ಮುಗಳಖೋಡ ಪ್ರಮುಖ ಕಾಲುವೆಗೆ ಶಾಸಕ ಸಿದ್ದು ಸವದಿ ಭೇಟಿ

ತೇರದಾಳ: ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ ಬಿಡುತ್ತಿರುವ ನೀರಿನ ಮಟ್ಟ ಪರಿಶೀಲಿಸಲು ಶಾಸಕ ಸಿದ್ದು ಸವದಿ ಗುರುವಾರ ನೆರೆಯ ಬೆಳಗಾವಿ ಜಿಲ್ಲೆಯ ಮುಗಳಖೋಡ ಪ್ರಮುಖ ಕಾಲುವೆಗೆ ಭೇಟಿ ನೀಡಿದರು.

ಹಿಡಕಲ್ ಜಲಾಶಯದಿಂದ 1 ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಸದ್ಯ ಅಥಣಿ ತಾಲೂಕು ವ್ಯಾಪ್ತಿಗೆ ತಲುಪಿದೆ ಎಂದು ಅಲ್ಲಿನ ಅಧಿಕಾರಿ ಶಾಸಕರಿಗೆ ಮಾಹಿತಿ ನೀಡಿದರು.

ಹರಿಯುವ ನೀರಿನ ಮಟ್ಟ ಗಮನಿಸಿದ ಶಾಸಕ ಸವದಿ, ಈ ರೀತಿ ನೀರು ಹರಿದರೆ ಮುಂದೆ ಹೇಗೆ ಹೋಗಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲೆಯ ನೀರಾವರಿ ಇಲಾಖೆ ಅಧಿಕಾರಿಗೆ ಕರೆ ಮಾಡಿ ತೇರದಾಳ, ರಬಕವಿ, ಬನಹಟ್ಟಿ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಗಳು ಒಣಗುತ್ತಿವೆ. ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ನಮ್ಮ ಭಾಗಕ್ಕೂ ನೀರು ಬಿಡಿ ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *