ಸಂಡೂರು: ಒಳ ಮೀಸಲಾತಿ ಜಾರಿಗೆ ಆಯೋಗ ರಚನೆ ಮಾಡಿದ್ದು, ಮೂರು ತಿಂಗಳಲ್ಲಿ ವರದಿ ಆಧರಿಸಿ ಜಾರಿಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ತಾಲೂಕಿನ ಭುಜಂಗನಗರದ ಎಸ್ಸಿ ಕಾಲನಿಯಲ್ಲಿ ಶನಿವಾರ ಮಾದಿಗ ಜನಾಂಗದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಡಾ.ಅಂಬೇಡ್ಕರ್ ಬರೆದ ಸಂವಿಧಾನದಂತೆ ಎಲ್ಲ ಶೋಷಿತ ವರ್ಗದವರಿಗೆ ನ್ಯಾಯ ದೊರಕಲಿದೆ. ಎಸ್ಸಿಗೆ 101 ಜಾತಿಗಳ ಸೇರ್ಪಡೆಯಾದರೂ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸವಾಗಲಿದೆ.
ದಲಿತರು ಎಲ್ಲ ಸಮಾಜದೊಂದಿಗೆ ಅನ್ಯೋನ್ಯದಿಂದ ಇದ್ದಾಗ ಮಾತ್ರ ಏಳಿಗೆ ಹೊಂದಲು ಸಾಧ್ಯ. ಮಾದಿಗ ದಂಡೋರ, ಆದಿ ಜಾಂಬವ, ಡಿಎಸ್‌ಎಸ್ ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಬೇಕು ಎಂದು ಕೋರಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿದರು. ಮುಖಂಡರಾದ ಎ.ಮಾನಯ್ಯ, ಗ್ರಾಪಂ ಅಧ್ಯಕ್ಷ ಪ್ರಕಾಶ್ ಗೌಡ, ಬಿ.ಜಿ.ಸಿದ್ದೇಶಗೌಡ, ಮಾಧ್ಯಮ ವಕ್ತಾರ ವೆಂಕಟೇಶ ಅಂಗಡಿ, ಎಚ್.ಮರಿಸ್ವಾಮಿ, ಶ್ರೀದೇವಿ ನಾಯ್ಕ, ಕೊಟಿಗಿನಾಳ್ ಮಲ್ಲಿಕಾರ್ಜುನ, ಎಂ.ಶಿವಲಿಂಗಪ್ಪ, ಸತೀಶ, ರಾಮಕೃಷ್ಣ ಹೆಗಡೆ, ದೇವದಾಸ್, ಮರಿಸ್ವಾಮಿ, ಬಸವರಾಜ ಬ್ರೂಸ್ಲಿ, ಹನುಮಂತರೆಡ್ಡಿ ಇತರರಿದ್ದರು.