗೋಚರಿಸುತ್ತಿವೆ. ಅಭಿವೃದ್ಧಿಯ ಹೆಸರಿನಲ್ಲಿ ಭ್ರಷ್ಟಾಚಾರ ಹೆಚ್ಚಾಗಿವೆ. ಸರ್ಕಾರ ನ್ಯಾಯಾಂಗ ಪೂರ್ವವೀಕ್ಷಣೆ ಮತ್ತು ರಿವರ್ಸ್ ಟೆಂಡರಿಂಗ್ ನೀತಿಯನ್ನು ಹಾಡಿ ಹೊಗಳುತ್ತಿದೆ” ಎಂದರು.
“ಸಿಎಂ ಚಂದ್ರಬಾಬು ನಾಯ್ಡು ತನ್ನ ಜನರಿಂದ ಗುತ್ತಿಗೆ ಕೆಲಸಗಳನ್ನು ಮಾಡಿಸಿಕೊಳ್ಳಲು ಇಂತಹ ಪಿತೂರಿಗಳಲ್ಲಿ ತೊಡಗಿದ್ದಾರೆ. ಹಿಂದಿನ ಸರ್ಕಾರದಲ್ಲಿ, ಸರ್ಕಾರವು ಪೋಲಾವರಂ ಯೋಜನೆಯಿಂದ ರಿವರ್ಸ್ ಟೆಂಡರಿಂಗ್ ಮೂಲಕ 800 ಕೋಟಿ ರೂ. ಆದಾಯವನ್ನು ಗಳಿಸಿತು. ನಾವು ರಿವರ್ಸ್ ಟೆಂಡರಿಂಗ್ ಮೂಲಕ ಸರ್ಕಾರಕ್ಕೆ 7,500 ಕೋಟಿ ರೂ. ಸಾರ್ವಜನಿಕ ಹಣವನ್ನು ಆದಾಯವಾಗಿ ತಂದಿದ್ದೆವು” ಎಂದು ಹೇಳಿದರು.
ಇದನ್ನೂ ಓದಿ: ಇನ್ನೂ 5 ವರ್ಷ… ಮಿಂಚಿನ ಓಟ, ಶರವೇಗದ ಸ್ಟಂಪಿಂಗ್! ‘ಕ್ಯಾಪ್ಟನ್ ಕೂಲ್’ ಕುರಿತು ಮಾಜಿ ಕ್ರಿಕೆಟಿಗ ಭವಿಷ್ಯ ನುಡಿ | MS Dhoni
“ಈ ನೀತಿಯನ್ನು ನೀತಿ ಆಯೋಗ ಕೂಡ ಮೆಚ್ಚಿದೆ. ಚಂದ್ರಬಾಬು ಯೋಜನೆಯ ತಕ್ಕಂತೆ ಕಳ್ಳತನ ಮಾಡುತ್ತಿದ್ದಾರೆ. ಅವರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಖತ್ ಬಿಜಿಯಾಗಿದ್ದಾರೆ. ಚಂದ್ರಬಾಬು ನಾಯ್ಡು ಭೂ ಸಂಗ್ರಹಣೆಯ ಹೆಸರಿನಲ್ಲಿ ತಮ್ಮ ಜನರಿಗೆ ಗುತ್ತಿಗೆ ಕೆಲಸಗಳನ್ನು ವಹಿಸಿದ್ದಾರೆ. ಗುತ್ತಿಗೆ ವ್ಯವಸ್ಥೆ ದೋಷಪೂರಿತವಾಗಿದೆ. ಅಮರಾವತಿ ನಿರ್ಮಾಣದ ಹೆಸರಿನಲ್ಲಿ ನಡೆಯುತ್ತಿರುವ ಅಭಿವೃದ್ಧಿಯಲ್ಲಿ ಭ್ರಷ್ಟಾಚಾರ ಎದ್ದು ಕಾಣುತ್ತಿದೆ. ಸಾರ್ವಜನಿಕ ಹಣ ಲೂಟಿಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ” ಎಂದು ಆರೋಪಿಸಿದರು,(ಏಜೆನ್ಸೀಸ್).
ನಾನೊಂದು ತೀರ, ನೀನೊಂದು ತೀರ! ಮೌನಕ್ಕೆ ಶರಣಾದ ಮುಸ್ಕಾನ್ ಸರ್ಕಾರಿ ವಕೀಲರಿಗಾಗಿ ಅಳಲು | Murder Case