28.5 C
Bengaluru
Monday, January 20, 2020

ಆಗ ಕೇರಾಫ್ ಫುಟ್​ಪಾತ್ ಈಗ ಖಗೋಳ ವಿಜ್ಞಾನಿ

Latest News

ವಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಜಿ. ಪರಮೇಶ್ವರ್

ಬೆಂಗಳೂರು: ವಿಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿರಲಿ ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್...

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಗುರುತು ಪತ್ತೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ದೃಶ್ಯ ಪತ್ತೆಯಾಗಿದೆ.ಶಂಕಿತ...

ವಸತಿ ಸಹಾಯಧನ ಹೆಚ್ಚಳ ಕೋರಿ ಪ್ರಧಾನಿ ಬಳಿ ರಾಜ್ಯದ ನಿಯೋಗ : ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ವಿಧಾನ ಸೌಧ ಕೊಠಡಿಯಲ್ಲಿ ಬೆಂಗಳೂರು ನಗರ ವಸತಿ ಯೋಜನೆ ಕುರಿತು ಸಂಸದ, ಶಾಸಕರ ಸಭೆಯಲ್ಲಿ ಸೋಮವಾರ ಈ ವಿಷಯ ತಿಳಿಸಿದರು.ಕೇಂದ್ರ ಸಹಾಯಧನ...

ಜೂಜುಕೋರರ ಗಡಿಪಾರು ಖಚಿತ: ಎಸ್‌ಪಿ ವಂಶಿಕೃಷ್ಣ ಎಚ್ಚರಿಕೆ

ಪಾವಗಡ: ಮಟ್ಕಾ ಮತ್ತು ಇಸ್ಪೀಟು ಆಡುವವರನ್ನು ಮತ್ತು ಆಡಿಸುವವರನ್ನು ಗಡಿಪಾರು ವಾಡಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಎಸ್‌ಪಿ ಡಾ.ಕೆ.ವಂಶಿಕೃಷ್ಣ...

ವಿಶ್ವಶಾಂತಿಗೆ ಸಂತರ ಮಾರ್ಗದರ್ಶನ ಅಗತ್ಯ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ತುಮಕೂರು: ವಿಶ್ವವೇ ಸಂಕಷ್ಟದ ಸನ್ನಿವೇಶದಲ್ಲಿದ್ದು ಜನರ ಭಯ ತೊಲಗಿಸಲು ಸುಖ-ಶಾಂತಿ ನೆಲೆಸಲು ಸಂತರ ಮಾರ್ಗದರ್ಶನ ಅಗತ್ಯವಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ...

ಕೆಲ ವರ್ಷಗಳ ಹಿಂದಿನ ಮಾತು. ಆರೇಳು ವರ್ಷದ ಬಾಲಕ ಆರ್ಯನ್ ಮಿಶ್ರಾ ವಾಸಿಸುತ್ತಿದ್ದುದು ದೆಹಲಿಯ ಕೊಳಗೇರಿ ಒಂದರಲ್ಲಿ. ಜೋಪಡಿಯಲ್ಲಿ ವಾಸಿಸುತ್ತಿದ್ದ ಈ ಬಾಲಕನಿಗೆ ಆಕಾಶವೇ ಸೂರು. ಆಕಾಶದತ್ತ ಮುಖಮಾಡಿ ಮಲಗುತ್ತಿದ್ದ ವೇಳೆ, ನಕ್ಷತ್ರ, ಚಂದ್ರ ಸೇರಿದಂತೆ ಆಕಾಶಕಾಯಗಳೆಲ್ಲಾ ಒಂದು ಬಗೆಯ ಕುತೂಹಲ ಹುಟ್ಟಿಸಲು ಶುರು ಮಾಡಿದ್ದವು. ಹುಣ್ಣಿಮೆಯ ಚಂದಿರನ ಬೆಳಕು ಮೈಮೇಲೆ ಬೀಳುತ್ತಿದ್ದಂತೆಯೇ ಆ ಬಗ್ಗೆ ಇನ್ನೂ ಕುತೂಹಲ ಹೆಚ್ಚಾಯಿತು.

ಅಮವಾಸ್ಯೆಯಂದು ಮರೆಯಾಗುವ ಚಂದಮಾಮ, ಮತ್ತೆ ಹೀಗೆಲ್ಲಾ ಬೆಳಕು ಬೀರುವುದು ಹೇಗೆ ಸಾಧ್ಯ ಎಂಬ ಅಚ್ಚರಿಯುಂಟಾಗಿತ್ತು. ಇದೇ ಅಚ್ಚರಿ, ನೂರಾರು ಪ್ರಶ್ನೆಗಳೊಂದಿಗೆನೇ ಆರ್ಯನ್ ಬೆಳೆಯತೊಡಗಿದ. ಮನೆಮನೆಗೆ ಪತ್ರಿಕೆ ಹಂಚುವ ಕೆಲಸ ಮಾಡುತ್ತಿದ್ದ ಅಪ್ಪನ ಬಳಿ ಮಗ ಕೇಳುವ ಪ್ರಶ್ನೆಗಳಿಗೆ ಉತ್ತರ ಇರಲಿಲ್ಲ. ಬಡತನವಿದ್ದರೂ ಮಗನನ್ನು ಶಾಲೆಗೆ ಕಳುಹಿಸುತ್ತಿದ್ದರು. ಅಲ್ಲಿಯೇ ತನ್ನ ಪ್ರಶ್ನೆಗಳಿಗೂ ಉತ್ತರ ಕಂಡುಕೊಂಡ ಬಾಲಕ ಆರ್ಯನ್, 14ನೇ ವಯಸ್ಸಿನಲ್ಲಿ ಕ್ಷುದ್ರಗ್ರಹ ಕಂಡುಹಿಡಿದು ಅತ್ಯಂತ ಕಿರಿಯ ಖಗೋಳ ವಿಜ್ಞಾನಿಯೆಂಬ ಕೀರ್ತಿ ಪಡೆದುಕೊಂಡ.

ಈತನಿಗೀಗ 19 ವರ್ಷ. ಈ ಚಿಕ್ಕ ವಯಸ್ಸಿನಲ್ಲಿ, ಮಕ್ಕಳಿಗಾಗಿ ವಿಜ್ಞಾನ ಪ್ರಯೋಗಾಲಯ ತೆರೆಯುವ ಮೂಲಕ ಇದರಲ್ಲಿಯೂ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಶಾಲಾ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶದ ಕುರಿತು ಆಸಕ್ತಿ ಹೆಚ್ಚಿಸಲು ಕಡಿಮೆ ವೆಚ್ಚದ ಪ್ರಯೋಗಾಲಯ ಸ್ಥಾಪಿರುವುದಾಗಿ ಈತ ಹೇಳಿದ್ದಾನೆ. ‘ಹಿಂದಿನ ಕಾಲದಲ್ಲಿ ಯಾವುದೇ ಆಧುನಿಕ ಉಪಕರಣಗಳು ಇಲ್ಲದೆ ನಮ್ಮ ಹಿರಿಯರು ಹೇಗೆ ಆಕಾಶಕಾಯಗಳ ಚಲನೆಯನ್ನು ನಿರ್ಧರಿಸುತ್ತಿದ್ದರು ಎಂಬ ಪ್ರಶ್ನೆ ನನ್ನಲ್ಲಿ ಉದ್ಭವಿಸಿದ್ದೇ ನಾನು ವಿಜ್ಞಾನಿಯಾಗಲು ಸಹಕಾರಿಯಾಯಿತು’ ಎನ್ನುತ್ತಾನೆ ಆರ್ಯನ್. ಚಿಕ್ಕ ವಯಸ್ಸಿನಲ್ಲಿಯೇ ವಿಜ್ಞಾನದಲ್ಲಿರುವ ಅತೀವ ಆಸಕ್ತಿಯಿಂದಾಗಿ ಶಾಲೆಯಲ್ಲಿ ಸೈನ್ಸ್ ಕ್ಲಬ್ ಸದಸ್ಯತ್ವ ಪಡೆದ ಆರ್ಯನ್​ಗೆ, ದೂರದರ್ಶಕದ ಮೂಲಕ ಶನಿ ಗ್ರಹವನ್ನು ನೋಡುವ ಅವಕಾಶ ಲಭ್ಯವಾಯಿತು. ಆಗ ಆಕಾಶಕಾಯಗಳ ಮೇಲೆ ಒಲವು ಇನ್ನೂ ಹೆಚ್ಚಾಯಿತು.

ತಾನೂ ಒಂದು ದೂರದರ್ಶಕ ಕೊಳ್ಳುವ ಬಯಕೆಯೂ ಉಂಟಾಯಿತು. ಆದರೆ ಅದರ ಬೆಲೆಯನ್ನು ವಿಚಾರಿಸಿದಾಗ ಕನಿಷ್ಠ ಐದು ಸಾವಿರ ರೂಪಾಯಿ ಆಗುವುದೆಂದು ತಿಳಿಯಿತು. ಅಪ್ಪನಿಗೆ ವಿಷಯ ತಿಳಿಸಿದ ಆರ್ಯನ್. ಅದು ತನ್ನ ಅಪ್ಪನಿಗೆ ಬಲು ಕಷ್ಟಸಾಧ್ಯ ಎನ್ನುವುದೂ ಈತನಿಗೇನೂ ತಿಳಿಯದ ವಿಷಯವಾಗಿರಲಿಲ್ಲ. ಆದರೂ ಕೇಳಿಯೇ ಬಿಟ್ಟ. ಆದರೆ ಐದು ಸಾವಿರ ರೂಪಾಯಿ ದೂರದ ಮಾತು 500 ರೂಪಾಯಿಗಳನ್ನೇ ಕೊಡದ ಪರಿಸ್ಥಿತಿ ಅಪ್ಪನದ್ದಾಗಿತ್ತು. ಕಾಲೇಜು ಓದುವುದನ್ನು ಬಿಟ್ಟು ಆಕಾಶದ ಬಗ್ಗೆ ಹುಚ್ಚು ಹಚ್ಚಿಕೊಂಡ ಮಗನ ಬಗ್ಗೆ ಅಪ್ಪ-ಅಮ್ಮನಿಗೆ ಭಯವೂ ಶುರುವಾಯಿತು. ಖಗೋಳ ವಿಜ್ಞಾನ ಏನು ಎಂಬ ಬಗ್ಗೆ ಅರಿವೇ ಇಲ್ಲದ ಪಾಲಕರಿಗೆ ಆರ್ಯನ್ ಅದರ ಬಗ್ಗೆ ತಿಳಿಸಿದರೂ ಅವೆಲ್ಲವನ್ನೂ ಕೇಳುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಸುಮ್ಮನೆ ಕಾಲೇಜಿನ ವಿಷಯ ಓದು ಎಂದರು.

ಇದನ್ನು ಕಿವಿಯ ಮೇಲೆ ಹಾಕಿಕೊಳ್ಳದ ಆರ್ಯನ್, ದೂರದರ್ಶಕ ಪಡೆದೇ ತೀರಬೇಕೆಂದುಕೊಂಡ. ಹಣ ಹೊಂದಿಸುವುದಕ್ಕಾಗಿ ಒಂದು ಹೊತ್ತಿನ ಊಟ ಬಿಟ್ಟ. ಶಾಲೆಗೆ ನಡೆದುಕೊಂಡೇ ಹೋಗಲು ಶುರು ಮಾಡಿದ. ಅದರಿಂದ ದುಡ್ಡು ಉಳಿಸಿಕೊಂಡು ತನ್ನ ಕನಸಿನ ದೂರದರ್ಶಕ ಖರೀದಿಸಿದ.

ಕ್ಷುದ್ರ ಗ್ರಹ ಆವಿಷ್ಕಾರ: ಆಗ ಆರ್ಯನ್​ಗೆ ಕೇವಲ 12 ವರ್ಷ. ಈತನ ವಯಸ್ಸಿನ ಹುಡುಗರೆಲ್ಲಾ ಬೀದಿಗಳಲ್ಲಿ ಚಿನ್ನಿದಾಂಡು, ಕ್ರಿಕೆಟ್ ಆಡುತ್ತಿದ್ದರೆ, ಆರ್ಯನ್ ಆಕಾಶಕ್ಕೆ ಏಣಿ ಇಡಲು ದೂರದರ್ಶಕ ಹಿಡಿದು ಹೊರಟ. ಸತತ ಎರಡು ವರ್ಷ ಅಧ್ಯಯನ ನಡೆಸಿ 14ನೇ ವಯಸ್ಸಿನಲ್ಲಿ ತನ್ನ ಸ್ನೇಹಿತರನ ಜತೆಗೂಡಿ ಮೊದಲ ಬಾರಿಗೆ ಮಂಗಳ ಮತ್ತು ಭೂಮಿಯ ನಡುವೆ ಹೊಸದಾಗಿ ಕಂಡುಬಂದ ಕ್ಷುದ್ರ ಗ್ರಹವನ್ನು ಆವಿಷ್ಕರಿಸಿದ.

ಇಷ್ಟು ಸಣ್ಣ ವಯಸ್ಸಿನ ಹುಡುಗ ಕ್ಷುದ್ರ ಗ್ರಹ ಕಂಡುಹಿಡಿದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ದಿನಪತ್ರಿಕೆಗಳಲ್ಲಿ, ಟಿ.ವಿಯಲ್ಲಿ ಇದರ ವರದಿಯಾದವು. ಇದನ್ನು ನೋಡುತ್ತಿದ್ದಂತೆಯೇ ತಮ್ಮ ಮಗ ಏನೋ ಸಾಧನೆ ಮಾಡಿದ್ದಾನೆ ಎಂದು ಪಾಲಕರಿಗೆ ಅರಿವಾಯಿತು. ‘ನನ್ನ ಹತ್ತವರಿಗೆ ನನ್ನ ಮೇಲೆ ನಂಬಿಕೆ ಬಂದದ್ದು ಆಗಲೇ, ನಾನು ಯಾಕೆ ಖಗೋಳ ವಿಜ್ಞಾನವನ್ನು ಕಲಿಯಬೇಕು ಎಂಬ ಬಗ್ಗೆ ಆಗ ಅವರಿಗೆ ತಿಳಿಹೇಳಿದೆ. ನನ್ನ ಬಗ್ಗೆ ಎಲ್ಲರೂ ಕೊಂಡಾಡುತ್ತಿರುವುದನ್ನು ಅರಿತ ಪಾಲಕರು, ನಾನು ಹೇಳುತ್ತಿರುವುದರಲ್ಲಿ ಏನೋ ಅರ್ಥವಿದೆ ಎಂದು ಅಂದುಕೊಂಡದ್ದು ಆಗಲೇ’ ಎಂದು ನಗುತ್ತಾನೆ ಆರ್ಯನ್.

ಈ ಯುವಕ, ಸದ್ಯ ಹರಿಯಾಣದ ಅಶೋಕ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಬಿಎಸ್ಸಿ ಓದುತ್ತಿದ್ದಾನೆ. 2018 ರಲ್ಲಿ ಸ್ಪಾರ್ಕ್ ಖಗೋಳಶಾಸ್ತ್ರ ಪ್ರಯೋಗಾಲಯವನ್ನು ಸ್ಥಾಪನೆ ಮಾಡಿರುವ ಈತ, ಖಗೋಳ ವಿಜ್ಞಾನದ ಕುರಿತು ಮಕ್ಕಳಲ್ಲಿ ಕುತೂಹಲವನ್ನು, ಆಸಕ್ತಿಯನ್ನು ಹುಟ್ಟುಹಾಕುವಂತೆ ಮಾಡಿದ್ದಾನೆ. ಈ ಮೂಲಕ ಇಂಥದ್ದೊಂದು ಪ್ರಯೋಗಾಲಯ ಸ್ಥಾಪನೆ ಮಾಡಿರುವ ಕಿರಿಯ ಎಂಬ ಬಿರುದನ್ನೂ ಮುಡಿಲೇರಿಸಿಕೊಂಡಿದ್ದಾನೆ.

ತಾನು ಬಾಲ್ಯದಲ್ಲಿ ಖಗೋಳ ವಿಜ್ಞಾನದ ಕುರಿತು ಕಂಡ ಕನಸು ನನಸಾಗಿಸಿಕೊಳ್ಳಲು ಪಟ್ಟ ಕಷ್ಟ ಇಂದಿನ ಮಕ್ಕಳಿಗೆ ಬಾರದಿರಲಿ ಎಂಬ ಕಾರಣಕ್ಕೆ ಮಕ್ಕಳಿಗಾಗಿ ಕಡಿಮೆ ವೆಚ್ಚದಲ್ಲಿ, ಉತ್ತಮ ಗುಣಮಟ್ಟದ ಸಲಕರಣೆಗಳೊಂದಿಗೆ ಇಲ್ಲಿ ಖಗೋಳ ವಿಜ್ಞಾನವನ್ನು ಹೇಳಿಕೊಡಲಾಗುತ್ತದೆ. ಇಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ 50 ಬಗೆಯ ಚಟುವಟಿಕೆಗಳನ್ನು ಇಲ್ಲಿ ನಡೆಸಲಾಗುತ್ತದೆ.

ಇಲ್ಲಿ ಕಲಿಯಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗಾಗಿ ವಿಶೇಷ ಪಠ್ಯಕ್ರಮಗಳನ್ನು ರೂಪಿಸಲಾಗಿದೆ. ಜತೆಗೆ ವಿವಿಧ ಶಿಕ್ಷಕರು ಇಲ್ಲಿ ತರಬೇತಿ ನೀಡುತ್ತಾರೆ. ಕೆಲವು ಶಾಲೆಗಳು ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದಂತೆ ಈ ಸಂಸ್ಥೆಯ ಜತೆ ಟೈ ಅಪ್ ಮಾಡಿಕೊಂಡಿದೆ. ಪ್ರತಿ ಶಾಲೆಯು -ಠಿ; 3 ಲಕ್ಷ ಪಾವತಿಸುತ್ತದೆ. ಇದು ಬೇರೆಯ ಸಂಸ್ಥೆಗಳಿಗೆ ಹೋಲಿಸಿದರೆ ತೀರಾ ಕಡಿಮೆ ಮೊತ್ತ ಎನ್ನಲಾಗಿದೆ. ಸರ್ಕಾರಿ ಶಾಲೆಗಳ ಮಕ್ಕಳಿಗೂ ಇದರಿಂದ ಪ್ರಯೋಜನ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಆರ್ಯನ್ ಇನ್ನೂ ಹೆಚ್ಚಿನ ಕಾರ್ಯಪ್ರವೃತ್ತರಾಗಿದ್ದಾರೆ.

ಹೀಗೆ, 14 ನೇ ವಯಸ್ಸಿಗೆ ಕ್ಷುದ್ರಗ್ರಹವನ್ನು ಕಂಡುಹಿಡಿದ, 19 ನೇವಯಸ್ಸಿಗೆ ಮಕ್ಕಳಿಗಾಗಿ ಪ್ರಯೋಗಾಲಯವನ್ನು ಪ್ರಾರಂಭಿಸಿರುವ ಆರ್ಯನ್, ಮುಂದೆ ಪೈಲೈಟ್ ಅಥವಾ ಖಗೋಳ ವಿಜ್ಞಾನದಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮಾಡುವ ಕನಸನ್ನು ಕಟ್ಟಿಕೊಂಡಿದ್ದಾರೆ.

‘ದಿನಪತ್ರಿಕೆಗಳನ್ನು ಮಾರುತ್ತಿದ್ದ ಬಡ ಕುಟುಂಬದ ಹುಡುಗ, ಭಾರತದ ಮಿಸೈಲ್ ಮ್ಯಾನ್ (ಅಬ್ದುಲ್ ಕಲಾಂ) ಆಗಲು, ತಮಿಳುನಾಡಿನ ಸಾಮಾನ್ಯ ಕುಟುಂಬದ ಕೃಷಿ ಕುಟುಂಬದಿಂದ ಬಂದ ಶಿವನ್ ಅವರು ಇಸ್ರೋದ ಅಧ್ಯಕ್ಷರಾಗಲು ಸಾಧ್ಯವಿರುವಾಗ ನಾನ್ಯಾಕೆ ಇನ್ನೂ ಹೆಚ್ಚಿನ ಅಧ್ಯಯನ ಮಾಡಿ ಉನ್ನತ ಸ್ಥಾನಕ್ಕೆ ಏರಬಾರದು ಎನ್ನಿಸಿತ್ತು. ಇವರಿಬ್ಬರೂ ನನಗೆ ಸ್ಪೂರ್ತಿ ಎನ್ನುತ್ತಾನೆ ಆರ್ಯನ್.

ಕೇಂದ್ರ ಸರ್ಕಾರದ ಚಿಂತನೆ

ಕೇಂದ್ರ ಸರ್ಕಾರವು ಕೇಂದ್ರೀಯ ವಿದ್ಯಾಲಯ ಮತ್ತು ಜವಾಹರ ನವೋದಯ ವಿದ್ಯಾಲಯಗಳಲ್ಲಿ ಖಗೋಳವಿಜ್ಞಾನ ಪ್ರಯೋಗಾಲಯಗಳನ್ನು ನಿರ್ವಿುಸಲು ಯೋಜನೆ ರೂಪಿಸುತ್ತಿದೆ. ಖಗೋಳಕ್ಕೆ ಸಂಬಂಧಿಸಿದಂತೆ ಆರ್ಯನ್ ಸ್ಥಾಪನೆ ಮಾಡಿರುವ ವಿಜ್ಞಾನ ಪ್ರಯೋಗಾಲಯ ಹಾಗೂ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಈತ ಮಾಡಿರುವ ಸಾಧನೆ ಕಂಡಿರುವ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ ವಿಜಯರಾಘವನ್, ಈ ಪ್ರಯೋಗಾಲಯವನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ತರುವ ಕುರಿತು ಚಿಂತನೆ ನಡೆಸಿದ್ದಾರೆ.

| ಸುಚೇತನಾ 

ವಿಡಿಯೋ ನ್ಯೂಸ್

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...