25.7 C
Bangalore
Sunday, December 15, 2019

ಕಸಾಯಿಖಾನೆ ಬೆಳೆಸಿದ್ದು ಆಗ! ಹಾಲು-ಹಸು ಬೇಕಂತೆ ಈಗ!!

Latest News

ಬಿಎಸ್‌ವೈ ವೈಟ್‌ಡ್ರೆಸ್ ರಮೇಶ ಬ್ಲ್ಯಾಕ್ ಮಾಡ್ತಾನೆ

ಗೋಕಾಕ: ಶಾಸಕ ರಮೇಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಧರಿಸುವ ವೈಟ್ ಡ್ರೆಸ್‌ಅನ್ನು ಬ್ಲಾೃಕ್ ಮಾಡುತ್ತಾನೆ ಎಂದು ಶಾಸಕ ಸತೀಶ ಜಾರಕಿಹೊಳಿ...

ನಗ ನಗದುಗಳೊಂದಿಗೆ ಮಾವನ ಮನೆಯಿಂದ ರಾತ್ರೋರಾತ್ರಿ ಪರಾರಿಯಾದ ಮಧುಮಗಳು; ಮಧುಮಗ ಕಂಗಾಲು!

ಬದೌನ್​ (ಉತ್ತರಪ್ರದೇಶ): ಹೊಸದಾಗಿ ಮದುವೆಯಾಗಿದ್ದ ಮಧುಮಗಳು ಗಂಡನ ಮನೆಯವರಿಗೆ ಆಹಾರದಲ್ಲಿ ಮತ್ತು ಬರುವ ಔಷಧ ಬೆರಸಿ ಮನೆಯಲ್ಲಿದ್ದ ನಗ ನಾಣ್ಯ ದೋಚಿ ಪರಾರಿಯಾಗಿದ್ದಾಳೆ. ಬದೌನ್​ ಜಿಲ್ಲೆಯ ಚೋಟಾ...

ಪೌರತ್ವ ತಿದ್ದುಪಡಿ ಕಾಯ್ದೆ ಶೇ.1000 ಪಟ್ಟು ಸರಿ: ಪ್ರತಿಭಟನೆಗಳಿಗೆ ಕಾಂಗ್ರೆಸ್​​ ಮಿತ್ರಪಕ್ಷಗಳು ಕಾರಣ

ನವದೆಹಲಿ: ಪೌರತ್ವ ತಿದ್ದುಪಡಿ ಕಾನೂನಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆಗಳಿಗೆ ಕಾಂಗ್ರೆಸ್​ ಮತ್ತು ಅದರ ಮಿತ್ರ ಪಕ್ಷಗಳೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ...

ಕಳ್ಳಬಟ್ಟಿ ಸಾರಾಯಿ ಮಾರಾಟಗಾರನ ಬಂಧನ

ರಾಯಬಾಗ: ತಾಲೂಕಿನ ಮೊರಬ ಗ್ರಾಮದಲ್ಲಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ, ಆರೋಪಿಯನ್ನು ಬಂಧಿಸಿ, ಆತನಿಂದ...

ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ

ಉಡುಪಿ: ತುಳು ಭಾಷಿಗ ತುಳು ಶಿವಳ್ಳಿ ಬ್ರಾಹ್ಮಣರು ಮಾತೃಭಾಷೆ ಮರೆಯುತ್ತಿದ್ದಾರೆ. ಅದು ಸಲ್ಲದು. ನಮ್ಮ ಸಂಸ್ಕೃತಿ-ಸಂಸ್ಕಾರಗಳ ಉಳಿವಿಗಾಗಿ ಶ್ರಮಿಸುವುದು ಗಾಯತ್ರಿ ಮಂತ್ರವನ್ನು ನಿತ್ಯವೂ...

ಮಾಜಿ ವಿತ್ತಮಂತ್ರಿ ಪಳನಿಯಪ್ಪನ್ ಚಿದಂಬರಂ ಅವರು ಈಗ ತಿಹಾರ್ ಜೈಲಿನಲ್ಲಿದ್ದಾರೆ. ‘ನನ್ನದೇನು ಬಿಡಿ, ದೇಶದ ಅರ್ಥವ್ಯವಸ್ಥೆಯದೇ ನನಗೆ ಚಿಂತೆ’ ಎಂದು ಈ ಮುನ್ನ ಅವರು ಹೇಳಿದ್ದರು. ಹತ್ತು ವರ್ಷಗಳಲ್ಲಿ, 2014ರ ಮುನ್ನ ಅವಧಿಯಲ್ಲಿ ದೇಶದಲ್ಲಿ ಆಗಿದ್ದ ಆರ್ಥಿಕ ಪತನ ಹಿಂದೆಂದೂ ಕಂಡರಿಯದ್ದು ಆಗಿತ್ತು. 2014ರ ಜನವರಿ 13ರಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಪತ್ರಿಕಾಗೋಷ್ಠಿ ಕರೆದು ಶರಣಾಗತಿ ಒಪ್ಪಿಕೊಂಡಿದ್ದರು. ದೇಶದ ಅರ್ಥವ್ಯವಸ್ಥೆ ಪಾತಾಳಕ್ಕಿಳಿದಿದೆ ಎಂದು ಅವರು ತಪ್ಪೊಪ್ಪಿಗೆ ನೀಡಿದ್ದರು. ಈಗ ಚಿದಂಬರಂ ಅವರು ತಿಹಾರ್ ಜೈಲಿನಿಂದ ಟ್ವೀಟ್ ಮಾಡಿದ್ದಾರೆ. ಈಗ ಪೆಸಿಫಿಕ್-ಏಷ್ಯ ಹಾಗೂ ದಕ್ಷಿಣ ಏಷ್ಯ ರಾಷ್ಟ್ರಗಳ ಸಮಗ್ರ ಆರ್ಥಿಕ ಒಪ್ಪಂದ ಆರ್​ಸಿಇಪಿ ಆಗಿದೆ. ಈ ಒಪ್ಪಂದ ಶುರುಮಾಡಿದ್ದು 2012ರಲ್ಲಿ ಚಿದಂಬರಂ ಕಾಲದಲ್ಲಿ. ಅದು ಸರಿ ಇತ್ತು ಎನ್ನುವ ಈ ಮಹಾಶಯರು ಈಗ ಆರ್​ಸಿಇಪಿ ಬೇಡ ಎಂದರೆ ಅದು ಸರಿ ಎನ್ನುತ್ತಾರೆ! 2012ರಲ್ಲಿ ಆ ಕಾಲ ಚೆನ್ನಾಗಿತ್ತು, 2019ರಲ್ಲಿ ಈಗ ಕಾಲ ಚೆನ್ನಾಗಿಲ್ಲ ಎಂಬುದು ಅವರ ತರ್ಕ. 2013ರಲ್ಲಿ ಭಾರತದ ಅರ್ಥವ್ಯವಸ್ಥೆ ಎಂಥ ಅಧೋಗತಿ ಕಂಡಿತ್ತು ಗೊತ್ತೆ? ಒಂದು ಡಾಲರ್​ಗೆ ಭಾರತದ 68 ರೂಪಾಯಿ ಕೊಡಬೇಕಾದ ಹೀನ ಸ್ಥಿತಿ ಇತ್ತು. ಇದರ ಬೆಲೆ ಏನು ಗೊತ್ತೆ? ಯುಪಿಎ-1 ಅಧಿಕಾರಕ್ಕೆ ಬಂದಾಗ ಒಂದು ಲೀಟರ್ ಪೆಟ್ರೋಲ್ ಬೆಲೆ 2005ರ ಜೂನ್ 20ರಂದು 40.49 ರೂ. ಇತ್ತು. ಅದು ಮನಮೋಹನ್-ಚಿದಂಬರಂ ಜೋಡಿಯ ಮಹಾನ್ ಸಾಧನೆಯ ಫಲವಾಗಿ ಪೆಟ್ರೋಲ್ ಬೆಲೆ 2014ರ ಜೂನ್ ಏಳರಂದು 71.50 ರುಪಾಯಿಗೆ ಏರಿತ್ತು. ಅಂದರೆ ಈ ಜೋಡಿಯ ಆರ್ಥಿಕ ಅಂಧಾ ದರ್ಬಾರ್​ಗೆ ಜನಸಾಮಾನ್ಯರು ಬಲಿಪಶುಗಳಾಗಿದ್ದರು; ಪೆಟ್ರೋಲ್ ಸಮೇತ ಎಲ್ಲ ವಸ್ತುಗಳು ದುಬಾರಿಯಾಗಿ ಜನರ ಬದುಕು ಭಾರವಾಗಿತ್ತು. ಚಿದಂಬರಂ ಅವರ 2012ರ ದೇಶದ ಆರ್ಥಿಕ ಬದುಕು ಬಲು ಘೊರ ಆಗಿತ್ತು; ಆದರೂ ಎಲ್ಲ ಸರಿ ಆಗ, ಎಲ್ಲ ಸರಿ ಇಲ್ಲ ಈಗ ಈ ಮಹಾಶಯರಿಗೆ!

ಈಗ ಆರ್​ಸಿಇಪಿ ಒಪ್ಪಂದ ಬೇಡ ಎನ್ನಲು ಇವರು ಸೃಷ್ಟಿಸಿದ ಗುಮ್ಮ ಹಾಲು-ಹಸು ಎಂಬುದಾಗಿತ್ತು. ನಮ್ಮ ಬಡಜನರು, ಗ್ರಾಮೀಣ ಜನರು ಮುಖ್ಯ ಎಂಬ ವಾದ ಇದಾಗಿತ್ತು. ಇವರು ತಮ್ಮ ದರ್ಬಾರಿನಲ್ಲಿ ಹಾಲು-ಹಸುಗಳನ್ನು ಎಷ್ಟು ಚೆನ್ನಾಗಿ ನೋಡಿಕೊಂಡಿದ್ದರು ಎಂಬುದನ್ನು ಒಮ್ಮೆ ಅವಲೋಕಿಸಿ. ಆಗ ಇವರದು ಮೊಸಳೆ ಕಣ್ಣೀರು ಎಂಬುದು ಸುಸ್ಪಷ್ಟವಾಗುತ್ತದೆ. ಇವರು ತಮ್ಮ ದರ್ಬಾರಿನಲ್ಲಿ ಬೆಳೆಸಿದ್ದು ಏನು? ಅದು ಕಸಾಯಿಖಾನೆ! ಹೈವೇ ಇರಲಿ, ಗಲ್ಲಿ ಇರಲಿ ಆಗ ಮೆರೆಯುತ್ತಿದ್ದುದು, ಆಗ ಕಾಣುತ್ತಿದ್ದ ಒಂದು ನೋಟ: ಟೆಂಪೋಗಳಲ್ಲಿ ತುಂಬಿದ್ದ ದನಗಳು, ಅವುಗಳ ದಾರಿ ಕಸಾಯಿಖಾನೆ! ಇದರ ಫಲ ಏನು ಗೊತ್ತೆ? ಕರ್ನಾಟಕದಲ್ಲಿ 2012ರ ಪಶುಗಣತಿ ಪ್ರಕಾರ 1.30 ಕೋಟಿ ದನಕರು ಎಮ್ಮೆಗಳು ಇದ್ದವು. 2019ರ ಪಶುಗಣತಿ ಪ್ರಕಾರ ಅದು 1.15 ಕೋಟಿಗೆ ಇಳಿದಿದೆ! ಇದು ಪುಣ್ಯಕೋಟಿ ನಾಡಿನಲ್ಲಿ ಇವರು ಮೆರೆದ ಪರಾಕ್ರಮದ ಫಲ. ಹೀಗೆ ಹಸುವಿಗೆ ಪೀಡೆಯಾಗಿದ್ದ ಜನ ಈಗ ಬೀದಿಗಿಳಿಯುತ್ತಾರೆ. ಹಾಲು-ಹಸುವಿಗಾಗಿ ಆರ್​ಸಿಇಪಿ ಬೇಡ ಎಂದು ಅಬ್ಬರಿಸುತ್ತಾರೆ; ಕಸಾಯಿಖಾನೆ ಚಪ್ಪರಿಸಿದ್ದೂ ಇವರೇ. ಹಸು-ಹಾಲು ಬೇಕೇ ಬೇಕು ಎಂದು ಅಬ್ಬರಿಸುವವರೂ ಇವರೇ. ಎಂಥ ಮೊಸಳೆ ಕಣ್ಣೀರು ಇದು!

ಇದು 2012-19 ಮಾತಲ್ಲ. ಯುಪಿಎ ಅಧಿಕಾರಾವಧಿಯಲ್ಲಿ ದನಕರು ಎಮ್ಮೆಗಳ ಕಾಲ ದುರ್ಭರವಾಗಿದೆ. 2007-08ರಲ್ಲಿ ದೇಶದಲ್ಲಿ ಆರ್ಥಿಕ ಪ್ರಗತಿಯ ಗತಿ ಪರಾಕಾಷ್ಠೆಯಲ್ಲಿತ್ತು. ನಮ್ಮ ಜಿಡಿಪಿ ದರ ವಾರ್ಷಿಕ ಏರಿಕೆ ಶೇ. 10ರ ಕಡೆಗೆ ಎಂದು ಈ ಪಳನಿಯಪ್ಪನ್ ಬೀಗಿದ್ದೂ ಇತ್ತು. 2007ರ ಪಶುಗಣತಿ ಪ್ರಕಾರ ದೇಶದಲ್ಲಿ 30.4 ಕೋಟಿ ದನಕರು ಎಮ್ಮೆ ಕೋಣಗಳಿದ್ದವು. 2019ರಲ್ಲಿ ಅವು ಕಡಿಮೆ ಆಗಿವೆ. ಈ ಸಂಖ್ಯೆ 30.2 ಕೋಟಿಗೆ ಇಳಿದಿದೆ. ನಾವು 2005ರಿಂದ ಕಂಡಿರುವುದೇನು? ಅಂದರೆ ದನಕರು ಎಮ್ಮೆಗಳ ಸಂಖ್ಯೆ ಕಡಿಮೆ ಆಗಿದೆ. ನಮ್ಮ ಜಾನುವಾರುಗಳಿಗೆ ಉದಾರೀಕರಣ ಯುಗವು ಉದ್ದಕ್ಕೂ ಒಂದು ಶಾಪವಾಗಿದೆ. ನಮಗೆ ಅದು ಗೊತ್ತೇ ಇಲ್ಲ. ಕಥೆ ಹೀಗಿದೆ ನೋಡಿ:

ಉದಾರೀಕರಣ ಯುಗದ ಆರಂಭಕ್ಕೆ ನಮ್ಮ ದನಕರು ಎಮ್ಮೆಗಳ ಸಂಖ್ಯೆ 1992ರ ಪಶುಗಣತಿ ಪ್ರಕಾರ 22.8 ಕೋಟಿ ಇತ್ತು. ಅದು 2019ರಲ್ಲಿ ಇನ್ನೂ 30 ಕೋಟಿ ಬಳಿಯಲ್ಲೇ ಇದೆ. ಅಂದರೆ ಉದಾರೀಕರಣಕ್ಕೂ ಪಶುಪಾಲನೆಗೂ ಸಂಬಂಧವಿಲ್ಲ. ಉದಾರೀಕರಣದ ಆರಂಭದ ಕಾಲದಲ್ಲಿ ನಮ್ಮ ದೇಶದ ಜನಸಂಖ್ಯೆ 80 ಕೋಟಿ ಇತ್ತು. ಈಗ 130 ಕೋಟಿ ದಾಟಿದೆ. ಅಂದರೆ ಜನಸಂಖ್ಯೆಯಲ್ಲಿ ಶೇ. 62ರಷ್ಟು ಏರಿಕೆ ಆಗಿದೆ. ಜಾನುವಾರು ಸಂಖ್ಯೆ ಮಾತ್ರ ಸುಮಾರು 30 ವರ್ಷಗಳಲ್ಲಿ ಇದ್ದಲ್ಲೇ ಇದೆ ಎನ್ನಬಹುದು. ಉದಾರೀಕರಣವು ಪಶುಪಾಲನೆಯನ್ನು ನಿಸ್ಸೀಮ ನಿರ್ಲಕ್ಷ್ಯದಿಂದ ಕಂಡಿದೆ ಎಂಬುದಕ್ಕೆ ಇದು ಜ್ವಲಂತ ನಿದರ್ಶನ. ಉದಾರೀಕರಣವು ಪಶುಪಾಲನೆಯನ್ನು ಮನೆಯಿಂದ ಆಚೆಗೆ ತಳ್ಳಿದೆ. ಇದು ಸತ್ಯ. ಉದಾರೀಕರಣ ಯುಗದ ಅಪ್ಪಟ ಸತ್ಯ ಏನು ಗೊತ್ತೆ? ಇಲ್ಲಿದೆ ಕಂಪನಿ ಲೋಕದ ಐಭೋಗ; ಇಲ್ಲಿದೆ ನಗರಸಂಸ್ಕೃತಿಯ ವೈಭವ. ಹಳ್ಳಿಗಳು ಹತವಾಗಿವೆ; ಹಳ್ಳಿಗರು ಬೀದಿಗೆ ಬಿದ್ದಿದ್ದಾರೆ. ಇದನ್ನು ಕಾಣುವವರೇ ಇಲ್ಲ, ಇನ್ನು ಸರಿಪಡಿಸುವ ಮಾತೆಲ್ಲಿ?

ನಿಜಸ್ಥಿತಿ ಏನು ಗೊತ್ತೆ? ಮುಂಬಯಿ ಷೇರುಪೇಟೆ ಕಂಪನಿಗಳು ನಮ್ಮ ಜಿಡಿಪಿಗೆ ಕೊಡುವ ಪಾಲು ಶೇ. ನಾಲ್ಕು ಮಾತ್ರ. ನಮ್ಮ ಪಶುಪಾಲನೆಯೂ ಅಷ್ಟೇ ಪಾಲನ್ನು ನಮ್ಮ ಜಿಡಿಪಿಗೆ ನೀಡುತ್ತದೆ. ಆದರೆ ಕಂಪನಿಗಳಿಗೆ ಸರ್ಕಾರದ ಕಡೆಯಿಂದ ಸಕಲ ಸವಲತ್ತುಗಳಿವೆ. ಹಣ ಬೇಕಾ? ಅದು ಸಿಗುತ್ತದೆ. ವಿದೇಶದಿಂದ ಪದಾರ್ಥ ಬೇಕಾ? ಅದೂ ಬರುತ್ತೆ. ಅದು 2004-2014ರ ಅವಧಿಯಲ್ಲಿ ವಿಪರೀತ ಪ್ರೋತ್ಸಾಹ ಸಿಗುತ್ತೆ. ಈ ಅವಧಿಯಲ್ಲಿ ಚೀನದಿಂದ ನಾವು ಕಂಪನಿಗಳಿಗಾಗಿ ಆಮದು ಮಾಡಿಕೊಂಡ ಯಂತ್ರೋಪಕರಣ ಇತ್ಯಾದಿಗಳ ಮೊತ್ತ 587 ಶತಕೋಟಿ ಡಾಲರ್ ಮೌಲ್ಯದ್ದು. ಚೀನದ ಜತೆ ಇದಕ್ಕೂ ಮುಂಚೆ ಇದ್ದುದು 10 ಶತಕೋಟಿ ಡಾಲರ್ ಮಾತ್ರ. ಜತೆಗೆ ಮುಂಚೆ ಚೀನಿ ಮಾಲಿನ ಮೇಲೆ ಆಂಟಿ ಡಂಪಿಂಗ್ ಡ್ಯೂಟಿ – ಆಮದು ಸುಂಕ ದೊಡ್ಡದಾಗಿತ್ತು. ಬಳಿಕ ಅದು ಸೊನ್ನೆಗೆ ಬಂತು! ಇದರಿಂದ ಚೀನದ ಜತೆ ನಮ್ಮ ವ್ಯಾಪಾರ ಕೊರತೆ 175 ಶತಕೋಟಿ ಬಿರಿದಿತ್ತು! ಇದೆಲ್ಲ ಕಂಪನಿಗಳನ್ನು ಕೊಬ್ಬಿಸಿತ್ತು. ಅದೇ ಪಶುಪಾಲನೆಗೆ ನಿಸ್ಸೀಮ ನಿರ್ಲಕ್ಷ್ಯ ಇತ್ತು. ಇದರ ಫಲವಾಗಿಯೇ 2001ರಲ್ಲಿ ಇದ್ದುದಕ್ಕಿಂತ ಕಡಿಮೆ ಜಾನುವಾರುಗಳು ಈಗ ನಮ್ಮ ದೇಶದಲ್ಲಿವೆ. ಇದು ನಮ್ಮ ಪಶುಪಾಲಕರಿಗೆ ದುರ್ಭಿಕ್ಷ ಕಾಲ.

ನಮ್ಮ ಪಶುಪಾಲನೆ ಎದುರಿಸುತ್ತಿರುವ ಸಂಕಷ್ಟಗಳಿಗೆ ಮಿತಿಯೇ ಇಲ್ಲ. ದೇಶದಲ್ಲಿ ಜನಸಂಖ್ಯೆಯು ಉದಾರೀಕರಣ ಕಾಲದಲ್ಲಿ 80ಕೋಟೆಯಿಂದ 130 ಕೋಟಿ ದಾಟಿದೆ. ಜನರ ಯೋಗಕ್ಷೇಮಕ್ಕೆಂದು ಭಾರತದ ಆಹಾರ ನಿಗಮ ಇದೆ. ಆದರೆ 30 ಕೋಟಿ ಇರುವ ನಮ್ಮ ದನಕರು ಎಮ್ಮೆಗಳ ಯೋಗಕ್ಷೇಮಕ್ಕೆ ಏನಿದೆ? ಭಾರತದ ಮೇವು ನಿಗಮ ಉಂಟೇ? ಈ ಉದಾರೀಕರಣ ಯುಗದ ಮಲಾಮೆಯಲ್ಲಿ ಅದು ಹುಟ್ಟುವ ಪ್ರಶ್ನೆಯೂ ಇಲ್ಲ. ಈ ಸಮಸ್ಯೆ ಕೇಳುವವರೇ ಇಲ್ಲ. ದೇಶದಲ್ಲಿ ಹಸಿಮೇವಿನ ಕೊರತೆ ಶೇ. 35 ಇದೆ. ಹಿಂಡಿಯ ಕೊರತೆ ಶೇ. 44 ಇದೆ. ಒಣಹುಲ್ಲಿಗೂ ಕೊರತೆ ಇದೆ. ಹಾಲು ಉತ್ಪಾದನೆಯಲ್ಲಿ ಮೇವಿನ ಖರ್ಚೇ ಶೇ. 70 ಇದೆ. ಅಂದರೆ ಪಶುಪಾಲನೆ ಲಾಭದಾಯಕ ಅಲ್ಲ ಎಂಬ ಸ್ಥಿತಿ ಇದೆ. ಇನ್ನೂ ದುರಂತ ಎಂದರೆ ಮೇವಿರುವ ಪ್ರದೇಶದಲ್ಲಿ ಪಶುಪಾಲನೆಯೇ ಪಲಾಯನ ಮಾಡುತ್ತಿದೆ. ನೀರಾವರಿ ಇರುವ ಕೃಷಿಕರಲ್ಲಿ ಪಶುಪಾಲನೆಗೆ ಪುರಸತ್ತೇ ಇಲ್ಲ. ಶೇ. 85ರಷ್ಟು ಕೃಷಿಭೂಮಿಗೆ ನೀರಾವರಿ ಇರುವ ಹರಿಯಾಣ-ಪಂಜಾಬ್ ರಾಜ್ಯಗಳಲ್ಲಿ ದನಕರುಗಳು ಕಡಮೆ, ಎಮ್ಮೆ ಸಾಮ್ರಾಜ್ಯ ಅಲ್ಲಿದೆ. 2012-19ರ ಅವಧಿಯಲ್ಲಿ ಪಂಜಾಬಿನಲ್ಲಿ ಎಮ್ಮೆ ಸಂತತಿ ಶೇ. 22.17ರಷ್ಟು ಕುಸಿದರೆ, ದಿಲ್ಲಿ ಸೆರಗಿನಲ್ಲಿರುವ ಹರ್ಯಾಣದಲ್ಲಿ ಎಮ್ಮೆ ಸಂತತಿ ಶೇ. 28.22ರಷ್ಟು ಕುಗ್ಗಿದೆ. ಇನ್ನು ನೀರಾವರಿ ಚೆನ್ನಾಗಿರುವ ಆಂಧ್ರಪ್ರದೇಶ ಹಾಗೂ ತಮಿಳುನಾಡು ದನಗಳು ಎಮ್ಮೆಗಳು ಟಾಪ್ ಟೆನ್ ಪಟ್ಟಿಯಲ್ಲಿ ಕಾಣಸಿಗುವುದಿಲ್ಲ! ಉತ್ತರಪ್ರದೇಶದಲ್ಲಿ ದನಕರು ಎಮ್ಮೆಗಳ ಸಾಕಣೆ ದೇಶದಲ್ಲೇ ದೊಡ್ಡದು. ಬಡವರ ಬಂಧು ಈ ಪ್ರಾಣಿಗಳು. 5.18 ಕೋಟಿ ದನಕರು ಎಮ್ಮೆಗಳು ಇಲ್ಲಿವೆ. ದೇಶದಲ್ಲಿರುವ 30.23 ಕೋಟಿಯಲ್ಲಿ ಉತ್ತರಪ್ರದೇಶದ ಪಾಲು ಎಷ್ಟು ದೊಡ್ಡದು ನೀವೇ ನೋಡಿ. ಬಡತನವು ಈ ರಾಜ್ಯದಲ್ಲಿ ಹೆಚ್ಚು. ಇಲ್ಲಿ ಎಮ್ಮೆ ಹೀಗಾಗಿ ಪಶುಪಾಲನೆಯೂ ಹೆಚ್ಚು. 2012-19ರ ಅವಧಿಯಲ್ಲಿ ಇಲ್ಲಿ ಎಮ್ಮೆ ಸಂತತಿ ಶೇ. 7.8 ವೃದ್ಧಿಸಿದೆ. ಆದರೆ ದನಕರುಗಳ ಸಂಖ್ಯೆ ಶೇ. ನಾಲ್ಕರ ಹತ್ತಿರದಲ್ಲಿ ಕುಸಿದಿದೆ. ದೇಶದಲ್ಲಿ ಅತಿ ಹೆಚ್ಚು ದನಕರುಗಳು ಇರುವುದು ಪಶ್ಚಿಮ ಬಂಗಾಳದಲ್ಲಿ. ಇಲ್ಲೂ ಬಡಜನರು ಹೆಚ್ಚು. ಇಲ್ಲಿ 1.9 ಕೋಟಿ ದನಕರುಗಳಿವೆ. ಈ ಏಳು ವರ್ಷಗಳಲ್ಲಿ ಇಲ್ಲಿ ಶೇ. 15.18ರಷ್ಟು ಏರಿಕೆ ಆಗಿದೆ. ಬಡಜನರಿರುವ ಬಿಹಾರದಲ್ಲಿ ಶೇ. 25.18 ಹಾಗೂ ಜಾರ್ಖಂಡ್​ನಲ್ಲಿ ಶೇ. 28ರಷ್ಟು ಏರಿಕೆ ದನಕರುಗಳ ಸಂಖ್ಯೆಯಲ್ಲಿ ಆಗಿದೆ. ಇನ್ನು, ಎಮ್ಮೆಗಳ ಹಾಗೆಯೇ ದನಗಳ ಟಾಪ್ ಟೆನ್ ಪಟ್ಟಿಯಲ್ಲಿ ಕರ್ನಾಟಕ ಕಾಣಸಿಗುವುದಿಲ್ಲ.

ಇನ್ನೊಂದು ವಿಚಾರ. ದೇಶದಲ್ಲಿ 19 ಕೋಟಿಗೂ ಮೀರಿದ ದನಕರುಗಳಲ್ಲಿ ಹಾಲು ಕೊಡುವಂಥವು 4.9 ಕೋಟಿ ಮಾತ್ರ. ಅಂದರೆ ಒಟ್ಟು ಸಂಖ್ಯೆಯಲ್ಲಿ ಹಾಲು ಕೊಡುವ ದನಗಳು ಕಾಲು ಭಾಗ ಮಾತ್ರ. ಹೀಗೆಯೇ 9.26 ಕೋಟಿ ಎಮ್ಮೆಗಳಲ್ಲಿ ಹಾಲು ಕೊಡುವಂಥವು 3.65 ಮಾತ್ರ. ಅಂದರೆ ಮೂರನೇ ಒಂದು ಭಾಗದಷ್ಟು ಎಮ್ಮೆಗಳು ಹಾಲು ನೀಡುತ್ತವೆ. ಹೀಗೆ ಹಾಲು ಕೊಡದಿರುವ ಮುಕ್ಕಾಲು ಭಾಗದಷ್ಟು ದನಕರುಗಳಿಗೆ, ಮೂರನೇ ಎರಡು ಭಾಗದಷ್ಟು ಎಮ್ಮೆಗಳಿಗೆ ಮೇವು ಉಣಿಸಿ ಬದುಕು ಸಾಗಿಸುವುದು ನಮ್ಮ ಪಶುಪಾಲಕರಿಗೆ ಎಷ್ಟು ದುರ್ಭರವಾಗಿದೆ ನೀವೇ ಊಹಿಸಿ. ಇಷ್ಟು ಭಾರ ಇದ್ದರೂ, ಇಷ್ಟು ಸಂಕಷ್ಟ ಇದ್ದರೂ ಪಶುಪಾಲನೆಯು ಹಣಕಾಸು ಲೋಕದಲ್ಲಿ ಲೆಕ್ಕಕ್ಕೇ ಇಲ್ಲ. ರಿಸರ್ವ್ ಬ್ಯಾಂಕ್ ಕೂಡ ಈ ಬಗ್ಗೆ ಸರ್ಕಾರದ ಗಮನ ಸೆಳೆದಿದೆ. ಅದು ಕೃಷಿಗೆ ಸಂಬಂಧಿಸಿದ ಇತ್ತೀಚಿನ ವರದಿಯಲ್ಲಿ ಕೆಲವು ಅಂಶಗಳನ್ನು ಎತ್ತಿ ಹೇಳಿದೆ. ಮೊದಲು ಕೃಷಿಯಲ್ಲಿನ ಕಾರ್ಯಕ್ಕೆ ಕೃಷಿಸಾಲ ಇತ್ತು; ಈಗ ಕೃಷಿಗಾಗಿ ಎಂಬ ಪಟ್ಟಿಯಲ್ಲಿ ಕೃಷಿಯಾಚೆ ಕೃಷಿಸಾಲ ಹಿಗ್ಗಿದೆ ಎಂದು ಅದು ಹೇಳಿದೆ. ಪಶುಪಾಲನೆಯ ವಿಚಾರದಲ್ಲಿ ಸರ್ಕಾರಿ ಹಾಗೂ ಹಣಕಾಸು ಸಂಸ್ಥೆಗಳ ದಿವ್ಯ ನಿರ್ಲಕ್ಷ್ಯದ ಬಗ್ಗೆಯೂ ಅದು ಗಮನ ಸೆಳೆದಿದೆ. ಪಶುಪಾಲನೆಗೆ ಸಾಲ ನೀಡಲು ಬೇರೆ ಬಗೆಯ ವ್ಯವಸ್ಥೆ ಆಗಬೇಕು; ಭಾರತ ಸರ್ಕಾರ ಇತ್ತ ಗಮನ ನೀಡಬೇಕು ಎಂದೂ ಅದು ಎತ್ತಿ ಹೇಳಿದೆ. ಭೂಮಿ ನೋಡಿ ಬ್ಯಾಂಕುಗಳು ಕೃಷಿಕರಿಗೆ ಸಾಲ ನೀಡುತ್ತವೆ. ಆದರೆ ಪಶುಪಾಲನೆಗೆ? ಎರಡು ಲಕ್ಷ ರೂ. ತನಕ ಪಶುಪಾಲನೆಗೆ ಭೂಮಿದಾಖಲೆ ಕೇಳದೆ ಸಾಲ ನೀಡಬೇಕು ಎಂದು ಅದು ಶಿಫಾರಸು ಮಾಡಿದೆ. ಇದು 2019ರ ಸೆಪ್ಟೆಂಬರ್ ಆರರ ಮಾತು, ರಿಸರ್ವ್ ಬ್ಯಾಂಕಿನದು.

Stay connected

278,751FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...